ದಕ್ಷಿಣ ಕನ್ನಡ

'ಬ್ರಾಹ್ಮಣ ಓಟ್‌ಬ್ಯಾಂಕ್ ಅಗತ್ಯ'

Published On :

ಮಂಗಳೂರು: ರಾಜಕೀಯದಲ್ಲಿ ಬ್ರಾಹ್ಮಣರಿಗೆ ಮಾನ್ಯತೆ ಕಡಿಮೆಯಾಗಿದ್ದು, ಓಟು ಬ್ಯಾಂಕ್ ಮೂಲಕ ಬ್ರಾಹ್ಮಣರು ತಮ್ಮ ನಿರ್ಣಾಯಕ ಮತ ತಿಳಿಸಬೇಕಾಗಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಕರೆ ನೀಡಿದರು.
ಭಾನುವಾರ ನಗರದ ಶಾರದಾ ವಿದ್ಯಾಲಯದಲ್ಲಿ ನಡೆದ ವಿಪ್ರ ಸಮಾಗಮ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಣ, ಜಾತಿ ಬಲ ಕಡಿಮೆಯಾದ ಪರಿಣಾಮ ರಾಜಕೀಯವಾಗಿ ಮುಂದುವರಿಯುವ ಬ್ರಾಹ್ಮಣರು ಇಲ್ಲವಾಗಿದ್ದಾರೆ. ಆದ್ದರಿಂದ ಅಧಿಕಾರಯುತವಾಗಿ ಕೆಲಸ ಮಾಡುವ ಐಎಎಸ್, ಕೆಎಎಸ್ ಹುದ್ದೆಗಳ ಸ್ಥಾನ ಪಡೆಯುವಲ್ಲಿ ಶ್ರಮವಹಿಸಬೇಕಾಗಿದೆ. ಬ್ರಾಹ್ಮಣರು ವೈಯಕ್ತಿಕ ಅಭಿಪ್ರಾಯ ಭೇದ ಬಿಟ್ಟು ಸಮಷ್ಟಿ ಹೋರಾಟದಲ್ಲಿ ಒಂದಾಗಬೇಕಿದೆ ಎಂದು ಹೇಳಿದರು.
ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್ ಅವರನ್ನು ಸನ್ಮಾನಿಸಲಾಯಿತು.

ಬೈಕ್- ಬಸ್ ಡಿಕ್ಕಿ: ಸೈನಿಕಗೆ ಗಾಯ
ಪುತ್ತೂರು: ಬೈಕ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಚಲಾಯಿಸುತ್ತಿದ್ದ ಸೈನಿಕರೊಬ್ಬರು ಗಾಯಗೊಂಡ ಘಟನೆ ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿ ಕೋಡಿಂಬಾಡಿ ಸಮೀಪದ ಬೆಳ್ಳಿಪ್ಪಾಡಿ ಕ್ರಾಸ್ ಬಳಿ ಶನಿವಾರ ನಡೆದಿದೆ. ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ಸಮೀಪದ ನಡುತೋಟ ನಿವಾಸಿ, ಸೈನಿಕ ಸೋಮಶೇಖರ್ (28) ಗಾಯಗೊಂಡವರು. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.