ಆ.5ರಿಂದ ಫ್ರೆಂಚ್ ತರಗತಿ ಆರಂಭ
ಮಂಗಳೂರು: ಅಲಯನ್ಸ್ ಫ್ರಾಂಚೈಸ್ ಮಂಗಳೂರು ಚಾಪ್ಟರ್ ಆ.5ರಿಂದ ಫ್ರೆಂಚ್ ಶಿಕ್ಷಣ ಆರಂಭಿಸುತ್ತಿದೆ. 80 ಗಂಟೆಗಳಷ್ಟು ಅವಧಿ ಹೊಂದಿರುವ ಕೋರ್ಸ್ ವಾರದ ಸಮಯದಲ್ಲಿ, ವಾರಾಂತ್ಯಗಳಲ್ಲಿಯೂ ಲಭ್ಯವಿದೆ. ಫ್ರೆಂಚ್ ಭಾಷೆ ಪ್ರಚಾರ, ಫ್ರೆಂಚ್ ಅಡುಗೆ ತರಗತಿಗಳು, ಫ್ರೆಂಚ್ ಚಲನಚಿತ್ರ ಪ್ರದರ್ಶನಗಳು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲದೇ, ಅಂತಾಷ್ಟ್ರೀಯ ಪ್ರಮಾಣ ಪತ್ರ ಪರೀಕ್ಷೆ ನೀಡುತ್ತದೆ.
ಮಾಹಿತಿ ಮತ್ತು ದಾಖಲಾತಿಗಳಿಗಾಗಿ 9740999222 ಅಥವಾ 9886226824 ಸಂಖ್ಯೆಗೆ ಕರೆ ಮಾಡಬಹುದು. ಅಥವಾ ಅಲಯನ್ಸ್ ಪ್ರಾಂಚೈಸ್ ಮಂಗಳೂರು ಚಾಪ್ಟರ್, ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ವೆಲೆನ್ಸಿಯ, ಮಂಗಳೂರು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಕರಾವಳಿ ಕಾಲೇಜಿಗೆ ಶೇ. ನೂರು ಫಲಿತಾಂಶ
ಮಂಗಳೂರು: ಕೊಟ್ಟಾರ ಚೌಕಿಯ ಕರಾವಳಿ ಕಾಲೇಜಿಗೆ ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ಪದವಿಯ 2 ಮತ್ತು 4ನೇ ಸೆಮಿಸ್ಟರ್ನಲ್ಲಿ ಶೇ. 100 ಫಲಿತಾಂಶ ಲಭಿಸಿದೆ. 2013ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆ ಇತರ ವಿದ್ಯಾರ್ಥಿಗಳಿಗೂ ಸ್ಪೂರ್ತಿದಾಯಕವಾಗಲಿ ಎಂದು ಕರಾವಳಿ ಕಾಲೇಜುಗಳ ಸ್ಥಾಪಕಾಧ್ಯಕ್ಷ ಗಣೇಶ್ ಎಸ್ ರಾವ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮೂಲ್ಕಿ: ಗಿಫ್ಟ್ ಸ್ಕೀಂ ಹೆಸರಲ್ಲಿ ಲಕ್ಷಾಂತರ ಪಂಗನಾಮ
ಮೂಲ್ಕಿ: ಗಿಫ್ಟ್ ಸ್ಕೀಂ ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರುಪಾಯಿ ಪಡೆದುಕೊಂಡು ವಂಚಿಸಿದ ಬಗ್ಗೆ ಇಲ್ಲಿನ ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮೂಲ್ಕಿಯ ಕೆ.ಎಸ್. ರಾವ್ ನಗರದ ನಿವಾಸಿ ಹಾಗೂ ಪಕ್ಷಿಕೆರೆ ನಿವಾಸಿಗಳಿಬ್ಬರು ಸೇರಿಕೊಂಡು 'ಸೂಪರ್ ಲಕ್ಕಿ ಸ್ಕೀಂ' ಹೆಸರಿನಲ್ಲಿ ವಾರಕ್ಕೆ ತಲಾ ರು. 100ರಂತೆ 20 ವಾರಗಳ ಸ್ಕೀಂ ಆರಂಭಿಸಿದ್ದು, 980 ಗ್ರಾಹಕರನ್ನು ಸೆಳೆದುಕೊಂಡಿದ್ದರು. ಮೊದಲ 'ಡ್ರಾ' ಮಾ.10ರಂದು ಹಾಗೂ ಕೊನೆಯ 'ಡ್ರಾ'ದಲ್ಲಿ ಬೈಕ್ ಬಹುಮಾನ ನೀಡುವುದಾಗಿ ಮುದ್ರಿಸಿ ಹಂಚಿದ್ದರು. ಇದೀಗ ಜು.3ನೇ ವಾರದಲ್ಲಿ ಗಡುವುಮುಗಿದಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ. ಸ್ಕೀಂಗೆ ನೀಡಿರುವ ವಿಳಾಸಕ್ಕೆ ಗ್ರಾಹಕರು ಹುಡುಕಿಕೊಂಡು ಹೋದಾಗ ವಿಳಾಸ ನಕಲಿ ಎನ್ನುವುದು ತಿಳಿದುಬಂದಿದೆ. ಹೀಗಾಗಿ ಹಣ ಕಳೆದುಕೊಂಡಿರುವ ಗ್ರಾಹಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆರೋಪಿಗಳಿಬ್ಬರು ಮೂಲ್ಕಿ, ಹಳೆಯಂಗಡಿ, ಕಿನ್ನಿಗೋಳಿ ಪರಿಸರದಲ್ಲಿ ಕಾರಿನಲ್ಲಿ ಮನೆಮನೆಗೆ ತೆರಳಿ ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು 980 ಗ್ರಾಹಕರನ್ನು ಸಂಪಾದಿಸಿದ್ದರು. ಪ್ರತಿ ವಾರ ಗ್ರಾಹಕರಿಂದ ತಲಾ ರು. 100ರಂತೆ ಸಂಗ್ರಹಿಸಿ ಡ್ರಾ ನಡೆಸಲಾಗಿದೆ ಎಂದು ಹೇಳಿ ವಂಚಿಸುತ್ತಿದ್ದರು. ಈ ರೀತಿ ಗ್ರಾಹಕರಿಂದ ಸುಮಾರು ರು. 20 ಲಕ್ಷ ಸಂಗ್ರಹಿಸಿದ ಆರೋಪಿಗಳು ಇದೀಗ ಪರಾರಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

