ಸುದ್ದಿ ಸಂಕ್ಷೇಪ
ಪಡಿತರ ಚೀಟಿ ನವೀಕರಣ ಸ್ಥಗಿತ
ಮಂಗಳೂರು: ಮಂಗಳೂರು ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ಪಡಿತರ ಚೀಟಿ ನವೀಕರಣ ಕಾರ್ಯವನ್ನು ಸರ್ಕಾರದ ಆದೇಶದಂತೆ ಆ.31ರ ವರೆಗೆ ತತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 2010ರ ಹಿಂದೆ ನೀಡಲಾದ ಎಲ್ಲ ಪಡಿತರ ಚೀಟಿಗಳನ್ನು(ಅಂತ್ಯೋದಯ, ಬಿಪಿಎಲ್, ಎಪಿಎಲ್) ಮತ್ತೊಮ್ಮೆ ಫೋಟೋ ಮತ್ತು ಬಯೋವುಟ್ರಿಕ್ ನೀಡುವ ಮೂಲಕ ನವೀಕರಿಸಿಕೊಳ್ಳಲು ಹಿಂದೆ ತಿಳಿಸಲಾಗಿತ್ತು. ಈಗ ಬಿಪಿಎಲ್ ಪಡಿತರ ಚೀಟಿದಾರರು ಪಡಿತರ ಚೀಟಿ ನವೀಕರಿಸದಿದ್ದರೂ ಈ ಹಿಂದಿನ ಪಡಿತರವನ್ನು ಸಂಬಂಧಿತ ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳಬಹುದು ಎಂದು ಆಹಾರ ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ನಾಳೆ ಕಾನೂನು ಅರಿವು ಕಾರ್ಯಾಗಾರ
ಮಂಗಳೂರು: ದ.ಕ.ಜಿಲ್ಲೆಯ ಸೆಕ್ಯೂರಿಟಿ ಮತ್ತು ಮ್ಯಾಮ್ ಪವರ್ ಏಜೆನ್ಸಿ ಮಾಲೀಕರಿಗೆ ಕಾರ್ಮಿಕ ಕಾನೂನುಗಳ ಬಗ್ಗೆ ಅರಿವು ಕಾರ್ಯಕ್ರಮ ಜು.25ರಂದು ನಡೆಯಲಿದೆ. ಕದ್ರಿ ಪಾರ್ಕ್ ಬಳಿಯ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಬೆಳಗ್ಗೆ 10.30ರಿಂದ ಕಾರ್ಯಾಗಾರ ನಡೆಯಲಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರ ಪ್ರಕಟಣೆ ತಿಳಿಸಿದೆ.
ಮೇಘನಾ ಕೆ. ರಾಜ್ಯಮಟ್ಟಕ್ಕೆ ಆಯ್ಕೆ
ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮೇಘನಾ ಕೆ. 2013ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ ಫಾರ್ ಸೈನ್ಸ್ಗೆ ಆಯ್ಕೆ ಆಗಿದ್ದಾರೆ. ಜುಲೈ 20 ಮತ್ತು 21ರಂದು ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ಜಿಲ್ಲಾಮಟ್ಟದ ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ಕೃಷಿಯೋಗ್ಯ ಸ್ವಯಂಚಾಲಿತ ಪಂಪ್ ಸೆಟ್ ಮಾದರಿ ಪ್ರದರ್ಶಿಸಿ ಬಹುಮಾನ ಗಳಿಸಿದ್ದರು. ಟಿ.ಜಿ.ಟಿ ಶಿಕ್ಷಕಿ ಸಂಧ್ಯಾ, ವಿಜ್ಞಾನ ಶಿಕ್ಷಕಿ ರಜನಿ ಕೆ.ಆರ್, ಹಾಗೂ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಮೋಲಿ ವಿಲ್ಮಾ ಪಿಂಟೊ ಮಾರ್ಗದರ್ಶನದಲ್ಲಿ ಈ ಮಾದರಿಯನ್ನು ತಯಾರಿಸಿದ್ದರು. ಇವರು ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರ ಸಮನ್ವಯಾಧಿಕಾರಿ ಹರಿಕಿರಣ್ ಕೆ.-ಅನುರಾಧ ಕೆ. ದಂಪತಿ ಪುತ್ರಿ.
