ದಕ್ಷಿಣ ಕನ್ನಡ

ಹಣ ಜಮಾ ಯಂತ್ರ ಉದ್ಘಾಟನೆ

Published On :

ಮಂಗಳೂರು: ಮಂಗಳೂರಿನಲ್ಲಿ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಪ್ರಥಮ ಹಣ ಜಮಾ ಯಂತ್ರ(ಸಿಡಿಎಂ)ವನ್ನು ನಗರದ ಬಂದರು ರಸ್ತೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಉದ್ಘಾಟಿಸಲಾಯಿತು. ಬ್ಯಾಂಕಿನ ಜನರಲ್ ಮೆನೇಜರ್ ಕೃಷ್ಣಮೋಹನ ತ್ರಿವೇದಿ ಉದ್ಘಾಟಿಸಿದರು. ದೇಶಾದ್ಯಂತ ಎಸ್‌ಬಿಐ 14 ಸಾವಿರ ಶಾಖೆಗಳನ್ನು ಹೊಂದಿದೆ. ಅಲ್ಲೆಲ್ಲ ದಿನದ 24 ಗಂಟೆ ಕಾರ್ಯನಿರ್ವಹಿಸುವ ಎಟಿಎಂ ಕಾರ್ಡ್ ಮತ್ತು ಸಿಡಿಎಂನ್ನು ಹೊಂದಿದೆ. ಇದರಲ್ಲಿ ಗ್ರಾಹಕರು ತಮ್ಮ ಖಾತೆಗೆ ಒಮ್ಮೆಗೆ ಗರಿಷ್ಠ ರು. 49,900 ಮೊತ್ತವನ್ನು ಪಾವತಿಸಬಹುದು. ಈಗ ಎಸ್‌ಬಿಐ ಎಸ್‌ಎಂಇ ಬಿಸಿನೆಸ್ ಕಾರ್ಡ್‌ಗಳನ್ನು ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ ನೀಡುತ್ತಿದೆ. ವಿವಿಧ ಕಂಪನಿಗಳಿಗೆ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಎಂದರು. ಎಜಿಎಂ ಬಿ.ಜಿ.ಸದಾಶಿವ, ಪ್ರಾಂತೀಯ ಮೆನೇಜರ್ ರಘುರಾಮ ಶೆಟ್ಟಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.