ದಕ್ಷಿಣ ಕನ್ನಡ

ಗೋ ವಿರೋಧಿ ಸರ್ಕಾರ: ಆರೋಪ

Published On :

ಮಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಗೋವುಗಳ ಕಳ್ಳತನ, ದರೋಡೆ ಹೆಚ್ಚಿದೆ. ಗೋವುಗಳ ಸಂಖ್ಯೆ 2007ರಲ್ಲಿ 4.12 ಲಕ್ಷ ಇತ್ತು. 2012ಕ್ಕೆ ಇದರ ಸಂಖ್ಯೆ 2.58 ಲಕ್ಷ. ಗೋವುಗಳ ಸಂಖ್ಯೆ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿದೆ. ಕುರಿ ಸಾಕಣೆ, ಕೋಳಿ ಸಾಕಣೆ ಬಗ್ಗೆಯೂ ರಾಜ್ಯ ಸರ್ಕಾರ ಮಂಡಳಿ ಮಾಡುತ್ತಿದೆ. ಗೋ ಸಂರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ಗೋಸೇವಾ ಆಯೋಗ ಅಧ್ಯಕ್ಷ ಎಂ.ಬಿ. ಪುರಾಣಿಕ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
 ದನಗಳನ್ನು ಬಯಲಲ್ಲಿ ಮೇಯಲು ಬಿಡುವ ಪರಿಸ್ಥಿತಿಯೇ ಇಲ್ಲ. ಮೇಯಲು ಬಿಟ್ಟ ಪಜೀರು ಗೋವನಿತಾಶ್ರಮದ 7 ಗೋವುಗಳನ್ನು ಕದ್ದೊಯ್ಯಲಾಗಿದೆ. ಹೀಗಾಗಿ ಕೊಟ್ಟಿಗೆಯಲ್ಲಿ ಬಂಧನದಲ್ಲಿ ಇಡುವ ಪರಿಸ್ಥಿತಿ ಇದೆ. 1998ರಲ್ಲಿ ಗೋ ಕಳವು ಹೆಚ್ಚಿ ಮಂಗಳೂರು ಗಲಭೆ, ಕರ್ಫ್ಯೂನಿಂದ ಬೆಂದು ಹೋಗಿತ್ತು ಎಂಬುದನ್ನು ಮರೆಯಬಾರದು ಎಂದರು.  ಸುದ್ದಿಗೋಷ್ಠಿಯಲ್ಲಿ ಬಜರಂಗದಳ ವಿಭಾಗ ಸಂಚಾಲಕ ಶರಣ್ ಪಂಪ್‌ವೆಲ್, ಭುಜಂಗ ಕುಲಾಲ್, ಗೋಪಾಲ ಕುತ್ತಾರ್, ಗೋರಕ್ಷ ಪ್ರಮುಖರಾದ ದಿನೇಶ್ ಪೈ, ಪ್ರದೀಪ್ ಪಂಪ್‌ವೆಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.