ದಕ್ಷಿಣ ಕನ್ನಡ

ರಾಜ್ಯ ಬಜೆಟ್ 2013: ಜನ ಏನಂತಾರೆ?

Published On :

ಸುಪರ್ ಬಜೆಟ್...
ಬಡವರ ಮತ್ತು ರೈತರ ಪರವಾಗಿರುವ ಸುಪರ್ ಬಜೆಟ್. ನೂತನ ಮೂಡಬಿದ್ರೆ ಮತ್ತು ಕಡಬ ತಾಲೂಕು ಘೋಷಣೆ ಮಾಡುವ ಮೂಲಕ ದ.ಕ, ಜಿಲ್ಲೆಗೆ ಉತ್ತಮ ಕೊಡುಗೆ ನೀಡಲಾಗಿದೆ. ರೈತರಿಗೆ 100 ಕೋಟಿ ಹೆಚ್ಚುವರಿ ನೀಡಲಾಗಿದೆ. ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ಮಾಸಾಶನ ಇನ್ನಿತರ ಘೋಷಣೆಗಳನ್ನು ಮಾಡುವ ಮೂಲಕ ಬಡವರಿಗೆ, ಹಿಂದುಳಿದವರಿಗೆ ಹಾಗೂ ಅಶಕ್ತರಿಗೆ ಆರ್ಥಿಕ ಚೈತನ್ಯ ನೀಡುವ ಕೆಲಸ ಮಾಡಲಾಗಿರುವುದು ಉತ್ತಮ ವಿಚಾರ.
-  ಗೋಪಾಲಕೃಷ್ಣ ಹೇರಳೆ
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ, ಪುತ್ತೂರು
ಬೋಗಸ್ ಬಜೆಟ್...
ಇದೊಂದು ಚುನಾವಣಾ ಪರ ಬೋಗಸ್ ಬಜೆಟ್. ಬಿಜೆಪಿಯ ಇಮೇಜ್ ಜನರ ನಡುವೆ ಉತ್ತಮವಾಗಿಲ್ಲದ ಕಾರಣ ಬಜೆಟ್‌ನಲ್ಲಿ ತಿಳಿಸಿದ ಅಂಶಗಳು ಜಾರಿಯಾಗುವ ಅವಕಾಶಗಳು ಕಡಿಮೆಯಾಗಿದೆ. ಆದರೂ ಮೂಡಬಿದ್ರೆ ಮತ್ತು ಕಡಬ ತಾಲೂಕು ಘೋಷಣೆ ಮಾಡಿರುವುದು ತೃಪ್ತಿಯ ವಿಚಾರ.
- ಲೋಕೇಶ್ ಹೆಗ್ಡೆ
ಜೆಡಿಎಸ್ ನಾಯಕ, ಪುತ್ತೂರು

ಮಂಕು ಬೂದಿ ಬಜೆಟ್...
ಚುನಾವಣೆ ದೃಷ್ಟಿಯಲ್ಲಿ ಜನರನ್ನು ಮಂಕು ಬೂದಿ ಎರಚಲು ಅಶ್ವಾಸನೆಯನ್ನು ಒಳಗೊಂಡಿರುವ ಬಜೆಟ್ ಅನ್ನು ಮುಖ್ಯಮಂತ್ರಿಯವರು ಮಂಡಿಸಿದ್ದು, ಬಜೆಟ್ ಅನುಷ್ಠಾನಕ್ಕೆ ಬೇರೆ ಸರ್ಕಾರ ಆಡಳಿತಕ್ಕೆ ಬರಲಿದೆ. ಮೂಡುಬಿದಿರೆ ತಾಲೂಕು ರಚನೆ ಉತ್ತಮ ಕಾರ್ಯ. ಆದರೆ, ಮೂಲ್ಕಿಯನ್ನು ಕಡೆಗಣಿಸಿ ಮೂಲ್ಕಿಯ ಪರಿಸರದ ಜನರಿಗೆ ಬೇಸರ ಮೂಡಿಸಿದೆ. ಮೂಲ್ಕಿಗೆ ಕನಿಷ್ಠ ವಿಶೇಷ ತಹಸೀಲ್ದಾರ್ ನೇಮಕಕ್ಕೆ ಒತ್ತಾಯ ಮಾಡಿದ್ದು, ಅದಕ್ಕೆ ಮಾನ್ಯತೆ ಸಿಗಲಿಲ್ಲ.
 - ಬಿ.ಎಂ. ಆಸೀಫ್,
ಮಾಜಿ ಅಧ್ಯಕ್ಷ, ಮೂಲ್ಕಿ ನ.ಪಂ.
ಕೃಷಿಕರಿಗೆ ಆಶಾದಾಯಕ....
ದೂರದೃಷ್ಟಿಯ, ಸರ್ವಸ್ಪರ್ಶ, ಸಮತೋಲನವುಳ್ಳ, ಕೃಷಿಕರಿಗೆ ಆಶಾದಾಯಕ ಬಜೆಟ್, ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದೆ.
- ಅಶೋಕ್ ಶೆಟ್ಟಿ ಸರಪಾಡಿ, ಅಧ್ಯಕ್ಷರು,
ವಿಹಿಂಪ ಬಂಟ್ವಾಳ ತಾಲೂಕು
ಕಾಗದದಲ್ಲಿ ಉಳಿಯದಿರಲಿ...
ಬಜೆಟ್ ಓಕೆ, ಆದರೆ ಕೇವಲ ಕಾಗದದಲ್ಲಿ ಮಾತ್ರ ಉಳಿಯದೆ ಅನುಷ್ಠಾನಗೊಳ್ಳಬೇಕು. ಹೊಸ ತಾಲೂಕುಗಳ ರಚನೆ ಆಡಳಿತಾತ್ಮಕ ವಿಚಾರದಲ್ಲಿ ಒಳ್ಳೆಯ ನಿರ್ಧಾರ. ಗ್ರಾ.ಪಂ. ಸದಸ್ಯರ ಭತ್ಯೆ ಏರಿಸಿರುವುದು ಸ್ವಾಗತಾರ್ಹ ಸಂಗತಿ
-  ಪ್ರಭಾಕರ ಪ್ರಭು ಸಿದ್ದಕಟ್ಟೆ, ಸದಸ್ಯರು
ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ
ಒಕ್ಕೂಟದ ರಾಜ್ಯ ಸಮಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.