ದಕ್ಷಿಣ ಕನ್ನಡ

ಮೌರ್ಯ ಡೆವಲಪರ್ಸ್ ಉದ್ಘಾಟನೆ

Published On :

ಬೆಳ್ತಂಗಡಿ: ಸಮರ್ಪಣಾ ಮನೋಭಾವದ ಸೇವೆಯಲ್ಲಿ ಧನ್ಯತೆ ಇದೆ ಎಂದು ಮೊಗರ್ನಾಡಿನ ವೇ.ಮೂ.ಜನಾರ್ದನ ವಾಸುದೇವ ಭಟ್ ಹೇಳಿದ್ದಾರೆ.
ಸೋಮವಾರ ಗುರುವಾಯನಕೆರೆ ಸಸ್ಯೋದ್ಯಾನದ ಇಂಚರದಲ್ಲಿ 'ಮೌರ್ಯ ಡೆವೆಲಪರ್ಸ್‌' ಉದ್ಘಾಟಿಸಿ ಮತ್ತು ಸಂಸ್ಥೆಯ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಡೆವಲಪರ್ಸ್ ಮಾಲೀಕ ಸೋಮನಾಥ ನಾಯಕ್ ಮಾತನಾಡಿ, ಮಧ್ಯಮ ಕೆಳ ಮಧ್ಯಮ ವರ್ಗದವರಿಗೆ ಮನೆಗಳ ರಚನೆ, ಮಾರಾಟ, ಮನೆ ನಿವೇಶನಗಳ ರಚನೆ, ಸೈಟುಗಳ ಮಾರಾಟದ ಉದ್ದೇಶ ಸಂಸ್ಥೆಯದು. ವಾಸ್ತುವಿನ ಮೂಲ ಕಲ್ಪನೆಯ ಪ್ರಕಾರ ಮನೆಗಳು ರಚನೆಗೊಳ್ಳಲಿವೆ ಎಂದರು.
ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಉದ್ಯಮಿ ರಮಾನಂದ ಸಾಲಿಯಾನ್, ಮೌರ್ಯ ಡೆವೆಲಪರ್ಸ್ ಸಂಸ್ಥೆಯ ರಂಜನ್ ರಾವ್ ಯರ್ಡೂರು, ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಕಾಸರಗೋಡು, ವಿದ್ಯಾ ಎಸ್. ನಾಯಕ್, ಚೈತ್ರಾ ನಾಯಕ್, ಚೈತನ್ಯಾ ನಾಯಕ್, ವಿಜಿಲೆನ್ಸ್ ಎಸ್.ಪಿ.ಹರಿಶ್ಚಂದ್ರ, ಚಿತ್ರಾವತಿ ಹರಿಶ್ಚಂದ್ರ, ಎಂಜಿನಿಯರ್ ಉಜಿರೆ ಎಸ್.ಎಲ್.ವಿ.ಯ ಸಂಪತ್ ರತ್ನ ರಾವ್, ರೈಟರ್ ದಯಾನಂದ ಇದ್ದರು.
ವಿಶೇಷತೆ: ಗುರುವಾಯನಕೆರೆ-ಕಾರ್ಕಳ ರಾಜ್ಯ ಹೆದ್ದಾರಿಯ ಸಸ್ಯೋದ್ಯಾನದಲ್ಲಿರುವ ನಾಗರಿಕ ಸೇವಾ ಟ್ರಸ್ಟ್ ಕಚೇರಿ ಸನಿಹ 8 ಫ್ಲಾಟ್‌ಗಳ ಸಮೃದ್ಧಿ ಕಟ್ಟಡ ರಚನೆಯಾಗುತ್ತಿದೆ.
5 ರಿಂದ 10 ಸೆಂಟ್ಸ್‌ನ ಭೂ ಪರಿವರ್ತನೆಯಾದ 60 ಸೈಟುಗಳು ಇಲ್ಲಿ ಲಭ್ಯವಿದೆ. 4 ಮಹಡಿಗಳ 16 ಫ್ಲಾಟ್‌ಗಳ ಸರೋವರ ಕಟ್ಟಡ ರಚನೆಯಾಗಲಿದೆ.
ಸಸ್ಯೋದ್ಯಾನದಲ್ಲಿ ಒಂಟಿ ಮನೆಗಳನ್ನು, ಫ್ಲಾಟ್‌ಗಳನ್ನು ಅಗತ್ಯಾನುಸಾರ ರಚಿಸಿ ಮಾರಲಾಗುವುದು. ಖರೀದಿದಾರರ ಆಯ್ಕೆಯ ಮನೆಯನ್ನು ಸಂಸ್ಥೆಯೇ ರಚಿಸಿ ಕೊಡುವ ಯೋಜನೆಯೂ ಇಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.