ದಕ್ಷಿಣ ಕನ್ನಡ

ರಶೀದ್ ಮಲಬಾರಿ ಬೆಂಗಳೂರಿಗೆ

Published On :

ಮಂಗಳೂರು: ಶಿವಾಜಿ ನಗರದಲ್ಲಿನ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲು ಬೆಂಗಳೂರು ಪೊಲೀಸರು ಮಂಗಳೂರು ಜೈಲ್‌ನಲ್ಲಿರುವ ವಿಚಾರಣಾಧೀನ ಖೈದಿ ರಶೀದ್ ಮಲಬಾರಿಯನ್ನೆ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
 ಪೊಲೀಸರು ಅರೆಸ್ಟ್ ವಾರಂಟ್ ಹಿಡಿದು ಮಂಗಳೂರು ಜೈಲ್‌ಗೆ ಬಂದಾಗ ಮಲಬಾರಿ ಹೊರಬರಲು ನಿರಾಕರಿಸಿದ. ಪೊಲೀಸರು ಸಾಮಾನ್ಯ ದಿರಿಸಿನಲ್ಲಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಬಂದರೆ ಮಾತ್ರ ಹೋಗುವುದಾಗಿ ಹೇಳಿದ್ದಾನೆ. ಅನಾರೋಗ್ಯವಿದ್ದು ಈ ಸಂದರ್ಭ ಪ್ರಯಾಣ ಮಾಡುವುದಿಲ್ಲ ಎಂದು ಹೇಳಿದಾಗ ಆತನ ಆರೋಗ್ಯ ತಪಾಸಣೆ ನಡೆಸಲಾಗಿದೆ. 'ಶುಕ್ರವಾರ ಮಧ್ಯಾಹ್ನ 12.50ಕ್ಕೆ ಮಂಗಳೂರಿಂದ ಕರೆದೊಯ್ಯಲಾಗಿದೆ. ಫೆ.2ರಂದು ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ' ಜೈಲು ಅಧಿಕಾರಿಗಳು ತಿಳಿಸಿದ್ದಾರೆ.   ಮುಂಬಯಿಯಲ್ಲಿರುವ ರಶೀದ್ ಮಲಬಾರಿ ಪತ್ನಿ ಬುಧವಾರ ಮಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರು ಪೊಲೀಸರು ಕರೆದೊಯ್ಯುವ ಹಿಂದೆ ಸಂಚಿದೆ ಎಂಬುದು ಅವರ ಆರೋಪ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.