ಮೇ1ರಿಂದ ಕೊಂಕಣ ಹೊಸ ರೈಲು
ಮಂಗಳೂರು: ಕೊಂಕಣ ಮಾರ್ಗದಲ್ಲಿ ಕೊಂಕಣ ರೇಲ್ವೆ ತಿರುನ್ವೇಲಿ-ದಾದರ್ ಮಧ್ಯೆ ಹೊಸ ಸಾಪ್ತಾಹಿಕ ರೈಲು ಸಂಚಾರ ಮೇ 1ರಿಂದ ಆರಂಭಿಸಲಿದೆ. ನಂ.22629/22630 ರೈಲು ಪ್ರತಿ ಬುಧವಾರ ತಿರುನ್ವೇಲಿ-ದಾದರ್ ಮಧ್ಯೆ ಹಾಗೂ ನಂ.22630/22629 ರೈಲು ಮೇ 3ರಿಂದ ಶುಕ್ರವಾರ ದಾದರ್ನಿಂದ ಸಂಚರಿಸಲಿದೆ. ಥಾಣೆ, ಪನ್ವೇಲ್, ರೋಹಾ, ಚಿಪ್ಲೂನ್, ರತ್ನಗಿರಿ, ಕನಕವಲ್ಲಿ, ತಿವಿಮ್, ಮಡ್ಗಾಂವ್, ಕಾರವಾರ, ಹೊನ್ನಾವರ, ಉಡುಪಿ, ತೋಕೂರು, ಮಂಗಳೂರು ಜಂಕ್ಷನ್, ಕಣ್ಣೂರು, ಕೋಯಿಕ್ಕೋಡು, ಶೋರ್ನೂರು, ಪಾಲಕ್ಕಾಡ್, ಕೊಯಂಬತ್ತೂರು, ತ್ರಿಪುರಾ, ಈರೋಡ್, ದಿಂಡಿಗಲ್, ಮಧುರೈ, ವಿರುಧ್ನಗರ್ ಮತ್ತು ಕೊವಿಲ್ಪಟ್ಟಿ. 16 ಕೋಚ್ ಒಳಗೊಂಡಿದೆ.
ಎದೆನೋವಿನಿಂದ ಕುಸಿದು ವ್ಯಕ್ತಿ ಸಾವು
ಉಡುಪಿ: ಎದೆನೋವಿನಿಂದ ಕುಸಿದು ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬೊಮ್ಮರಬೆಟ್ಟು ಗ್ರಾಮದ ಮಂಜೊಟ್ಟಿ ಎಂಬಲ್ಲಿ ಮಂಗಳವಾರ ನಡೆದಿದೆ. ನಿಟ್ಟೂರಿನ ಅನುಗೃಹ ನಿಲಯದ ನಿವಾಸಿ ಜಯಕರ ಶೆಟ್ಟಿ (52) ಮೃತರು. ಇವರು ಬೊಮ್ಮರಬೆಟ್ಟು ಗ್ರಾಮದ ಮಂಜೊಟ್ಟಿ ಎಂಬಲ್ಲಿನ ಪ್ರದೀಪ ಶೆಟ್ಟಿ ಮನೆಯಲ್ಲಿ ದೈವದ ಕೆಲಸಕ್ಕೆ ಹೋದವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದವರನ್ನು ಹಿರಿಯಡಕದ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಜಯಕರ ಶೆಟ್ಟಿ ಅವರ ಮೃತದೇಹವನ್ನು ಉಡುಪಿ ಶವಾಗಾರದಲ್ಲಿರಿಸಲಾಗಿದೆ ಎಂಬುದಾಗಿ ಅಜಿತಿ ಜ.ೆ ಶೆಟ್ಟಿ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಹಿಳೆ ನಾಪತ್ತೆ: ದೂರು
ಪಡುಬಿದ್ರಿ: ಇಲ್ಲಿನ ನಡ್ಸಾಲು ಗ್ರಾಮದ ಬಿತ್ಲು ಮನೆಯ ಮಹಿಳೆನಾಪತ್ತೆಯಾದ ಪ್ರಕರಣ ಶುಕ್ರವಾರ ವರದಿಯಾಗಿದೆ. ನಾಪತ್ತೆಯಾದವರು ಜಲಜ ಸೆಡ್ತಿ (65). ಇವರು ಯಾವುದೋ ಕಾರ್ಯ ನಿಮಿತ್ತ ಮನೆಯಿಂದ ಹೋರಗೆ ಹೋದವರು ಇದುವರೆಗೂ ವಾಪಾಸ್ಸು ಬಾರದೆ ಕಾಣೆಯಾಗಿದ್ದಾರೆ ಎಂಬುದಾಗಿ ವಿಜಯ ಶೆಟ್ಟಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

