ಗುಪ್ತಚರ ಲೆಕ್ಕಾಚಾರ 1.2 ಲಕ್ಷ
ಕೆಂಜಾರು ಮೈದಾನದಲ್ಲಿ ಸಾಂಘಿಕ ಸಮಾವೇಶದಲ್ಲಿ ಪಾಲ್ಗೊಂಡವರ ಸಂಖ್ಯೆ ಪೊಲೀಸ್ ಇಲಾಖೆ ಗುಪ್ತಚರ ವಿಭಾಗದವರ ಪ್ರಕಾರ 1.20 ಲಕ್ಷಕ್ಕಿಂತಲೂ ಹೆಚ್ಚು. 65 ಎಕರೆ ಮೈದಾನ ಪೂರ್ಣ ತುಂಬಿತ್ತು.
ಗಂಟೆಗಟ್ಟಲೆ ಟ್ರಾಫಿಕ್ ಜಾಂ
ಬಜ್ಪೆ ಸಮೀಪದ ಕೆಂಜಾರಿನಲ್ಲಿ ವಿಭಾಗ ಸಾಂಘಿಕ್ಗೆ ಭಾನುವಾರವಾದರೂ ಮಧ್ಯಾಹ್ನ 1.30ಕ್ಕೆ ಟ್ರಾಫಿಕ್ ಜಾಂ ಬಿಸಿ ತಟ್ಟಿತು. ನಗರದ ಕಾವೂರು, ಮರಕಡಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಕೆಂಜಾರು ಕಡೆಗೆ ಹೋಗುವ ವಾಹನಗಳು ಸಾಲುಗಟ್ಟಿ ಸಾಗುತ್ತಿದ್ದರೆ, ಅತ್ತ ಬಜ್ಪೆಯಿಂದ ವಾಹನಗಳು ಒಂದೇ ಮಾರ್ಗದಲ್ಲಿ ಬರುತ್ತಿದ್ದುದರಿಂದ ಸಂಚಾರಕ್ಕೆ ಅಡ್ಡಿಯುಂಟಾಯಿತು. ಅಲ್ಲಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರೆ, ಸಂಘದ ಸ್ವಯಂಸೇವಕರೂ ಸುಗಮ ಸಂಚಾರಕ್ಕೆ ಹರಸಾಹಸ ಪಡುತ್ತಿದ್ದರು. 6 ಬ್ಲಾಕ್ಗಳಲ್ಲಿ ವಾಹನಗಳಿಗೆ 13 ಪಾರ್ಕಿಂಗ್ ಗುರ್ತಿಸಲಾಗಿತ್ತು. ಇದೇ ರೀತಿ ಫರಂಗಿಪೇಟೆ, ಪಂಪ್ವೆಲ್, ತೊಕ್ಕೊಟ್ಟು ಮತ್ತಿತರ ಕಡೆಗಳಲ್ಲಿ ಟ್ರಾಫಿಕ್ ಜಾಂ ಆಗಿನೆ. ಸುಮಾರು 10 ಸಾವಿರದಷ್ಟು ವಾಹನಗಳು ಸಮಾವೇಶಕ್ಕೆ ಸ್ವಯಂಸೇವಕರನ್ನು ಕರೆತಂದಿದ್ದವು. ಭಾನುವಾರ ಹಲವೆಡೆ ಮದುವೆ ಸಮಾರಂಭಕ್ಕೆ ತೆರಳುವವರು ಬಸ್ ಮತ್ತಿತರ ವಾಹನಗಳಿಲ್ಲದೆ ಪರದಾಟ ನಡೆಸಬೇಕಾಯಿತು.
ಎರಡು ಲಕ್ಷ ಚಪಾತಿ ವಿತರಣೆ
ಸಮಾವೇಶಕ್ಕೆ ಆಗಮಿಸಿದ ಬೈಂದೂರಿನಿಂದ ಕುಶಾಲನಗರ ವರೆಗಿನ ದೂರದೂರುಗಳ ಸ್ವಯಂಸೇವಕರಿಗೆ ವಾಪಾಸ್ ತೆರಳುವಾಗ ಚಪಾತಿ ವಿತರಿಸಲಾಯಿತು. ಸುಮಾರು 2 ಲಕ್ಷ ಚಪಾತಿ ಸಿದ್ಧಪಡಿಸಲಾಗಿತ್ತು. ಸಮಾವೇಶಕ್ಕೆ ಆಗಮಿಸಿದ ಸ್ವಯಂಸೇವಕರಿಗೆ ಮಿಠಾಯಿ, ಬನ್ಸ್, ಮಜ್ಜಿಗೆ ಹಾಗೂ ನೀರಿನ ಪ್ಯಾಕೆಟ್ ವಿತರಿಸಲಾಯಿತು.
