ದಕ್ಷಿಣ ಕನ್ನಡ

ಶಾಂತಿವನದಲ್ಲಿ ಯಡಿಯೂರಪ್ಪ

Published On :

ಬೆಳ್ತಂಗಡಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಧರ್ಮಸ್ಥಳ ಸಮೀಪದ ಶಾಂತಿವನ ಪ್ರಕೃತಿ ಚಿಕಿತ್ಸಾಲಯಕ್ಕೆ ಚಿಕಿತ್ಸೆಗಾಗಿ ಶುಕ್ರವಾರ ಆಗಮಿಸಿದ್ದಾರೆ. ಸುಮಾರು 10 ದಿನಗಳ ಕಾಲ ಶಾಂತಿವನದಲ್ಲಿ ಜಲ ಚಿಕಿತ್ಸೆ, ಮಡ್‌ಬಾತ್, ಮಸಾಜ್, ಪ್ರಾಣಾಯಾಮ, ಧ್ಯಾನ ಮೊದಲಾದ ಚಿಕಿತ್ಸೆಗಳನ್ನು ಪಡೆಯಲಿದ್ದಾರೆ. ಯಡಿಯೂರಪ್ಪ ಅವರ ಆಪ್ತ, ವಿಧಾನ ಪರಿಷತ್ ಸದಸ್ಯ ಪುಟ್ಟಸ್ವಾಮಿ ಕೂಡ ಶಾಂತಿವನಕ್ಕೆ ದಾಖಲಾಗಿದ್ದಾರೆ.

ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆ:  ಶೃತಿಗೆ ಬಹುಮಾನ
ಉಪ್ಪಿನಂಗಡಿ: ಭಾರತ ಸರ್ಕಾರದ ಪಾರ್ಲಿಮೆಂಟ್ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಶತಮಾನೋತ್ಸವ ಪ್ರಯುಕ್ತ 2011-12ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ 'ಪಾರ್ಲಿಮೆಂಟರಿ ಡೆಮಾಕ್ರಸಿ- ಗೇಟ್ ವೇ ಟು ಗುಡ್ ಗವರ್ನರ್ಸ್‌' ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶೃತಿ ಬಹುಮಾನ ಪಡೆದಿದ್ದಾರೆ. ಜು.17ರಂದು ನವದೆಹಲಿಯ ಪಾರ್ಲಿಮೆಂಟ್ ಭವನದ ಬಾಲಯೋಗಿ ಆಡಿಟೋರಿಯಂನಲ್ಲಿ ಲೋಕಸಭಾ ಸ್ಪೀಕರ್ ಮೀರಾಕುಮಾರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶೃತಿ ಉಪ್ಪಿನಂಗಡಿ ಹರಿನಗರದ ಮೋಹನ ಮಡಿವಾಳ- ವಿಮಲ ದಂಪತಿ ಪುತ್ರಿಯಾಗಿದ್ದು, ಕರ್ನಾಟಕ ಸರ್ಕಾರದ ಕಾನೂನು ಮತ್ತು ಸಂಸದೀಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿ ಸಂಸತ್ತು ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಎರಡು ಬಾರಿ ಪ್ರತಿನಿಧಿಸಿ ರಾಜ್ಯ ಮಟ್ಟದಲ್ಲಿ ಪುರಸ್ಕೃತರಾಗಿದ್ದಾರೆ. ಸಂಸ್ಥೆಯ ಸಮಾಜ ವಿಜ್ಞಾನ ಶಿಕ್ಷಕರಾದ ಸುಬ್ರಮಣ್ಯ ಭಟ್, ಟಿ. ವಿನಾಯಕ ಭಟ್, ಗುಡ್ಡಪ್ಪ ಬಲ್ಯ, ಸುಮ, ಜೆಸ್ಸಿ ಪಿ.ವಿ. ಮಾರ್ಗದರ್ಶನ ನೀಡಿದ್ದಾರೆ ಎಂದು ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ತಿಳಿಸಿದ್ದಾರೆ.

ಗಾಳಿ- ಮಳೆ
ಮಂಗಳೂರು: ಜಿಲ್ಲೆಯಲ್ಲಿ ಶನಿವಾರ ಮಳೆ ಕಡಿಮೆಯಾಗಿದ್ದು, ಆಗಾಗ ಗಾಳಿ-ಮಳೆ ಬರುತ್ತಿದ್ದರೂ, ಬಿಸಿಲು ಕಾಣಿಸಿತ್ತು. ಸಂಜೆ ವೇಳೆ ಜೋರಾಗಿ ಸುರಿದ ಮಳೆಯಿಂದ ತಣ್ಣನೆ ವಾತಾವರಣವಿತ್ತು. ಶನಿವಾರ ಬೆಳಗ್ಗಿನವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ 45.6 ಹೆಚ್ಚು ಮಳೆ ಸುರಿದಿದೆ.
ಮಳೆ ವಿವರ: ಮಂಗಳೂರು- 16.6 ಮಿ.ಮೀ., ಬಂಟ್ವಾಳ- 19.7 ಮಿ.ಮೀ., ಪುತ್ತೂರು- 30.0 ಮಿ.ಮೀ., ಸುಳ್ಯ- 21.0 ಮಿ.ಮೀ., ಮೂಡುಬಿದಿರೆ- 32.4 ಮಿ.ಮೀ., ಕಡಬ- 34.0 ಮಿ.ಮೀ., ಬಜ್ಪೆ- 14.0 ಮಿ.ಮೀ. ಮಳೆ ದಾಖಲಾಗಿದೆ. ಬಂಟ್ವಾಳ ನೇತ್ರಾವತಿ ನದಿ ನೀರಿನ ಮಟ್ಟ 2.7 ಮೀ ಹಾಗೂ ಕುಮಾರಧಾರ ನದಿ ನೀರಿನ ಮಟ್ಟ 3.0 ಮೀ ಏರಿಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.