ನೇಣು ಬಿಗಿದು ಆತ್ಮಹತ್ಯೆ
ಪುತ್ತೂರು: ಬಟ್ಟೆ ವ್ಯಾಪಾರಿ ಯುವಕನೊಬ್ಬ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ಪುತ್ತೂರಿನ ನೆಲ್ಲಿಕಟ್ಟೆ ಎಂಬಲ್ಲಿ ಸಂಭವಿಸಿದ್ದು, ಸೋಮವಾರ ಬೆಳಕಿಗೆ ಬಂದಿದೆ.
ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಜಾನ್ಲೋಬೋ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ತಮಿಳುನಾಡಿನ ಸಾಸ್ಕೇವಿಲ್ ನಿವಾಸಿ ಪಾಂಡ್ಯನ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ.
ತಮಿಳುನಾಡಿನ ಸಾಸ್ಕೇವಿಲ್ ನಿವಾಸಿ ವೀರೇಶ್ವರನ್ ಎಂಬವರ ಪುತ್ರನಾದ ಪಾಂಡ್ಯನ್ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ಜಾನ್ಲೋಬೋ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದುಕೊಂಡು ಕಳೆದ ಕೆಲ ಸಮಯದಿಂದ ಪುತ್ತೂರು ವ್ಯಾಪ್ತಿಯಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಭಾನುವಾರ ರಾತ್ರಿ ಅವರು ಮನೆಯೊಳಗಿನ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಪಕ್ಕದ ಮನೆಯ ನಿವಾಸಿ ಕಾರ್ತಿಕ್ ಎಂಬವರು ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪುತ್ತೂರಿನ ಪಡೀಲ್ನಲ್ಲಿ ನೆಲೆಸಿರುವ ಅವರ ಮಾವ ಸೇಂಥಿಲ್ ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವಕರ ಮೇಲೆ ಹಲ್ಲೆ: ಪ್ರತಿ ದೂರು
ಉಪ್ಪಿನಂಗಡಿ: ಉಪ್ಪಿನಂಗಡಿಯಿಂದ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ದಲಿತ ಯುವಕರಿಬ್ಬರ ಮೇಲೆ ಕರಾಯದಲ್ಲಿ 10 ಮಂದಿ ಯುವಕರ ತಂಡ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿಯೋರ್ವಳು, 'ತನ್ನ ಮೇಲೆ ದಲಿತ ಯುವಕರಿಂದ ಕಿರುಕುಳ ನಡೆದಿದೆ' ಎಂದು ಪೊಲೀಸರಿಗೆ ಪ್ರತಿ ದೂರು ನೀಡಿದ್ದಾರೆ.
ದೂರು ನೀಡಿದ ಯುವತಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಬಸ್ನಲ್ಲಿ ಅನ್ಯಕೋಮಿನ ಮೂವರ ಯುವಕರ ತಂಡ ಕಿರುಕುಳ ನೀಡಿದ ಕಾರಣ ಮಾನಸಿಕವಾಗಿ ಅಸ್ವಸ್ಥಗೊಂಡಿರುವುದಾಗಿ ತಿಳಿಸಿರುತ್ತಾಳೆ.
ದೂರಲ್ಲಿ ಹೇಳಿರುವುದೇನು?: ಯುವತಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಏರುವ ಸಂದರ್ಭ, ಸುಬ್ರಹ್ಮಣ್ಯದ ನಿವಾಸಿಗರಾದ ಇಬ್ಬರು, ದಲಿತ ಯುವಕರನ್ನು ಮುಂಭಾಗದಲ್ಲಿ ಬಸ್ಸನ್ನೇರದಂತೆ ತಾಕೀತು ಮಾಡಿ ಮಾತಿನ ಚಕಮಕಿಗೆ ಇಳಿದದ್ದಲ್ಲದೆ, ಆಕ್ಷೇಪಿಸಿದ ಯುವಕರ ಬಗ್ಗೆ ತನ್ನ ಸಂಗಡಿಗರಿಗೆ ಫೋನಿನಲ್ಲಿ ಮಾಹಿತಿ ನೀಡಿರುತ್ತಾಳೆಂದು ಶಂಕಿಸಲಾಗಿತ್ತು. ಈ ಮಾಹಿತಿ ಆಧಾರದಲ್ಲಿ 10 ಮಂದಿಯ ತಂಡ ಕರಾಯ ಬಳಿ ಯುವಕರ ಮೇಲೆ ಹಲ್ಲೆ ನಡೆಸಿತ್ತು. ಈ ಬಗ್ಗೆ ದಲಿತ ಯುವಕರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಯುವಕರ ಮೇಲಿನ ಹಲ್ಲೆ ಪ್ರಕರಣವು ದಲಿತ ದೌರ್ಜನ್ಯ ಕಾಯಿದೆಯಡಿ ದಾಖಲುಗೊಂಡರೆ ಸಂಭವನೀಯ ಸಮಸ್ಯೆ ನಿವಾರಿಸಲು ಯುವತಿಯೆ ತನ್ನ ಮೇಲೆ ಯುವಕರು ಕಿರುಕುಳ ನೀಡಿದ ಕಾರಣ ತಾನು ಮಾನಸಿಕವಾಗಿ ಅಸ್ವಸ್ಥಗೊಂಡಿರುವುದಾಗಿ ಹೇಳಿ ಆಸ್ಪತ್ರೆಗೆ ದಾಖಲಾಗಿರುವ ಶಂಕೆ ಮೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

