ಲೈಫ್ 360 ಡಿಗ್ರಿ ಬಿಡುಗಡೆ
ಮಂಗಳೂರು: ಇವತ್ತು ಪ್ರಜಾಪ್ರಭುತ್ವ ಉಳಿದಿದ್ದರೆ ಅದರಲ್ಲಿ ಮಾಧ್ಯಮದ ಪಾಲು ಬಹಳ ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.
ಬಿ. ಗಣಪತಿ ಸಂಪಾದಕತ್ವದ 'ಲೈಫ್ 360 ಡಿಗ್ರಿ' ಪಾಕ್ಷಿಕವನ್ನು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಸಮಾಜದ ಕುಂದು ಕೊರತೆಗಳನ್ನು ಎತ್ತಿ ತೋರಿಸುವ ಮಾಧ್ಯಮ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದಂತೆ ಆಧಾರ ಸ್ತಂಭ. ಲೈಫ್ 360 ಡಿಗ್ರಿ ಪತ್ರಿಕೆ ನೋಡಿದಾಗ ಅಹ್ಲಾದ ಮೂಡುತ್ತದೆ ಎಂದರು.
ಸಂಪಾದಕ ಬಿ.ಗಣಪತಿ ಮಾತನಾಡಿ, ವಡ್ಡರ್ಸೆ ರಘುರಾಮ ಶೆಟ್ಟರು ಕೇವಲ ಪತ್ರಿಕೆ ಮಾಡಲಿಲ್ಲ, ಮಾಧ್ಯಮದಲ್ಲಿ ಹೊಸ ಯುಗವನ್ನೇ ಸೃಷ್ಟಿಸಿದರು, ಅವರಿಂದಾಗಿ ಇಂದು ಅನೇಕ ಪ್ರತಿಭೆಗಳು ಮಾಧ್ಯಮದಲ್ಲಿ ಬೆಳಗುತ್ತಿವೆ ಎಂದರು.
ಹೊಸ ಶಕೆ: ವಿಶ್ವೇಶ್ವರ ಭಟ್ಟರು ಲೇಖಕರಿಗೆ ಹೆಚ್ಚಿನ ಮನ್ನಣೆ ನೀಡುವ ಹೊಸ ಶಕೆ ಆರಂಭಿಸಿದರು. ಲೇಖಕರ ಫೋಟೊವನ್ನು ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಮಾಧ್ಯಮ ರಂಗದಲ್ಲಿ ಚರ್ಚೆಗೆ ಕಾರಣರಾದರು ಎಂದು ಬಿ.ಗಣಪತಿ ಹೇಳಿದರು. ತರಂಗ ಸಂಪಾದಕರಾಗಿದ್ದ ಸಂತೋಷ್ ಕುಮಾರ್ ಗುಲ್ವಾಡಿಯವರು ಲೇಖಕರಿಗೆ ಮನ್ನಣೆ ನೀಡುವ ಸಂಪ್ರದಾಯಕ್ಕೆ ಚಾಲನೆ ನೀಡಿದ್ದರು ಎಂದರು.
ಸಾಹಿತಿ ವಿ.ಗ.ನಾಯಕ ಪತ್ರಿಕೆಯ ಶೈಲಿಯನ್ನು ಮೆಚ್ಚಿ ಮಾತನಾಡಿದರು.
ಪತ್ರಕರ್ತರ ಸಂಘ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಡಾ.ಬಿ.ದೇವದಾಸ ರೈ, ಉದ್ಯಮಿ ಕೇಶವ ಆಚಾರ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