ಎಲ್ಲೆಲ್ಲೂ ಶಿಸ್ತು, ಅಚ್ಚುಕಟ್ಟು
ವಿಶಾಲ ಮೈದಾನ, ಎಲ್ಲಿ ನೋಡಿದರೂ ಸ್ವಯಂಸೇವಕರ ದಂಡು, ಸ್ವಯಂಸೇವಕ ಗಡಣವನ್ನು ಕುಳ್ಳಿರಿಸಲು ಪ್ರಬಂಧಕರು, ಎಲ್ಲವೂ ಶಿಸ್ತು, ಅಚ್ಚುಕಟ್ಟು. ಮೈದಾನ ಭರ್ತಿಯಾಗಿದ್ದರೂ, ಸದ್ದುಗದ್ದಲ ಇಲ್ಲದೆ ಶಾಂತ ರೀತಿಯಲ್ಲಿ ಸಮಾವೇಶ ಸಂಪನ್ನಗೊಂಡಿತು. ಸಮಾವೇಶದಲ್ಲಿ ಕುಳಿತುಕೊಳ್ಳಲು ಜಾಗ ಸಾಕಾಗದೆ ಸ್ವಯಂಸೇವಕರು ಮೈದಾನ ಸುತ್ತ ನಿಂತುಕೊಂಡು ಕಾರ್ಯಕ್ರಮ ವೀಕ್ಷಿಸಬೇಕಾಯಿತು. ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತು.
90 ಸಾವಿರ ಮಂದಿಗೆ ಊಟ
ಸಮಾವೇಶಕ್ಕೆ ಆಗಮಿಸುವ ಸ್ವಯಂಸೇವಕರಿಗೆ ದಾರಿ ಮಧ್ಯೆ ಮಾಡ, ಕೊಲ್ಯ, ಸ್ವರಾಜ್ ಮೈದಾನ, ಕಾಪು, ಅಂಬಲಪಾಡಿ ದೇವಸ್ಥಾನ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ಪುತ್ತೂರಿನ ತೆಂಕಿಲ ವಿವೇಕಾನಂದ ಹೈಸ್ಕೂಲ್ ಹೀಗೆ 9 ಕೇಂದ್ರಗಳಲ್ಲಿ ಭೋಜನ ಕೇಂದ್ರ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 90 ಸಾವಿರ ಮಂದಿ ಭೋಜನ ಸವಿದಿದ್ದರು. ಮಂಗಳೂರು ಮಹಾನಗರ, ಉಳ್ಳಾಲ, ಗುರುಪುರ, ಪೊಳಲಿ ಪ್ರದೇಶದ ಸ್ವಯಂಸೇವಕರು ತಮ್ಮ ಮನೆಗಳಲ್ಲೇ ಭೋಜನ ಮುಗಿಸಿ ಬಂದಿದ್ದರು.
ಘೋಷ್ ಚಮತ್ಕಾರ, ವ್ಯಾಯಾಮ
ಸಮಾರಂಭಕ್ಕೆ ಮೊದಲು ಗಣವೇಷಧಾರಿ ಘೋಷ್ ಸ್ವಯಂಸೇವಕರಿಂದ ಆಕರ್ಷಕ ಘೋಷ್ ವಾದನ ನೆರವೇರಿತು. ನಂತರ ಸಾಮೂಹಿಕ ಸಾಂಘಿಕ್ ವ್ಯಾಯಾಮ ಜರುಗಿತು. ಲಕ್ಷಾಂತರ ಮಂದಿ ಸ್ವಯಂಸೇವಕರು ಏಕಕಾಲಕ್ಕೆ ನಡೆಸಿದ ಕ್ರಮಬದ್ಧ ವ್ಯಾಯಾಮ ನೋಡುಗರ ಮನಸೆಳೆಯಿತು.
ಸಮಾವೇಶಕ್ಕೆ ಜಾಗ ಕೊಟ್ಟವರು
ಸಮಾವೇಶಕ್ಕೆ ಮಾಡಲು ಜಾಗ ಒದಗಿಸಿದ ಜೆಡಿಎಸ್ ಮುಖಂಡ ಸದಾನಂದ ಶೆಟ್ಟಿ, ಉದ್ಯಮಿ ಎ.ಜೆ.ಶೆಟ್ಟಿ, ದಿ.ಮನಮೋಹನ ಮಲ್ಲಿ ಅವರ ಕುಟುಂಬಕ್ಕೆ ಮಂಗಳೂರು ಸಹ ಕಾರ್ಯವಾಹ ಪಿ.ಎಸ್.ಪ್ರಕಾಶ್ ಕೃತಜ್ಞತೆ ಸಲ್ಲಿಸಿದರು. ವೇದಿಕೆ ನಿರ್ಮಾಣ ಕೆ.ಸಿ.ನಾಯ್ಕ್, ಹ್ಯಾಂಗ್ಯೊ ಅವರಿಂದ ಮಜ್ಜಿಗೆ, ನರೈನ್ ಸಂಸ್ಥೆ ವತಿಯಿಂದ ಬನ್ ವಿತರಣೆ ಆಯಿತು. ಯಾವುದೇ ಬ್ಯಾನರ್, ಬಂಟಿಂಗ್ಸ್, ಪ್ಲೆಕ್ಸ್, ಕರಪತ್ರ ಇಲ್ಲದೆ ಹತ್ತು ತಿಂಗಳ ಕಾಲ ಸ್ವಯಂಸೇವಕರು ಮನೆ, ಮನೆಗೆ ತರೆಳಿ ಲಕ್ಷಕ್ಕೂ ಮಿಕ್ಕಿ ಕಾರ್ಯಕರ್ತರನ್ನು ಸಂಘಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

