232 ಮತಗಟ್ಟೆ, 1,93,723 ಮತದಾರರು
ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,93,723 ಮತದಾರರಿದ್ದು, 232 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಚುನಾವಣಾಧಿಕಾರಿ ಯೋಗೀಶ್ ತಿಳಿಸಿದರು.
ಅವರು ಗುರುವಾರ ಇಲ್ಲಿನ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾಹಿತಿ ನೀಡಿ, 98,463 ಪುರುಷರು, 95,260 ಮಹಿಳಾ ಮತದಾರರಿದ್ದಾರೆ. ಕ್ಷೇತ್ರದಲ್ಲಿ 232 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 48 ಸೂಕ್ಷ್ಮ, 25 ಅತೀಸೂಕ್ಷ್ಮ, 44 ನಕ್ಸಲ್ಸ್ ಕ್ರಿಯ ಮತಗಟ್ಟೆಗಳು, 42 ವಲ್ನರಬಲ್ (ಆಮಿಷಗಳಿಗೆ ಬಲಿಯಾಗುವ ಪ್ರದೇಶ) ಮತಗಟ್ಟೆಗಳು ಹಾಗೂ 73 ಸಾಮಾನ್ಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತಗಟ್ಟೆಗಳಿಗೆ ವೀಡಿಯೋ ಕೆಮರಾ, ವೆಬ್ ಕೆಮರಾ ಹಾಗೂ ಮೈಕ್ರೋ ಒಬ್ಸರ್ವರ್ ನ್ನೇಮಿಸಲಾಗಿದೆ. ಜಗದೀಶ್ ಪಾಟೀಲ್ ಸಾಮಾನ್ಯ ವೀಕ್ಷಕರಾಗಿದ್ದು, ವಿನೀಶ್ ಚೌಧರಿ ಖರ್ಚುವೆಚ್ಚಗಳ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಮೂವರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸೆಕ್ಟರ್ ಮಾಜಿಸ್ಟ್ರೇಟ್ ಆಗಿ ನೇಮಿಸಲಾಗಿದೆ. 23 ಸೆಕ್ಟರ್ ಮಾಡಿ 23 ಮಂದಿ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಿಪಿಎಂಎಫ್ ಮತ್ತು ಬಿಎಸ್‌ಎಫ್‌ನ 600 ಮಂದಿ ಯೋಧರು ಕರ್ತವ್ಯಕ್ಕೆ ಬಂದಿದ್ದು, ಕರ್ತವ್ಯದಲ್ಲಿದ್ದಾರೆ. ಹೊರ ತಾಲೂಕಿನಿಂದ ಬರುವ ಮತಗಟ್ಟೆ ಅಧಿಕಾರಿಗಳಿಗೆ ಏ. 29ರಂದು ತರಬೇತಿ ನಡೆಯಲಿದೆ. ಪ್ರತೀ ಮತಗಟ್ಟೆಗೆ 4 ಮಂದಿ ಅಧಿಕಾರಿಗಳು ನೇಮಕವಾಗಲಿದ್ದು, ಸುಮಾರು 1200 ಮಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು. ಕ್ಷೇತ್ರದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದದ್ದು, ಚಾರ್ಮಾಡಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ರು. 4.51 ಲಕ್ಷ ಹಾಗೂ ಗರ್ಡಾಡಿ ಬಳಿ ದಾಖಲೆ ಇಲ್ಲದ ರು. 2.68 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ತಹಸೀಲ್ದಾರ್ ಶ್ರೀನಿವಾಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪುಟ್ಟಸ್ವಾಮಿ, ಚೆನ್ನಪ್ಪ ಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

