ತುಳುನಾಡ ಗೊಬ್ಬುದ ಪಂತೊಲು
ಬಂಟ್ವಾಳ: ಒಡಿಯೂರು ಕ್ಷೇತ್ರ ಆಶ್ರಯದಲ್ಲಿ ನಡೆಯುತ್ತಿರುವ ತುಳುನಾಡ ಜಾತ್ರೆ ಅಂಗವಾಗಿ ಬಂಟ್ವಾಳ ತುಳು ತೇರ್ ಕೂಟದ ಆಶ್ರಯದಲ್ಲಿ 'ತುಳುನಾಡ ಗೊಬ್ಬುದ ಪಂತೊಲು' ಬಿ.ಸಿ.ರೋಡ್ ಅಜ್ಜಿಬೆಟ್ಟು ಶಾಲೆ ಮೈದಾನದಲ್ಲಿ ನಡೆಯಿತು. ಬಿ.ಸಿ.ರೋಡ್ನ ವಕೀಲ ಎಂ.ಅಶ್ವನಿ ಕುಮಾರ್ ರೈ ಉದ್ಘಾಟಿಸಿದರು. ತುಳು ತೇರ್ ಕೂಟ ಅಧ್ಯಕ್ಷ ಎ.ಸಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮಾಜಿ ಶಾಸಕ ಎ.ರುಕ್ಮಯ್ಯ ಪೂಜಾರಿ, ರಾಷ್ಟ್ರೀಯ ಕಬಡ್ಡಿ ಆಟಗಾರ ಬೇಬಿ ಕುಂದರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ನಾಯಕ್, ಮುಖ್ಯೋಪಾಧ್ಯಾಯಿನಿ ಕುಶಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಾಧ್ಯಕ್ಷ ಕೈಯೂರು ನಾರಾಯಣ ಭಟ್, ಸ್ಪರ್ಧಾ ಸಂಚಾಲಕ ಸಂಕಪ್ಪ ಶೆಟ್ಟಿ, ಹೈಸ್ಕೂಲ್ ಶಿಕ್ಷಕಿ ಅನಿತಾ, ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಎ.ನೋಣಯ್ಯ ಪೂಜಾರಿ, ಬಿ.ತಮ್ಮಯ್ಯ, ಮಚ್ಚೇಂದ್ರ ಸಾಲಿಯಾನ್, ದೈಹಿಕ ಶಿಕ್ಷಕ ಐತಪ್ಪ ಪೂಜಾರಿ, ರಂಗ ಕಲಾವಿದ ಮಂಜು ವಿಟ್ಲ ಇದ್ದರು. ಪ್ರಚಾರ ಸಮಿತಿ ಸಂಚಾಲಕ ಡಿ.ಎಂ. ಕುಲಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದೇವಿದಾಸ್ ಶೆಟ್ಟಿ ಪಾಲ್ತಾಜೆ ವಂದಿಸಿದರು. ಶ್ರೀಧರ ಅಮೀನ್ ನಿರೂಪಿಸಿದರು.
ಬೆಳ್ತಂಗಡಿ: ತುಳು ತೇರಿಗೆ ಸ್ವಾಗತ
ಬೆಳ್ತಂಗಡಿ: ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರಿನಿಂದ ಹೊರಟ ವಿಜಯ ರಜತ ಸಂಭ್ರಮ ಮೂಡಾಯಿ ತತೇರು ಬೆಳ್ತಂಗಡಿ ತಾಲೂಕು ಪ್ರವೇಶಿಸಿ ಸೌತಡ್ಕ, ಧರ್ಮಸ್ಥಳ, ಕನ್ಯಾಡಿಯಾಗಿ ಉಜಿರೆ ಪ್ರವೇಶಿಸಿ ತಂಗಿತ್ತು. ಭಾನುವಾರ ಬೆಳಗ್ಗೆ ಅಲ್ಲಿಂದ ಹೊರಟ ರಥವನ್ನು ಬೆಳ್ತಂಗಡಿ ತಾಲೂಕು ಸಮಿತಿ ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ ನೇತೃತ್ವದಲ್ಲಿ ನಗರ ಸಮಿತಿ ಬರಮಾಡಿಕೊಂಡರು. ಬೆಳ್ತಂಗಡಿ ಲಾಯಿಲದ ವೆಂಕಟರಮಣ ದೇವಸ್ಥಾನದ ಬಳಿ ನಗರ ಸಮಿತಿ ಅಧ್ಯಕ್ಷ ರಂಜನ್ ರಾವ್ ಸ್ವಾಗತಿಸಿದರು.
