15 ಕಿಲೊ ಇರಾನಿ ಕೇಸರಿ ವಶ
ಮಂಗಳೂರು: ದುಬೈಯಿಂದ ಮಂಗಳೂರಿಗೆ ಇರಾನಿ ಕೇಸರಿ ಕದ್ದು ತರುತ್ತಿದ್ದ ಕಾಸರಗೋಡಿನ ಸಫೀರ್ ಎಂಬಾತನನ್ನು ಕಸ್ಟಮ್ಸ್ ಅಧಿಕಾರಿಗಳು ಬಜಪೆ ವಿಮಾನ ನಿಲ್ದಾಣದಲ್ಲಿ ಶನಿವಾರ ಸೆರೆ ಹಿಡಿದಿದ್ದಾರೆ. ಆರೋಪಿಯಿಂದ ರು. 15 ಲಕ್ಷಮೌಲ್ಯದ 15 ಕಿಲೊ ಕೇಸರಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೇರಳ ಕಾಸರಗೋಡಿನ ಅಬ್ದುಲ್ ಸಫೀರ್ ಜೆಟ್ ಏರ್ವೇಸ್ ಮೂಲಕ ದುಬೈಯಿಂದ ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಸಂಶಯಗೊಂಡ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ 4 ಬಾಕ್ಸ್ಗಳಲ್ಲಿ ಕೇಸರಿಯನ್ನು ಲಕೋಟೆಗಳಲ್ಲಿ ತುಂಬಿಸಿದ್ದ. ಬಾಕ್ಸ್ಗಳು ಎಕ್ಸರೇ ಪರಿಶೀಲನೆ ವೇಳೆ ಸಂಶಯ ಮೂಡಿಸಿದವು. ಆರೋಪಿಯನ್ನು ಬಜಪೆ ಪೊಲೀಸರ ವಶಕ್ಕೆ ನೀಡಲಾಗಿದೆ. ಗಲ್ಫ್ ದೇಶಗಳಲ್ಲಿ ಇರಾನಿ ಕೇಸರಿ ಅಗ್ಗವಾಗಿದ್ದು, ಮುಂಬಯಿ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ. ಹೀಗಾಗಿ ದುಬೈಯಿಂದ ಕೇಸರಿ ಮಂಗಳೂರಿಗೆ ಕದ್ದು ಸಾಗಾಟ ಮಾಡುತ್ತಿದ್ದಾರೆ. ಬಜಪೆ ವಿಮಾನ ನಿಲ್ದಾಣದಲ್ಲಿ ಕೇಸರಿ ಪತ್ತೆಯಾಗುತ್ತಿರುವ ಪ್ರಕರಣ ಏರಿಕೆ ಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