ಸರ್ಕಾರಿ ನೌಕರರ ಸಂಘ ಚುನಾವಣೆ
ಸುಳ್ಯ: ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ಪ್ರೌಢಶಾಲಾ ವಿಭಾಗದ ಒಂದು ಸ್ಥಾನ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಚೇರಿಯ ಒಂದು ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದಿದೆ. ಸಂಜೆ ವೇಳೆಗೆ ಫಲಿತಾಂಶ ಘೋಷಣೆಯಾಗಿದ್ದು, ಪ್ರೌಢಶಾಲಾ ವಿಭಾಗದಿಂದ ಮಹಾಬಲ ಕುಳ ವಿಜಯಿಯಾಗಿದ್ದಾರೆ. ಕಣದಲ್ಲಿದ್ದ ನಟರಾಜ ಎಂ.ಎಸ್, ಎ. ಲೋಕಯ್ಯ ಗೌಡ, ವಸಂತ ಕುಮಾರ ಎಂ.ಪಿ. ಪರಾಭವ ಹೊಂದಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕಚೇರಿಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದ್ಮನಾಭ ಎ. ವಿಜಯಿಯಾಗಿದ್ದು, ಜಲಜಾಕ್ಷಿ ಕೆ.ಡಿ. ಪರಾಭವ ಹೊಂದಿದರು.
ಪಿಎಚ್ಡಿ ಸಂಶೋಧನೆಗೆ ಆಹ್ವಾನ
ಬೆಳ್ತಂಗಡಿ: ಉಜಿರೆ ಶ್ರೀ ಧ.ಮಂ.ಕಾಲೇಜಿನಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ. ಹಾಮಾನಾ ಸಂಶೋಧನ ಕೇಂದ್ರ 2013-14ನೇ ಸಾಲಿಗೆ ಕನ್ನಡ, ಅರ್ಥಶಾಸ್ತ್ರ ಮತ್ತು ಚರಿತ್ರೆ ವಿಷಯಗಳಲ್ಲಿ ಪಿಎಚ್.ಡಿ. ಪದವಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಶುಲ್ಕ ರು. 500 ಆಗಿದ್ದು, ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ- 1ರ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ಶೇ.50 ರಿಯಾಯಿತಿ ಇದೆ. ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿರುತ್ತದೆ. ಆಸಕ್ತರು ಅರ್ಜಿ ಶುಲ್ಕವನ್ನು ಹಣಕಾಸು ಅಧಿಕಾರಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-583276-ಇವರ ಹೆಸರಿಗೆ ಸಂದಾಯವಾಗುವಂತೆ (ಹೊಸಪೇಟೆಯ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಅಥವಾ ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರ, ಬಳ್ಳಾರಿ ಜಿಲ್ಲೆ- ಇಲ್ಲಿ ಪಾವತಿಯಾಗುವಂತೆ) ಡಿ.ಡಿ. ತೆಗೆದು, ವೆಬ್ಸೈಟ್ನಿಂದ ಅರ್ಜಿ ಡೌನ್ಲೋಡ್ ಮಾಡಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ. ಸಹಿತ ಸಂಯೋಜನಾಧಿಕಾರಿಗಳು, ಡಾ. ಹಾಮಾನಾ ಸಂಶೋಧನ ಕೇಂದ್ರ, ಶ್ರೀ ಧ.ಮಂ. ಕಾಲೇಜು- ಉಜಿರೆ, ದ.ಕ. ಅವರಿಗೆ ನೇರವಾಗಿ ಇಲ್ಲವೆ ಅಂಚೆ ಮೂಲಕ ಜುಲೈ 25ರ ಒಳಗೆ ತಲುಪುವಂತೆ ಕಳುಹಿಸಲು ತಿಳಿಸಲಾಗಿದೆ. ವಿವರಗಳಿಗೆ ಢಿಢಿಢಿ.್ಞಛಟಿಟಿಛಜಛ್ಡಟ್ಝಿಢಜ್ಠಡ್ಝಡಿಣ.್ಟ್ಠ್ಜ, ಜಾಲತಾಣವನ್ನು ಅಥವಾ ಡಾ. ಎಸ್.ಡಿ. ಶೆಟ್ಟಿ(9448724697) ಇಲ್ಲವೆ ಡಾ. ದಿವ ಕೊಕ್ಕಡ(9902032480) ಅವರನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