ಜಿಪಂ ಸದಸ್ಯ ಶೈಲೇಶ್ ಕುಮಾರ್, ನಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಡಿ, ನಪಂ ಸದಸ್ಯರಾದ ಮುಗುಳಿ ನಾರಾಯಣರಾವ್, ಸಂತೋಷ್ ಕುಮಾರ್, ತಾಪಂ ಸದಸ್ಯ ಸಂತೋಷ್ ಲಾಯಿಲ, ಎಪಿಎಂಸಿ ಅಧ್ಯಕ್ಷ ಭರತ್ ಕುಮಾರ್, ಲಾಯಿಲ ಗ್ರಾಪಂ ಸದಸ್ಯ ವಸಂತ ರಾಣಿ, ತುಳು ಒಕ್ಕೂಟದ ಅಧ್ಯಕ್ಷ ಶೈಲೇಶ್ ಆರ್.ಜೆ, ಸಂಚಾಲಕ ರಮಾನಂದ ಸಾಲ್ಯಾನ್, ನಗರ ತುಳು ಒಕ್ಕೂಟದ ಅಧ್ಯಕ್ಷ ಜನಾರ್ದನ ಬಂಗೇರ, ಜಯಕರ್ನಾಟಕ ಸಂಘಟನೆ ಉಜಿರೆ ವಲಯ ಅಧ್ಯಕ್ಷ ಜಯಪ್ರಕಾಶ್, ತುಳುತೇರು ಬೆಳ್ತಂಗಡಿ ಕೂಟದ ಅಧ್ಯಕ್ಷ ಜಯರಾಮ ಶೆಟ್ಟಿ ಪಡಂಗಡಿ, ಲಕ್ಷ್ಮಣ ಸಪಲ್ಯ, ತಾಲೂಕು ಸಮಿತಿ ಸಂಚಾಲಕ ರಘುರಾಮ ಶೆಟ್ಟಿ, ಕಾರ್ಯದರ್ಶಿ ರವೀಂದ್ರ ಒಪ್ಪಂತ್ತಾಯ, ಉದ್ಯಮಿ ಬಾಲಕೃಷ್ಣ ಶೆಟ್ಟಿ, ಮಂಜುನಾಥ ರೈ, ಸಂತೋಷ್ ಶೆಟ್ಟಿ ಲಾಯಿಲ ಮೊದಲಾದವರು ಉಪಸ್ಥಿತರಿದ್ದರು.
ಲಾಯಿಲದಿಂದ ಮೆರವಣಿಗೆಯಲ್ಲಿ ರಥ ಎದುರುಗೊಂಡು ಬೆಳ್ತಂಗಡಿ ನಗರವಾಗಿ ಗುರುವಾಯನಕೆರೆ ಮಾರ್ಗವಾಗಿ ಅಳದಂಗಡಿಗೆ ಸಾಗಿತು.
