ಸುದ್ದಿ ಸಂಕ್ಷೇಪ
ಅಂ.ರಾ. ಕರಾಟೆ: ಪೆರುವಾಯಿಯ ಇಬ್ರಾಹಿಂ ಬಾತಿಷ್ ತೃತೀಯ
ವಿಟ್ಲ: ನೇಪಾಳದ ಕಠ್ಮಂಡುವಿನಲ್ಲಿ ಇತ್ತೀಚೆಗೆ ನಡೆದ 7ನೇ ಎನ್ಎಸ್ಕೆಎ ಅಂತಾರಾಷ್ಟ್ರೀಯ ಕರಾಟೆ ಕ್ವಾಲಿಫೈಯಿಂಗ್ ಚಾಂಪಿಯನ್ಶಿಪ್-2013 ಸ್ಪರ್ಧೆಯಲ್ಲಿ ದ.ಕ.ಜಿಲ್ಲೆಯ ಇಬ್ರಾಹಿಂ ಬಾತಿಷ್(14) ಮೂರನೆ ಸ್ಥಾನ ಪಡೆದಿದ್ದಾನೆ. ಈತ ಬಂಟ್ವಾಳ ತಾಲೂಕು ವಿಟ್ಲ ಸಮೀಪದ ಪೆರುವಾಯಿ ಕಾನ ಅಬ್ದುಲ್ ಖಾದರ್-ರಜಿಯಾ ದಂಪತಿ ಪುತ್ರ. ಮೂಡುಬಿದಿರೆ ಮಹ್ಮದೀಯಾ ಸ್ಕೂಲ್ನ 9ನೇ ತರಗತಿ ವಿದ್ಯಾರ್ಥಿ. ಸಫ್ರರಾಝ್ ಮಾರ್ಗದರ್ಶನ ನೀಡಿದ್ದಾರೆ. ಈತ ಪೆರುವಾಯಿ ಮುಚ್ಚಿರಪದವು ನ್ಯೂ ಸ್ಟಾರ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಸದಸ್ಯನಾಗಿದ್ದಾನೆ. ನೇಪಾಳ ಸ್ಪೋರ್ಟ್ಸ್ ಕೌನ್ಸಿಲ್, ನೇಪಾಳ ಶೋಟೋಕಾನ್ ಕರಾಟೆ ಅಸೋಸಿಯೇಶನ್, ರಾಷ್ಟ್ರೀಯ ಸ್ಪೋರ್ಟ್ಸ್ ಕೌನ್ಸಿಲ್ ಹಾಗೂ ನೇಪಾಳ ಕರಾಟೆ ಫೆಡರೇಶನ್ ವತಿಯಿಂದ ಈ ಚಾಂಪಿಯನ್ಶಿಪ್ ನಡೆಯಿತು.
ತೀವ್ರ ಜ್ವರದಿಂದ ವಿದ್ಯಾರ್ಥಿ ಸಾವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಲ್ಯಾಡಿಯ ಪಡ್ಡಡ್ಕ ನಿವಾಸಿ ಮಾಥ್ಯು ಎಂ.ಜೆ. ಎಂಬವರ ಮಗ ಅಲೋಶಿಯಸ್ ಮಾಥ್ಯು (15) ತೀವ್ರ ಜ್ವರದಿಂದ ಮಂಗಳವಾರ ಮೃತಪಟ್ಟಿದ್ದಾರೆ. ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಈತನಿಗೆ ಸೋಮವಾರ ಜ್ವರ ಕಾಣಿಸಿಕೊಂಡಿದೆ. ಬಳಿಕ ಅದು ಉಲ್ಬಣಗೊಂಡಿದ್ದರಿಂದ ಮಂಗಳವಾರ ಬೆಳಗ್ಗೆ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆಯೇ ಅಸುನೀಗಿದ್ದಾನೆ. ವಿದ್ಯಾರ್ಥಿ ಜ್ವರದಿಂದ ಮೃತಪಟ್ಟಿದ್ದಾನೆ. ಆದರೆ ಯಾವ ಜ್ವರ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣಾನಂದ ತಿಳಿಸಿದ್ದು, ಡೆಂಘೀ ಜ್ವರದ ಶಂಕೆ ಜನರಲ್ಲಿ ಮೂಡಿದೆ.
