ದಕ್ಷಿಣ ಕನ್ನಡ

ವಾರದಿಂದ ವಿದ್ಯುತ್ ಖೋತಾ

Published On :

ಸುಬ್ರಹ್ಮಣ್ಯ: ಸತತವಾಗಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಬೀಸಿದ ಭಾರಿ ಗಾಳಿಗೆ ವಿದ್ಯುತ್ ಕಂಬ, ಮರಗಳು ಧರೆಗೆ ಉರುಳುತ್ತಿರುವುದರ ಪರಿಣಾಮ ಗ್ರಾಮೀಣ ಭಾಗಕ್ಕೆ ವಿದ್ಯುತ್ ಇಲ್ಲದೆ ಜನತೆ ಕತ್ತಲಲ್ಲಿ ದಿನ ಕಳೆಯುವಂತಾಗಿದೆ.
ಸುಬ್ರಹ್ಮಣ್ಯ ಆಸುಪಾಸಿನ ಪ್ರದೇಶಗಳಾದ ಕೊಲ್ಲಮೊಗ್ರ, ಹರಿಹರ, ಕಲ್ಮಕಾರು, ಮುಳ್ಳುಬಾಗಿಲಿನ ಪರಿಸರದಲ್ಲಿನ ಮನೆಗಳಿಗೆ ವಾರದಿಂದ ವಿದ್ಯುತ್ ಸೇವೆ ಬಳಕೆಗೆ ದೊರೆತಿಲ್ಲ. ಕಲ್ಮಕಾರುವಿನ ಬಾಳೆಬೈಲು ಎಂಬಲ್ಲಿ ಎರಡು ವಿದ್ಯುತ್ ಕಂಬ, ಗೂನಡ್ಕ ಎಂಬಲ್ಲಿ 7 ವಿದ್ಯುತ್ ಕಂಬಗಳು ಉರುಳಿ ಬಿದ್ದ ಕಾರಣ ಕಳೆದ ಗುರುವಾರದಿಂದ ಈ ಪರಿಸರಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೊಲ್ಲಮೊಗ್ರ ಸಾಗುವ ವಿದ್ಯುತ್ ತಂತಿಗಳ ಮೇಲೆ ನಿರಂತರವಾಗಿ ಮರಗಳು ಬೀಳುತ್ತಿದ್ದು ಮೆಸ್ಕಾಂ ಸಿಬ್ಬಂದಿ ಹರಸಾಹಸ ಪಟ್ಟು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬಾಳುಗೋಡು ಕಡೆಯಲ್ಲೂ ಇದೇ ತೆರನಾದ ಸಮಸ್ಯೆ ಉದ್ಭವಿಸಿ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಮುಳ್ಳುಬಾಗಿಲು ಎಂಬ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕಜ್ಜೋಡಿ ಕ್ರಾಸ್ ಬಳಿ ಇರುವ ವಿದ್ಯುತ್ ಪರಿವರ್ತಕದ ಮೇಲೆ ಬೃಹತ್ ಸಂಪರ್ಕ ಇಲ್ಲದೆ ನಿತ್ಯದ ಕೆಲಸಕ್ಕೆ ಅಡ್ಡಿಯಾಗಿದೆ.
ಸಿಬ್ಬಂದಿ ಕೊರತೆ: ಗ್ರಾಮೀಣ ಭಾಗದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಸಮಸ್ಯೆ ಬಿಗಡಾಯಿಸುತ್ತಿದ್ದು, ಈಗ ಇರುವ ಸೀಮಿತ ಮೆಸ್ಕಾಂ ಲೈನುಗಳು ಮಳೆಗೆ ಒದ್ದೆಯಾಗಿಕೊಂಡು ಹರಸಾಹಸ ಪಟ್ಟು ಕೆಟ್ಟುಹೋದ ಲೈನ್‌ಮನ್‌ಗಳ ದುರಸ್ತಿಗೆ ಸಾಹಸ ಕಾರ್ಯದಲ್ಲಿ ನಿರತರಾಗಿದ್ದರೂ ತುರ್ತು ಸೇವೆ ನೀಡುವಲ್ಲಿ ಅಡಚಣೆಯಾಗುತ್ತಿದೆ.
ಹಾಗಾಗಿ ಗ್ರಾಮೀಣ ಭಾಗಗಳಿಗೆ ವಿಶೇಷವಾಗಿ ತುರ್ತು ಸೇವೆಗೆ ಮಳೆಗಾಲ ಸಂದರ್ಭ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸುವಂತೆ ಈ ಭಾಗದ ನಾಗರಿಕರು ಇಲಾಖೆ ಹಾಗೂ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.                  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.