ಎಂ.ಜಿ.ಹೆಗಡೆ ಕೃತಿ ಅನಾವರಣ
ಮಂಗಳೂರು: ಶಿಕ್ಷಣ, ರಾಜಕೀಯ, ಸಾಹಿತ್ಯ ರಂಗದಲ್ಲಿ ಸೇವೆ ಸಲ್ಲಿಸಿದ ಎಂ.ಜಿ.ಹೆಗಡೆ ಮುಂದೆ ನಿರ್ದಿಷ್ಟ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಉತ್ತಮ ಹೆಸರು ಪಡೆಯಬೇಕು ಎಂದು ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಹೇಳಿದ್ದಾರೆ.
ಎಂ.ಜಿ.ಹೆಗಡೆ ಅಭಿನಂದನಾ ಸಮಿತಿ ಮಂಗಳವಾರ ನಗರದ ಪುರಭವನದಲ್ಲಿ ಏರ್ಪಡಿಸಿದ ಎಂ.ಜಿ.ಹೆಗಡೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಂ.ಜಿ.ಹೆಗಡೆ ಛಲವಾದಿಯಾಗಿದ್ದು, ಎಂದಿಗೂ ಎದೆಗುಂದಿದವರಲ್ಲ. ಅವರ ವಾಕ್ಚಾತುರ್ಯ, ತತ್ವಸಿದ್ಧಾಂತಕ್ಕಾಗಿ ವಿರೋಧ, ರಾಜಿ ಮನೋಭಾವ ಅವರನ್ನು ಎತ್ತರಕ್ಕೆ ಏರಿಸಿದೆ. ಮೊದಲ ಬಾರಿಗೆ ಮಿಫ್ಟ್ ಕಾಲೇಜಿನಲ್ಲಿ ಫ್ಯಾಶನ್ ಡಿಸೈನ್, ಪತ್ತೇದಾರಿ ಕೋರ್ಸ್ ಪ್ರಾರಂಭಿಸಿದ ಅವರು, ಉದಾತ್ತ ಮನೋಭಾವದ ವ್ಯಕ್ತಿತ್ವ ಹೊಂದಿದವರು ಎಂದು ಶ್ಲಾಘಿಸಿದರು.
ಈ ಸಂದರ್ಭ ಎಂ.ಜಿ.ಹೆಗಡೆ ಬರೆದ 'ನಾಲ್ಕು ಮುಖ ನಾಲ್ಕು ಕತೆ' ಕೃತಿಯನ್ನು ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಡಾ.ಪಿ.ಎಸ್.ಯಡಪಡಿತ್ತಾಯ, 'ನೊಣ ಮುತ್ತಿಕೊಳ್ಳುವುದು ಸಿದ್ಧಾಂತಕ್ಕಲ್ಲ' ಕೃತಿಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು, 'ಜೀವನದಿ' ಕವನ ಸಂಕಲನವನ್ನು ಗಣೇಶ್ ರಾವ್ ಬಿಡುಗಡೆಗೊಳಿಸಿದರು.
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ವಿಶ್ರಾಂತ ಮುಖ್ಯಸ್ಥ ಡಾ.ತಾಳ್ತಜೆ ವಸಂತ ಕುಮಾರ್ ಕೃತಿಗಳ ಕುರಿತು ಮಾತನಾಡಿದರು. ಶೈಕ್ಷಣಿಕ ಸಾಧನೆಗಾಗಿ ಮಿಫ್ಟ್ ಕಾಲೇಜು ನಿರ್ದೇಶಕ ಎಂ.ಜಿ.ಹೆಗಡೆ ದಂಪತಿಯನ್ನು ಅಭಿನಂದಿಸಲಾಯಿತು.
ಸಾಮಾಜಿಕ ಕಾರ್ಯಕರ್ತರಾದ ಹರಿಕೃಷ್ಣ ಬಂಟ್ವಾಳ, ಸುರೇಶ್ ಬಲ್ಲಾಳ್, ರಾಮಚಂದರ್ ಬೈಕಂಪಾಡಿ, ನಿವೃತ್ತ ಉಪನ್ಯಾಸಕ ಮನೋಹರ ತುಳಜಾರಾಮ್, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ, ಸಮತಾ ಮಹಿಳಾ ಬಳಗ ಅಧ್ಯಕ್ಷೆ ಪೂರ್ಣಿಮಾ ಪೇಜಾವರ ಹಾಜರಿದ್ದರು.
ಸಂಘಟಕ ಕೇಶವ ಹೆಗಡೆ ಸ್ವಾಗತಿಸಿ, ಮಿಫ್ಟ್ ಕಾಲೇಜು ಪ್ರಾಚಾರ್ಯ ಚಂದ್ರಲೇಖಾ ಗೌಡ ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