ಜಲದುರ್ಗೆ ದೇವಾಲಯ ಅಸ್ತಿತ್ವ ಪತ್ತೆ
ವಿಟ್ಲ: ಕನ್ಯಾನದ ಕರೋಪಾಡಿ ಗ್ರಾಮದಲ್ಲಿ ಜಲದುರ್ಗೆ ದೇವಾಲಯದ ಕುರುಹು ಪತ್ತೆಯಾಗಿದೆ. ಆನೆಕಲ್ಲು ನದಿ ಸಮೀಪದ ಕೃಷಿ ಭೂಮಿಯಲ್ಲಿ ಮಣ್ಣು ಅಗೆದಾಗ ಇದು ಪತ್ತೆಯಾಯಿತು ಎನ್ನಲಾಗಿದೆ.ಆನೆಕಲ್ಲಿನ ಸೊಡಂಕೂರು, ಮಲಾರು ಮಧ್ಯೆ ಆನೆಕಲ್ಲು ಹೊಳೆಯ ಪಕ್ಕದಲ್ಲಿ ಕೃಷ್ಣ ನಾಯ್ಕ ಎಂಬವರಿಗೆ ಸೇರಿದ ತೋಟದಲ್ಲಿ ಈ ದೇಗುಲದ ಕುರುಹುಗಳು ಪತ್ತೆಯಾಗಿವೆ. ದೇಗುಲದ ಪಂಚಾಂಗದ ಕಲ್ಲು, ಸೋಪಾನಗಳು ಮೇಲ್ಭಾಗದಲ್ಲಿ ಕಂಡುಬಂದಿವೆ. ಪಶ್ಚಿಮಾಭಿಮುಖ ದೇವಸ್ಥಾನವಾಗಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಸ್ಪಷ್ಟವಾಗಿ ಈ ಕುರುಹುಗಳು ಯಾವ ಕಾಲದ್ದೆಂದು ತಿಳಿದು ಬಂದಿಲ್ಲ. ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದುಬಂದ ಪ್ರಕಾರ ಈ ದೇವಸ್ಥಾನ ಸುಮಾರು 300 ವರ್ಷ ಹಳೆಯದೆಂದು ಹೇಳಲಾಗಿದೆ.
ರಾಷ್ಟ್ರಮಟ್ಟಕ್ಕೆ ಆಯ್ಕೆ; ಅಭಿನಂದನೆ
ಉಪ್ಪಿನಂಗಡಿ: ಬಾಗಲಕೋಟೆಯಲ್ಲಿ ಇತ್ತೀಚೆಗೆ ನಡೆದ 21ನೇ ರಾಜ್ಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಹಿರಿಯರ ಮತ್ತು ಕಿರಿಯರ ತಂಡಗಳು ಭಾಗವಹಿಸಿ ಕಿರಿಯರ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಈ ಸಾಧನೆಗಾಗಿ ಕರ್ನಾಟಕ ವಿಜ್ಞಾನ ಪರಿಷತ್, ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಕಡೆಮಜಲು ಸುಭಾಸ್ ರೈ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಕಿರಿಯರ ತಂಡದ ಶ್ರೀಹರ್ಷ ಕೆ., ಚಂದನ್ ಆರ್.ಕೆ., ರಿಶಾ ಕಿರಣ್, ಸಮೀಕ್ಷಾ ಎಸ್. ಶೆಟ್ಟಿ, ವೃಂದಾ ಆರ್. ಪ್ರಭು ಮತ್ತು ಶಿಕ್ಷಕಿ ಅನಿತಾ ಸೀಕ್ವೆರಾ ಇವರನ್ನು ಗೌರವಿಸಲಾಯಿತು.
ಸಂಸದರ ಸಾರ್ವಜನಿಕ
ಕಾರ್ಯಕ್ರಮ ರದ್ದು
ಮಂಗಳೂರು: ಅಡಕೆ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವ ಕ್ರಮದ ವಿರುದ್ಧ ಜ.2ರಂದು ಜಿಲ್ಲೆಯಲ್ಲಿ ಅಡಕೆ ಬೆಳೆಗಾರರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಡಿ.28ರಿಂದ 30ರ ವರೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

