ಸುದ್ದಿ ಸಂಕ್ಷೇಪ
ನಿಡ್ಡೋಡಿ ಸ್ಥಾವರಕ್ಕೆ ಆಮ್ಆದ್ಮಿ ವಿರೋಧ
ಮಂಗಳೂರು: ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸರ್ಕಾರ ಮುಂದಾಗಿರುವ ಕ್ರಮಕ್ಕೆ ಆಮ್ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದೆ. ಸ್ಥಾವರ ಸ್ಥಾಪನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸಚಿವ ಅಭಯಚಂದ್ರ ಜೈನ್ ವಿರೋಧ ವ್ಯಕ್ತಪಡಿಸಿರುವುದು ಸ್ವಾಗತಾರ್ಹವಾದರೂ ಇದರ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ. ಸ್ಥಾವರ ಸ್ಥಾಪನೆಗೆ ಮೊದಲು ಅಲ್ಲಿನ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಬೇಕು. ಪರಿಸರ ಅಧ್ಯಯನ, ಇದೇ ಸ್ಥಳವನ್ನು ಆಯ್ಕೆ ಮಾಡಲು ಕಾರಣ ಕೊಡಬೇಕು. ಜನತೆಗೆ ಯೋಜನೆಯ ಬಗ್ಗೆ ಪಾರದರ್ಶಕ ಮಾಹಿತಿ ನೀಡಬೇಕು. ಈ ಯೋಜನೆಯ ಬಗ್ಗೆ ಸರ್ಕಾರ ಕೂಡ ನಿಖರ ಮಾಹಿತಿ ನೀಡಬೇಕು ಎಂದು ಸಂಚಾಲಕ ರೋಬರ್ಟ್ ರೊಸಾರಿಯೊ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಇಂದು ಸಿಎಫ್ಐ ರಸ್ತೆ ತಡೆ
ಮಂಗಳೂರು: ಎಕ್ಕೂರಿನಲ್ಲಿ ಹೊರ ಜಿಲ್ಲೆಯ ಪಿಯು ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳ ಹಲ್ಲೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್ಐ)ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ. ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳು ನಿರಂತರವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಅತ್ಯಾಚಾರ, ಹಲ್ಲೆ, ಗುಂಡಾ ವರ್ತನೆ ನಡೆಸುತ್ತಿದ್ದು, ಶಾಂತಿ ವಾತಾವರಣವನ್ನು ಕದಡುತ್ತಿದ್ದಾರೆ. ಇಂಥ ಘಟನೆ ಮುಂದುವರಿದರೆ ಜಿಲ್ಲೆಯ, ಹೊರಜಿಲ್ಲೆಯಿಂದ ಆಗಮಿಸುವ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಬೀರಲಿದೆ. ಈ ಘಟನೆ ವಿರೋಧಿಸಿ ಜು.24ರಂದು ಬೆಳಗ್ಗೆ 11ಕ್ಕೆ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಬಳಿಯ ಕ್ಲಾಕ್ಟವರ್ ಮುಂಭಾಗ ವಿದ್ಯಾರ್ಥಿಗಳಿಂದ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಲೆಕ್ಕ ಪರಿಶೋಧಕರ ಆಯ್ಕೆಗೆ ಸೂಚನೆ
ಮಂಗಳೂರು: ಸಹಕಾರ ಸಂಘಗಳ ನಿಯಮ 29(ಬಿ)(3) ಅನ್ವಯ ಆಯಾ ಗುಂಪಿನ ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ರಾಜ್ಯದ ಸಹಕಾರ ಸಂಘಗಳನ್ನು ಎ, ಬಿ, ಮತ್ತು ಸಿ ಗುಂಪು ಮಾಡಿ ಅದೇ ಪ್ರಕಾರವಾಗಿ ಆಯಾ ಗುಂಪಿನ ಸಹಕಾರಿ ಸಂಘಗಳಿಗೆ ಅರ್ಹ ಲೆಕ್ಕಪರಿಶೋಧಕರ ಪಟ್ಟಿಯನ್ನು ಇಲಾಖೆ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಅದರಂತೆ ನಿಗದಿತ ಅವಧಿಯೊಳಗೆ ಲೆಕ್ಕ ಪರಿಶೋಧನೆ ಮುಕ್ತಾಯಗೊಳಿಸಲು ಸಹಕಾರ ಸಂಘಗಳ ನಿರ್ದೇಶಕರು ತಿಳಿಸಿದ್ದಾರೆ.
ವೆಬ್ಡಿಸೈನ್: ಅರ್ಜಿ ಆಹ್ವಾನ
ಮಂಗಳೂರು: ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್) ಧಾರವಾಡ ಮತ್ತು ಇತರ ಸಂಘಗಳ ಆಶ್ರಯದಲ್ಲಿ ಆಗಸ್ಟ್ ಎರಡನೇ ವಾರ 43 ದಿನಗಳ ವೆಬ್ಡಿಸೈನ್ ತರಬೇತಿಯನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ತರಬೇತಿ ಉಚಿತವಾಗಿದ್ದು, ಮಹಿಳಾ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.ಆಸಕ್ತರು ತಮ್ಮ ಸ್ವವಿವರಗಳೊಂದಿಗೆ ಅರ್ಜಿಯನ್ನು ಉಪನಿರ್ದೇಶಕರು, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ವಸಾಹತು, ಯೆಯ್ಯಾಡಿ, ಮಂಗಳೂರು ಇವರಿಗೆ ಸಲ್ಲಿಸಬಹುದು. ಜು.31 ಅರ್ಜಿ ಸಲ್ಲಿಸಲು ಕೊನೆ ದಿನಾಂಕ. ಹೆಚ್ಚಿನ ಮಾಹಿತಿಗೆ: 0824-2212494, 9945729807.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

