ದಕ್ಷಿಣ ಕನ್ನಡ

ಜಿಲ್ಲಾದ್ಯಂತ ರಂಜಾನ್ ಸಂಭ್ರಮ

Published On :

ಮಂಗಳೂರು: ಮಂಗಳೂರಲ್ಲಿ ಮುಸ್ಲಿಂ ಬಾಂಧವರಿಗೆ ಗುರುವಾರ ಈದುಲ್ ಫಿತ್ರ್(ರಂಜಾನ್) ಹಬ್ಬದ ಸಂಭ್ರಮ. ಪುರುಷರಿಂದ ಮುಂಜಾನೆ ಮಸೀದಿ ಮತ್ತು ಈದ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ ಮೂಲಕ ಅಲ್ಲಾಹ್‌ನ ಸ್ಮರಣೆ. ಹೊಸ ಬಟ್ಟೆ ಧರಿಸಿ, ಸಿಹಿತಿಂಡಿ ಹಂಚಿ, ಹಸ್ತಲಾಘವ ಮತ್ತು ಆಲಿಂಗನದ ಮೂಲಕ ಶುಭಾಶಯ ವಿನಿಮಯ. ಇದು ನಗರದಲ್ಲಿ ಕಂಡು ಬಂದ ದೃಶ್ಯಗಳು.
 ಒಂದೆಡೆ ಹಬ್ಬದ ಸಂಭ್ರಮವಾದರೆ ಮತ್ತೊಂದೆಡೆ ನಗರದಲ್ಲಿ ಅರ್ಧ ಭಾಗ ಅಂಗಡಿಗಳು ಮುಚ್ಚಿದ್ದವು. ಬೀದಿಬದಿ ವ್ಯಾಪಾರ, ಮೀನು ವ್ಯಾಪಾರ, ಅಂಗಡಿಗಳು ಮುಚ್ಚಿದ್ದವು.
 ಬಿಳಿ ವಸ್ತ್ರಧಾರಿಗಳಾಗಿ ಆಗಮಿಸಿದ ಮುಸ್ಲಿಂ ಬಾಂಧವರು ತಮ್ಮ ಸಮೀಪದ ಮಸೀದಿಗೆ ತೆರಳಿ ನಮಾಜ್ ಸಲ್ಲಿಸುವ ದೃಶ್ಯ ಎಲ್ಲೆಡೆ ಕಂಡು ಬಂತು. ಕೆಲವೆಡೆ ಸಾರ್ವಜನಿಕರಿಗೆ ಸಿಹಿ ತಿಂಡಿ ವಿತರಿಸುವ ಶುಭಾಶಯ ಸಲ್ಲಿಸುತ್ತಿದ್ದರು.  ಜಿಲ್ಲೆಯಲ್ಲಿ ಒಟ್ಟು 1 ಸಾವಿರಕ್ಕೂ ಅಧಿಕ ಮಸೀದಿಗಳಿದ್ದು, ಬಂದರಿನ ಝೀನತ್ ಭಕ್ಷ್ ಮಸೀದಿ ಅತ್ಯಂತ ಪುರಾತನವಾದದ್ದು. ಸ್ಟೇಟ್‌ಬ್ಯಾಂಕ್‌ನ ಸಲಫಿ ಮಸೀದಿಯಲ್ಲಿ ಮಹಿಳೆಯರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.
 ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮುಂಜಾನೆ ಬಾವುಟಗುಡ್ಡೆ ಮಸೀದಿಗೆ ಆಗಮಿಸಿ ನಮಾಜ್ ಸಲ್ಲಿಸಿದರು. ಬಾಂಧವರನ್ನು ಆಲಂಗಿಸಿ, ಹಸ್ತಲಾಘವ ಮೂಲಕ ಶುಭಾಶಯ ವಿನಿಮಯ ಮಾಡಿದರು.
ಉಳ್ಳಾಲ ದರ್ಗಾದಲ್ಲಿ ನೂರಾರು ಮುಸ್ಲಿಂ ಬಾಂಧವರು ಆಗಮಿಸಿ ಝೀಯತ್ (ಪುಣ್ಯಾತ್ಮರ ಪ್ರಾರ್ಥನೆ) ಸಲ್ಲಿಸಿದರು.
ಪುತ್ತೂರು ವರದಿ: ತಾಲೂಕಿನಾದ್ಯಂತ ರಂಜಾನ್ ಹಬ್ಬವನ್ನು ಗುರುವಾರ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು.
ಪ್ರಮುಖ ಮಸೀದಿಗಳಾದ ಪುತ್ತೂರು ನಗರದ ಕೇಂದ್ರ ಜುಮ್ಮಾ ಮಸೀದಿ, ಬದ್ರಿಯಾ ಜುಮ್ಮಾ ಮಸೀದಿ, ಸಾಲ್ಮರ ಸೈಯದ್ ಮಲೆ ಮಸೀದಿ, ಕುಂಬ್ರ ಬದ್ರಿಯಾ ಜುಮ್ಮಾ ಮಸೀದಿ, ಮಾಡನ್ನೂರು ಜುಮ್ಮಾ ಮಸೀದಿ, ಬೈತ್ತಡ್ಕ ಜುಮ್ಮಾ ಮಸೀದಿ, ಚಾಪಳ್ಳ ಜುಮ್ಮಾ ಮಸೀದಿ, ಈಶ್ವರಮಂಗಲ ಜುಮ್ಮಾ ಮಸೀದಿ ಸೇರಿದಂತೆ ತಾಲೂಕಿನ ಎಲ್ಲ ಮಸೀದಿಗಳಲ್ಲಿ ರಂಝಾನ್ ಪ್ರಯುಕ್ತ ವಿಶೇಷ ನಮಾಝ್ ನಡೆಸಲಾಯಿತು.
ಸುಳ್ಯ ವರದಿ: ತಾಲೂಕಿನಾದ್ಯಂತ ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ಪವಿತ್ರ ರಂಜಾನ್ ತಿಂಗಳ ಕೊನೆಯ ಈದುಲ್ ಫಿತರ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಗಾಂಧಿನಗರ ಕೇಂದ್ರ ಜುಮ್ಮ ಮಸೀದಿ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ಮಲ್ನಾಡ್, ನಗರ ಪಂಚಾಯಿತಿ ಸದಸ್ಯರಾದ ಕೆ.ಎಂ. ಮುಸ್ತಾಫ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಐ, ಇಸ್ಮಾಯಿಲ್, ಅನ್ಸಾರಿಯ ಅನಾಥಾಲಯದ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಕಟ್ಟೆಕಾರ್ಸ್, ಅಧ್ಯಕ್ಷರಾದ ಹಮೀದ್ ಜನತಾ ಇದ್ದರು. ನಮಾಜಿನ ನಂತರ ಪರಸ್ಪರ ಆಲಿಂಗನದೊಂದಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.