ದಕ್ಷಿಣ ಕನ್ನಡ

ಸರಣಿ ಅಪಘಾತ; 7 ವಾಹನ ಜಖಂ

Published On :

ಪುತ್ತೂರು: ಮಂಗಳೂರಿನಿಂದ ಪುತ್ತೂರು ಕಡೆಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದಾಗಿ ಸರಣಿ ಅಪಘಾತ ನಡೆದು 7 ವಾಹನಗಳು ಜಖಂಗೊಂಡ ಘಟನೆ ಬುಧವಾರ ಮಧ್ಯಾಹ್ನ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ನಡೆದಿದೆ. ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಪುತ್ತೂರಿನ ಅಂಚೆ ಕಚೇರಿ ಬಳಿ ಘಟನೆ ನಡೆದಿದ್ದು, ರಾಣಿಬೆನ್ನೂರಿನ ವಿರೂಪಾಕ್ಷ ಆರೋಪಿ ಬಸ್ ಚಾಲಕ. ಮಂಗಳೂರು ಡಿಪೋದಲ್ಲಿ ಚಾಲಕನಾಗಿರುವ ಈತ ಮಂಗಳೂರಿನಿಂದ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಬಸ್ ಮೊದಲಿಗೆ ಮಾರುತಿ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಬಳಿಕ ಆಪೆ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ಮುಂದೆ ಚಲಿಸಿ ಪುತ್ತೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆಯಿತು.
ಡಿಕ್ಕಿ ಹೊಡೆದ ರಭಸಕ್ಕೆ ಮಾರುತಿ ಕಾರು ರಸ್ತೆಯಲ್ಲೇ ಮೂರು ಸುತ್ತು ತಿರುಗಿ ವಿರುದ್ಧ ದಿಕ್ಕಿಗೆ ಮುಖಮಾಡಿ ನಿಂತಿತು. ರಿಕ್ಷಾ ರಸ್ತೆಯಲ್ಲೇ ಉರುಳಿ ಬಿತ್ತು. ಇದೇ ವೇಳೆ ರಸ್ತೆಯಲ್ಲಿ ಬಿದ್ದ ಆಪೆ ರಿಕ್ಷಾಕ್ಕೆ  ಪುತ್ತೂರಿನಿಂದ ಬೊಳುವಾರು ಕಡೆಗೆ ತೆರಳುತ್ತಿದ್ದ ಇನ್ನೊಂದು ಅಟೋ ರಿಕ್ಷಾಗೆ ಡಿಕ್ಕಿಯಾಯಿತು. ಅದೇ ವೇಳೆ ಹಿಂಭಾಗದಿಂದ ಆಗಮಿಸಿದ ಮತ್ತೊಂದು ರಿಕ್ಷಾ ಆಪೆ ರಿಕ್ಷಾಕ್ಕೆ ಡಿಕ್ಕಿ ಹೊಡೆದ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು.
ಈ ನಡುವೆ ಅಪಘಾತಕ್ಕೀಡಾದ ಮಾರುತಿ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆಯಿತು. ಹೀಗೆ ಒಂದೇ ವೇಳೆಯಲ್ಲಿ 7 ವಾಹನಗಳು ಜಖಂ ಆದವು.
ಈ ಸಂದರ್ಭ ರಸ್ತೆಯಲ್ಲಿ ಜನ ಸಂಚಾರ ಕಡಿಮೆಯಿದ್ದ ಕಾರಣ ಭಾರಿ ಅನಾಹುತ ಸಂಭವಿಸುವುದು ತಪ್ಪಿದೆ.
ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು.

--
ಮರ ಅಕ್ರಮ  ಸಾಗಾಟ: ಟೆಂಪೊ ಸಹಿತ ವಶಕ್ಕೆ

ಹೆಬ್ರಿ:  ಹೆಬ್ರಿ ಚಾರದಲ್ಲಿ ಅಕ್ರಮವಾಗಿ ಟೆಂಪೋದಲ್ಲಿ ಮಾವು ಬೋಗಿ ಮರದ ಹಲಗೆಗಳನ್ನು ತುಂಬಿಕೊಂಡು ಬರುತ್ತಿದ್ದಾಗ ಹೆಬ್ರಿ ಅರಣ್ಯ ಇಲಾಖೆಯ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ ಟೆಂಪೋ ಸಹಿತ ಮರಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾಗಾಟ ಮಾಡುತ್ತಿದ್ದ ಆರೋಪಿಗಳಾದ ವರಂಗ ಸದಾನಂದ ಆಚಾರ್ಯ ಮತ್ತು ಗೋಳಿಯಂಗಡಿ ಗೋಪಾಲ ಆಚಾರ್ಯ ಎಂಬವರ ಮೇಲೆ ಕೇಸು ದಾಖಲಾಗಿದ್ದು, ಬಂಧಿಸಿ ವಿಚಾರಣೆ ನಡೆಸಿ ಬಿಡುಗಡೆಗೊಳಿಸಲಾಗಿದೆ.
ಹೆಬ್ರಿ ವಲಯ ಅರಣ್ಯಾಧಿಕಾರಿ ಕೆ.ವಿ. ಸುಬ್ರಹ್ಮಣ್ಯ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ವಲಯ ಅರಣ್ಯಧಿಕಾರಿಗಳಾದ ಎಸ್.ಎನ್. ಸುಬ್ರಹ್ಮಣ್ಯ, ಜೆ. ನಾರಾಯಣ್, ಅಧಿಕಾರಿಗಳಾದ ರಾಘವೇಂದ್ರ, ರಮೇಶ ನಾಯ್ಕ್, ಚಂದ್ರ ಭಾಗವಹಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.