ಅಂಚೆ ಕಚೇರಿ ಸೋರಿಕೆ!
ಉಪ್ಪಿನಂಗಡಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಅಂಚೆ ಇಲಾಖೆ ಉಪ್ಪಿನಂಗಡಿ ಕಚೇರಿಯ ಕಟ್ಟಡ ಸುಣ್ಣಬಣ್ಣ ಬಳಿದುಕೊಂಡು ನವೀಕೃತಗೊಂಡು ಗ್ರಾಹಕರ ಸೇವೆಗೆ ಲಭ್ಯವಾಗಿದೆ. ಆದರೆ ಕಟ್ಟಡದ ನವೀಕರಣ ಕಾಮಗಾರಿ ಕಳಪೆಯಾಗಿರುವ ಆರೋಪ ಕೇಳಿಬಂದಿದ್ದು ಅಂಚೆ ಕಚೇರಿಯ ಹಲವು ಭಾಗಗಳಲ್ಲಿ ಮಳೆ ನೀರು ಸೋರುತ್ತಿದೆ.
ಮೇಲ್ದರ್ಜೆಗೇರಿರುವ ಉಪ್ಪಿನಂಗಡಿ ಅಂಚೆ ಕಚೇರಿಯನ್ನು ಅಮೂಲಾಗ್ರ ಪುನರ್ ರೂಪಿಸಲು ಗುತ್ತಿಗೆ ನೀಡಲಾಗಿದ್ದು, ಅದರಂತೆ ಕಟ್ಟಡದ ಶಿಥಿಲಗೊಂಡ ಸಿಮೆಂಟ್ ಪ್ಲಾಸ್ಟರಿಂಗ್ ತೆಗೆದು ಹೊಸದಾಗಿ ಸಿಮೆಂಟ್ ಪ್ಲಾಸ್ಟರಿಂಗ್ (ಸಾರಣೆ) ಮಾಡಲು ಹಾಗೂ ಇನ್ನಿತರ ಕಾಮಗಾರಿ ಮಾಡಲು ನಿರ್ದೇಶಿಸಲಾಗಿತ್ತು. ಕಾಮಗಾರಿಯ ಹೊಣೆಯನ್ನು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ನೀಡಲಾಗಿದ್ದು, ದ.ಕ. ಜಿಲ್ಲೆಯ ಮಳೆಯ ಪ್ರಮಾಣ ಗಣನೆಗೆ ತೆಗೆದುಕೊಳ್ಳದೆ ಕಾಮಗಾರಿ ನಡೆಸಿದಂತಿದೆ.
ಇದರಿಂದಾಗಿ ಅಂಚೆ ಇಲಾಖೆಯ ಮೊದಲ ಮಹಡಿಯಲ್ಲಿರುವ ಅಂಚೆಪಾಲಕರ ವಸತಿ ಗೃಹದಲ್ಲಿ ನೀರು ಧಾರಾಕಾರ ಸೋರಿಕೆಯಾಗುತ್ತಿದ್ದು, ಇಡೀ ಕಾಮಗಾರಿ ನಡೆಯುವ ಮೊದಲು ಇದ್ದ ಸಮಸ್ಯೆಗಿಂತಲೂ ಹೆಚ್ಚಿನ ಸಮಸ್ಯೆ ಉದ್ಭವಿಸಿದಂತಾಗಿದೆ. ಮಾತ್ರವಲ್ಲದೆ ಅಂಚೆ ಕಚೇರಿಯ ಗೋಡೆಯೂ ಸೋರಿಕೆಗೆ ತುತ್ತಾಗಿದ್ದು ಯಾವ ಗುಣಮಟ್ಟದ ಕಾಮಗಾರಿ ನಡೆಸಲಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ನೆಲಕ್ಕೆ ಹಾಸಲಾದ ಟೈಲ್ಸ್ ಕೂಡಾ ಗುಣಮಟ್ಟದ ಆಳವಡಿಕೆಗೆ ಒಳಗಾಗದೆ ಗ್ರಾಹಕರು ನಡೆಯುವಾಗ (ಒಳ ಭಾಗದಲ್ಲಿ ಟೊಳ್ಳು ಆಗಿರುವಾಗ ಬರುವಂತಹ) ಸದ್ದಾಗುತ್ತಿದೆ. ಸರ್ಕಾರಿ ಹಣವನ್ನು ಕಳಪೆ ಕಾಮಗಾರಿ ಮೂಲಕ ದುರ್ಬಳಕೆ ಮಾಡಿಕೊಂಡಿರುವ ಈ ಪ್ರಕರಣವನ್ನು ಅಮೂಲಾಗ್ರ ತನಿಖೆಗೆ ಒಳಪಡಿಸಬೇಕೆಂಬುವುದು ನಾಗರಿಕರ ಅಗ್ರಹವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