ಮೃತ ವಿದ್ಯಾರ್ಥಿಯ ಮನೆಗೆ ಬೆಥನಿ ವಿದ್ಯಾ ಸಂಸ್ಥೆಯ ಆಡಳಿತ ವರ್ಗ ಮತ್ತು ಶಿಕ್ಷಕ, ವಿದ್ಯಾರ್ಥಿಗಳು, ತಾಪಂ ಸದಸ್ಯೆ ಉಷಾ ಅಂಚನ್, ಗ್ರಾಪಂ ಉಪಾಧ್ಯಕ್ಷ ಜಯಾನಂದ ಬಂಟ್ರಿಯಾಲ್, ಸುಳ್ಯ ಕ್ಷೇತ್ರದ ಕೆಜೆಪಿ ಅಧ್ಯಕ್ಷ ಬಾಲಕೃಷ್ಣ ಗೌಡ ಮತ್ತು ಗಣ್ಯರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
8ರಂದು ಸುಬ್ರಹ್ಮಣ್ಯ ರೈಲು ಸಂಚಾರ ರದ್ದು
ಮಂಗಳೂರು: ಮಂಗಳೂರು ಜಂಕ್ಷನ್(ಕಂಕನಾಡಿ)ರೇಲ್ವೆ ನಿಲ್ದಾಣದಲ್ಲಿ ಜೂ.8ರಂದು ಸಿಗ್ನಲ್ ಪರಿವರ್ತನೆ ಕೆಲಸನಡೆಯುವುದರಿಂದ ಸುಬ್ರಹ್ಮಣ್ಯ ಮಾರ್ಗ-ಮಂಗಳೂರು ಸೆಂಟ್ರಲ್ ರೈಲು(ನಂ.56647/56646) ಸಂಚಾರವನ್ನು ಆ ದಿನ ರದ್ದುಪಡಿಸಲಾಗಿದೆ. ಮಂಗಳೂರು ಸೆಂಟ್ರಲ್-ಕಬ ಪುತ್ತೂರು ಪ್ಯಾಸೆಂಜರ್ ರೈಲು ಸೆಂಟ್ರಲ್ ನಿಲ್ದಾಣದಿಂದ ಸಂಜೆ 6.20ರ ಬದಲು 6.45ಕ್ಕೆ ಅಂದರೆ 25 ನಿಮಿಷ ವಿಳಂಬವಾಗಿ ಹೊರಡಲಿದೆ ಎಂದು ಫಾಲ್ಘಾಟ್ ರೇಲ್ವೆ ವಿಭಾಗ ಪ್ರಕಟಣೆ ತಿಳಿಸಿದೆ.
ಮಳೆ ನಾಪತ್ತೆ
ಮಂಗಳೂರು: ನಗರದಲ್ಲಿ ಕಳೆದ ಎರಡು ದಿನದಿಂದ ಮಳೆ ಕಡಿಮೆಯಾಗಿದ್ದು, ಬುಧವಾರ ದಿನವಿಡೀ ಉರಿಬಿಸಿಲಿನ ವಾತಾವರಣವಿತ್ತು. ಬುಧವಾರ ಬೆಳಗ್ಗಿನವರೆಗೆ ಮೂಡುಬಿದಿರೆಯಲ್ಲಿ 11.2 ಮಿ.ಮೀ. ಅಧಿಕ ಮಳೆ ಸುರಿದಿದೆ. ಬೆಳ್ತಂಗಡಿ ಮತ್ತು ಕಡಬದಲ್ಲಿ ಮಳೆಯಾಗಿಲ್ಲ.
ಮಳೆ ವಿವರ: ಮಂಗಳೂರು- 11 ಮಿ.ಮೀ., ಬಂಟ್ವಾಳ- 3.6 ಮಿ.ಮೀ., ಪುತ್ತೂರು- 2 ಮಿ.ಮೀ., ಸುಳ್ಯ- 1.2 ಮಿ.ಮೀ. ಮಳೆ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

