ದಕ್ಷಿಣ ಕನ್ನಡ

ಅಪಘಾತ: ಕ್ರೀಡಾಪಟು ಸಾವು

Published On :

ಕ.ಪ್ರ.ವಾರ್ತೆ  ಮಂಗಳೂರು  ಜೂ. 9
ವಾಮಂಜೂರು ಸೇಂಟ್ ಜೋಸೆಫ್ ಕಾಲೇಜು ವಿದ್ಯಾರ್ಥಿ, ಕ್ರೀಡಾಪಟು ಇತಿಹಾಸ್ ಶೆಟ್ಟಿ (21) ಕದ್ರಿ ಬಳಿ ಶನಿವಾರ ತಡರಾತ್ರಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಅವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತಿಹಾಸ್ ಶೆಟ್ಟಿ ಶನಿವಾರ ತಮ್ಮ ಗೆಳೆಯರ ಪಾರ್ಟಿಯಲ್ಲಿ ತಾಯಿಯೊಂದಿಗೆ ಭಾಗವಹಿಸಿ ಮಧ್ಯರಾತ್ರಿ ಕಳೆದು ಮನೆಗೆ ತೆರಳುತ್ತಿದ್ದಾಗ  ಕದ್ರಿ ಬಾಲಭವನ ಬಳಿ ಕಂಪೌಂಡ್ ಗೋಡೆಗೆ ಕಾರು ಡಿಕ್ಕಿ ಹೊಡೆಯಿತು. ಕಂಪೌಂಡ್ ಭೇದಿಸಿ ಕಾರು ಅರ್ಧ ಒಳಪ್ರವೇಶಿಸಿದೆ. ಕಾರಿನಲ್ಲಿದ್ದ ಗೆಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ ಇಡೀ ಜೋರಾಗಿ ಮಳೆ ಸುರಿಯುತ್ತಿದ್ದದ್ದೂ ಅಪಘಾತಕ್ಕೆ ಕಾರಣವಾಗಿದೆ. ಇತಿಹಾಸ್ ಶೆಟ್ಟಿ ಟೇಬಲ್ ಟೆನ್ನಿಸ್ ಮತ್ತು ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಅನೇಕ ಬಾರಿ ಕಾಲೇಜನ್ನು ಪ್ರತಿನಿಧಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.