ದಕ್ಷಿಣ ಕನ್ನಡ

ರಾವಣನ ಹಠ ರೂಢಿಸಿ: ವೈದೇಹಿ

Published On :

ವಿದ್ಯಾಗಿರಿ, ಮೂಡುಬಿದಿರೆ: ರಾವಣನ ಹಠ ರೂಢಿಸಿಕೊಳ್ಳಿ. ಆಗ ಮಾತ್ರ ಕಠಿಣ ಸಾಧನೆ ಮಾಡಲು ಸಾಧ್ಯ ಎಂದು ಸಾಹಿತಿ ವೈದೇಹಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಆಳ್ವಾಸ್ ವಿಶ್ವ ನುಡಿಸಿರಿಯಲ್ಲಿ ಶುಕ್ರವಾರ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ವಿದ್ಯಾರ್ಥಿ ಸಿರಿ ಉದ್ಘಾಟನೆ ನಂತರ ಅವರು ಆಶಯ ಭಾಷಣ ಮಾಡಿದರು.
ರಾವಣನ ಕೆಟ್ಟ ಗುಣಗಳೇನೇ ಇರಲಿ, ಆದರೆ ಆತನಲ್ಲಿ ಹಠವಿತ್ತು. ಅಂದುಕೊಂಡಿದ್ದನ್ನು ಪಡೆಯಲೇಬೇಕೆಂಬ ಛಲವಿತ್ತು. ಅದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಇಂದಿನದ್ದು ಗದ್ದಲದ ಜಗತ್ತು. ನಿಮ್ಮನ್ನು ಸೆಳೆಯುವ ಸಾಕಷ್ಟು ಸಂಗತಿಗಳಿವೆ. ನಮ್ಮ ಮಕ್ಕಳ ದೃಷ್ಟಿಯೆಲ್ಲ ಟಿವಿಯತ್ತ ನೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲೂ ಸಾಧನೆ ಮಾಡಬೇಕೆಂದರೆ ಅದಕ್ಕೆ ರಾವಣನ ಹಠ ರೂಢಿಸಿಕೊಳ್ಳಬೇಕು ಎಂದರು.
 ಏನೇ ಕೇಳಿದರೂ ಎಲ್ಲರೂ ಸಮಯವಿಲ್ಲ ಎನ್ನುತ್ತಾರೆ. ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ದಿನವಿಡೀ ಕೆಲಸ ಮಾಡುತ್ತಾರೆ. ಆದರೂ ಅವರು ಕಾವ್ಯ, ಕತೆ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಯ ಎಲ್ಲರಿಗೂ ಸಿಗುತ್ತೆ. ಆದರೆ ಅದನ್ನು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಬೇಕು. ಮನಸ್ಸು ಅದರಲ್ಲಿ ತೊಡಗಬೇಕಾದರೆ ಉತ್ತಮ ಅಭಿರುಚಿ ಬೇಕು. ಎಲ್ಲದರಲ್ಲೂ ಊನ ಹುಡುಕುವ ಮನಸ್ಸು ಇದ್ದರೆ, ಎಲ್ಲದರಲ್ಲೂ ಓರೆಯೇ ಕಾಣುತ್ತದೆ. ಉತ್ತಮವಾದದ್ದನ್ನು ಗ್ರಹಿಸಲು ಉತ್ತಮ ಮನಸ್ಸು ಬೇಕು. ಗ್ರಹಿಕೆಯೇ ತಪ್ಪಾಗಬಾರದು ಎಂದರು.
ವಿಷ ಬೀಜ ಬಿತ್ತುವವರ ಬಗ್ಗೆ ಎಚ್ಚರ: ಜಾತಿ, ಕೋಮು ವಿಷದ ನಡುವೆ ನಮ್ಮ ಗುರುತು ನಮಗೇ ಸಿಗದಂತಾಗಿದೆ. ಮಕ್ಕಳಿದ್ದಾಗ ಇವೆಲ್ಲ ನಮ್ಮ ಅರಿವಿಗೇ ಇರುವುದಿಲ್ಲ. ಆದರೆ ಬೆಳೆಯುತ್ತ ನಮ್ಮ ಮನಸ್ಸಿನಲ್ಲಿ ಇಂತಹ ವಿಷ ಬಿತ್ತುವವರು ಯಾರು ಎಂಬುದನ್ನು ನೀವೇ ಗಮನಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ವೈದೇಹಿ ಕಿವಿಮಾತು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.