ದಕ್ಷಿಣ ಕನ್ನಡ

ಗ್ರಾಮ ಕರಣಿಕ ಲೋಕಾ ಬಲೆಗೆ

Published On :

ಸುಳ್ಯ: ಪಹಣಿಪತ್ರದ ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದಾಗ ಗ್ರಾಮ ಕರಣಿಕನೊಬ್ಬ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಂಪಾಜೆ ಗ್ರಾಮ ಕರಣಿಕ ವಿನೋದ್ ಬಂಧಿತ ವ್ಯಕ್ತಿ. ತೊಡಿಕಾನ ಗ್ರಾಮದ ಮೊಟ್ಟೆಂಗಾರು ನಿವಾಸಿ ಹನೀಫ್ ಎಂಬವರ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಈ ಲಂಚ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಹನೀಫ್ ಅವರ ಸಹೋದರಿ ನಸೀಮಾ ಸಂಪಾಜೆ ಗ್ರಾಮದ ಪೇರಡ್ಕದಲ್ಲಿ 1.50 ಲಕ್ಷಕ್ಕೆ 10 ಸೆಂಟ್ಸ್ ಭೂಮಿಯನ್ನು ಜನಾರ್ದನ ಎಂಬವರಿಂದ ಖರೀದಿಸಿದ್ದರು. ಇದರ ಖಾತೆ ಬದಲಾವಣೆಗಾಗಿ ವಿನೋದ್ ಲಂಚದ ಬೇಡಿಕೆಯಿಟ್ಟಿದ್ದ. ಗುರುವಾರ ಸುಳ್ಯ ತಾಲೂಕು ಕಚೇರಿಯಲ್ಲಿ ಹನೀಫ್ರಿಂದ 3 ಸಾವಿರ ನಗದು ಸ್ವೀಕರಿಸುತ್ತಿದ್ದಾಗ ವಿನೋದ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಸುದೀರ್ಘ ವಿಚಾರಣೆ ಬಳಿಕ ವಿನೋದ್ನನ್ನು ಮಂಗಳೂರಿಗೆ ಕರೆದೊಯ್ದು ಸೆಷನ್ಸ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನಾಸಿಕ್ಗೆ ತೆರಳಿದ ದಲೈಲಾಮಾ
ಮುಂಡಗೋಡ: ನೊಬೆಲ್ ಪ್ರಶಸ್ತಿ ಪುರಸ್ಕೃತ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಗುರುವಾರ ಇಲ್ಲಿಯ ಟಿಬೆಟಿಯನ್ ಕಾಲೋನಿಯಿಂದ ಪ್ರಯಾಣ ಬೆಳೆಸಿದರು. ಅವರು 8 ದಿನಗಳಿಂದ ಇಲ್ಲಿಯ ವಿವಿಧ ಬೌದ್ಧ ಮೊನಿಸ್ಟ್ರಿಗಳಲ್ಲಿ ತಂಗಿ ದಿನಕ್ಕೆ ತಲಾ 90ರಂತೆ 800ಕ್ಕೂ ಅಧಿಕ ಟಿಬೆಟಿಯನ್ರಿಗೆ ಸನ್ಯಾಸತ್ವ ದೀಕ್ಷೆ ನೀಡಿದ್ದಾರೆ. ಗುರುವಾರ ತಮ್ಮ ವಾಹನದಲ್ಲಿ ಮುಂಡಗೋಡ-ಹುಬ್ಬಳ್ಳಿ ಮಾರ್ಗವಾಗಿ ಮಹಾರಾಷ್ಟ್ರದ ನಾಸಿಕ್ಗೆ ಪ್ರಯಾಣ ಬೆಳೆಸಿದರು.

ಪುತ್ತೂರು: ಯಕ್ಷಗಾನ ಕಲಾವಿದ ಕನ್ಯಾನ ಕೇಶವ ಭಟ್ ನಿಧನ    
ಪುತ್ತೂರು: ಯಕ್ಷಗಾನ ಕಲಾವಿದ, ವೈದಿಕ ಸಹಾಯಕ ಕನ್ಯಾನ ಕೇಶವ ಭಟ್ (58) ಅಲ್ಪಕಾಲದ ಅಸೌಖ್ಯತೆಯಿಂದ ಗುರುವಾರ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು.  ಅವರಿಗೆ ಪತ್ನಿ ವಿನೋದಾ ಭಟ್, ಇಬ್ಬರು ಮಕ್ಕಳಿದ್ದಾರೆ.  ಕನ್ಯಾನ ಕೇಶವ ಭಟ್ ಮೂಲತಃ ಬಂಟ್ವಾಳ ತಾಲೂಕಿನ ಕನ್ಯಾನದವರು. ಬಾಲ್ಯದಿಂದಲೇ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಪುತ್ತೂರಿನ ಬೊಳ್ವಾರಿನಲ್ಲಿದ್ದ ಭಟ್ಟರ ಹೊಟೇಲ್ 'ಪುಷ್ಯರಾಗ' ಗುಣಮಟ್ಟದ ತಿಂಡಿಗಳಿಗೆ ಖ್ಯಾತಿಯಾಗಿತ್ತು. ಬಳಿಕ ಚೇತನಾ ಆಸ್ಪತ್ರೆ, ಆದರ್ಶ ಆಸ್ಪತ್ರೆಗಳ ಕ್ಯಾಂಟೀನ್ಗಳನ್ನು ವಹಿಸಿಕೊಂಡಿದ್ದರು. ಬಳಿಕ ಸುಬ್ರಹ್ಮಣ್ಯಕ್ಕೆ ವಸತಿಯನ್ನು ಸ್ಥಳಾಂತರಿಸಿದ್ದರು. ಅವರು ಯಕ್ಷಗಾನ ಕಲಾವಿದ. ತಾಳಮದ್ದಳೆ ಅರ್ಥಧಾರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.