ದಕ್ಷಿಣ ಕನ್ನಡ

ಅಪಘಾತ: ಪಾದಚಾರಿ ಸಾವು

Published On :

ಪುತ್ತೂರು: ಟಿಪ್ಪರ್ ಮತ್ತು ಬೈಕೊಂದರ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಒಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಬೆಳಂದೂರು ಎಂಬಲ್ಲಿ ಶುಕ್ರವಾರ ನಡೆದಿದೆ.ಪುತ್ತೂರು- ಕಾಣಿಯೂರು ರಸ್ತೆಯಲ್ಲಿ ನಡೆದ ಈ ಅವಘಡದಲ್ಲಿ ಮೃತಪಟ್ಟವರನ್ನು ಬೆಳಂದೂರು ಸಮೀಪದ ಕುದ್ಮಾರು ನಿವಾಸಿ ಅಶೋಕ್ (29) ಎಂದು ಗುರುತಿಸಲಾಗಿದೆ.
ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇತರ ಸವಾರರಾದ ಕುದ್ಮಾರು ಬಜರಂಗದಳ ಘಟಕದ ಸಹಸಂಚಾಲಕ ಮಹೇಶ್ ಮತ್ತು ಕುದ್ಮಾರಿನ ಗಣೇಶ್ ಗಂಭೀರ ಗಾಯಗೊಂಡಿದ್ದು ಅವರಿಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್ ಅಪಘಾತ: 2 ಸಾವು
ಮಂಗಳೂರು: ಪಡೀಲ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶುಕ್ರವಾರ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಬಜಾಲ್ ಅನಂದ ದೇವಾಡಿಗ (46) ಮತ್ತು ಕಾರ್ಕಳ ಸಂತೋಷ (28 ಎಂಬವರು ಮೃತಪಟ್ಟವರು.
ಬೈಕ್‌ನಲ್ಲಿ ಇಬ್ಬರು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪಡೀಲ್‌ಗೆ ತೆರಳುತ್ತಿದ್ದ ವೇಳೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಡಿವೈಡರ್ ಭೇದಿಸಿ ಮುಂದೆ ಹೋದಾಗ ಎದುರಗಡೆಯಿಂದ ಬರುತ್ತಿದ್ದ ಅಕ್ಷಯ ಪಾತ್ರೆ ಟೆಂಪೊಗೆ ಡಿಕ್ಕಿ ಹೊಡೆಯಿತು.
ಬೈಕ್ ಹಿಂಬದಿ ಸವಾರ ಸಂತೋಷ್ ಸ್ಥಳದಲ್ಲಿಯೇ ಮೃತಪಟ್ಟರೆ ಸವಾರ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟರು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮರದಿಂದ ಬಿದ್ದು ಸಾವು
ಉಪ್ಪಿನಂಗಡಿ: ಕಡಬ ಸಮೀಪದ ಐತ್ತೂರು ಗ್ರಾಮದ ಐತ್ತೂರುಬೈಲು ಎಂಬಲ್ಲಿ ಮರವನ್ನೇರಿದ ಕೃಷಿಕ ಅಣ್ಣಿ ಪೂಜಾರಿ (56) ಎಂಬವರು ಮರದಿಂದ ಬಿದ್ದು ಸಾವನ್ನಪಿದ ಘಟನೆ ವರದಿಯಾಗಿದೆ. ತನ್ನ ತೋಟದಲ್ಲೇ ಮರವನ್ನೇರಿದ್ದ ಇವರು ಆಕಸ್ಮಿಕವಾಗಿ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆಂದು ತಿಳಿಸಲಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆ
ಉಪ್ಪಿನಂಗಡಿ: ಕಡಬ ಸಮೀಪದ ದೋಳ್ಪಾಡಿ ಎಂಬಲ್ಲಿ ಸೀತಾರಾಮ (50) ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಮೃತರ ಸಹೋದರ ನಾಣ್ಯಪ್ಪ ಪೊಲೀಸರಿಗೆ ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.