ಕ್ರಿಸ್ಮಸ್: ಬಿಷಪ್ ಸಂದೇಶ
ಮಂಗಳೂರು: ಈ ಬಾರಿಯ ಕ್ರಿಸ್ಮಸ್ ಪೋಪ್ ಪ್ರಾನ್ಸಿಸ್ ಸಂದೇಶದಂತೆ ಚರ್ಚ್ಗಳು ಬಡತನದಲ್ಲಿ ಕಷ್ಟ ಪಡುವವರಿಗೆ ಸಹಾಯ ಹಸ್ತ ಚಾಚುವ ಸಂಕಲ್ಪ ಮಾಡುವ ಮೂಲಕ ಆಚರಿಸಲಾಗುವುದು. ಬಡತನ ಹೋಗಲಾಡಿಸಲು ಸಂಕಲ್ಪ ಬದ್ಧ ಹೋರಾಡಲು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಕ್ರಿಸ್ಮಸ್ ಸಂದೇಶ ನೀಡಿದ್ದಾರೆ.
ಬಡತನ ಹೋಗಲಾಡಿಸುವ ಸಂಕಲ್ಪ ಎಲ್ಲ ಧರ್ಮಗಳಲ್ಲಿಯೂ ಇದೆ. ಎಲ್ಲ ಸಮುದಾಯದ ಚಿಂತನೆಯೂ ಅದೇ. ನಾವು ಕ್ರೈಸ್ತರೆಲ್ಲ ಸೇರಿ ಮಾಡುವ ಕೆಲಸಗಳನ್ನು ಮಾಡುತ್ತ ಇತರ ಸಮುದಾಯದ ಜತೆಗೂ ಕೈ ಜೋಡಿಸಲು ಆಲೋಚಿಸುತ್ತಿದ್ದೇವೆ. ಇದರಿಂದ ಬಡವರು ಎಲ್ಲ ಸಮುದಾಯದಲ್ಲಿಯೂ ಗೌರವದಂತೆ ಬದುಕಲು ಸಹಾಯ ಆಗಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ನುಡಿದರು.
ಕ್ರಿಸ್ತ ದೇವರು ಸಾಮಾನ್ಯ ಮಾನವನಾಗಿ ಮನೆಯೇ ಇಲ್ಲದ ಬಡ ಬಡಗಿಯ ಕುಟುಂಬದಲ್ಲಿ ಜನಿಸಿದರು. ಕ್ರಿಸ್ಮಸ್ ಬಡಜನರ ನಡುವೆ, ಬಡಜನರಿಗಾಗಿ, ಬಡಜನರದ್ದು ಎಂದು ಘೋಷವಾಕ್ಯದಂತೆ ಕೆಲಸ ಮಾಡೋಣ. ದೇವರ ರಾಜ್ಯದಲ್ಲಿ ಬಡವರಿಗಾಗಿ ವಿಶೇಷ ಸ್ಥಾನಮಾನವಿದೆ. ನಾವೆಲ್ಲ ಸೇರಿ ದೇವರ ಮಹಿಮೆಗೆ ದುಡಿಯೋಣ.
ಸುದ್ದಿಗೋಷ್ಠಿಯಲ್ಲಿ ಧರ್ಮಪ್ರಾಂತ್ಯ ಪ್ರಧಾನ ಗುರು ಮೊನ್ಸಿಂಜರ್ ಡೆನಿಸ್ ಮೊರಾಸ್ ಪ್ರಭು, ಮಂಗಳೂರು ಧರ್ಮಪ್ರಾಂತ್ಯ ಚಾನ್ಸಲರ್ ರೆ.ಫಾ. ಹೆನ್ರಿ ಸಿಕ್ವೇರ, ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ಮಿನೇಜಸ್, ಮಾರ್ಸೆಲ್ ಮೊಂತೆರೋ, ರೇಮಂಡ್ ಡಿಕುನ್ಹ, ಎಲಿಯಾಸ್ ಫರ್ನಾಂಡಿಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

