ದಕ್ಷಿಣ ಕನ್ನಡ

ಮತದಾನ: ದ.ಕ. ಶೇ.66, ಉಡುಪಿ ಶೇ.75

Published On :

ಮಂಗಳೂರು: ದ.ಕ.ಜಿಲ್ಲೆಯ 7 ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ನಡೆದ ಚುನಾವಣೆ ಶಾಂತಿಯುತ ಮುಕ್ತಾಯ ಕಂಡಿದ್ದು, ಶೇ.66.24 ಮತದಾನವಾಗಿದೆ.
ಒಟ್ಟು 464298 ಮತದಾರರ ಪೈಕಿ ಮತ ಚಲಾಯಿಸಿದವರು 307537. ಇದರಲ್ಲಿ 148311 ಪುರುಷ ಹಾಗೂ 159226 ಮಹಿಳಾ ಮತದಾರರು. ಜಿಲ್ಲೆಯ ಸುಳ್ಯ ಪಟ್ಟಣ ಪಂಚಾಯ್ತಿಯಲ್ಲಿ ಶೇ.80.10 ಗರಿಷ್ಠ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ.63.33 ಕನಿಷ್ಠ ಮತದಾನ ದಾಖಲಾಗಿದೆ.
ಎಲ್ಲೆಲ್ಲಿ, ಎಷ್ಟೆಷ್ಟು ಮತದಾನ?
-ಮಂಗಳೂರು ಮಹಾನಗರ ಪಾಲಿಕೆಯ 326995 ಮತದಾರರಲ್ಲಿ 99570 ಪುರುಷ ಹಾಗೂ 107500 ಮಹಿಳಾ ಮತದಾರರು ಸೇರಿ ಒಟ್ಟು 207070 ಮಂದಿ ಮತ ಚಲಾಯಿಸಿದ್ದಾರೆ. ಶೇ.63.33 ಮತ ಚಲಾವಣೆಯಾಗಿದೆ.
-ಉಳ್ಳಾಲ ಪುರಸಭೆಯ 38015 ಮತದಾರರಲ್ಲಿ 26641 ಮತ ಚಲಾವಣೆಯಾಗಿದ್ದು, 12723 ಪುರುಷ ಹಾಗೂ 13918 ಮಹಿಳಾ ಮತದಾರರು, ಮತದಾನ ಪ್ರಮಾಣ ಶೇ.70.08.
-ಮೂಡುಬಿದಿರೆ ಪುರಸಭೆಯ 19022 ಮತದಾರರಲ್ಲಿ 14046 ಮಂದಿ ಮತ ಚಲಾಯಿಸಿದ್ದು, ಇದರಲ್ಲಿ 6602 ಪುರುಷ ಹಾಗೂ 7444 ಮಹಿಳಾ ಮತದಾರರು, ಮತದಾನ ಶೇ.73.84 ಆಗಿತ್ತು.
-ಬಂಟ್ವಾಳ ಪುರಸಭೆಯ 28261 ಮತದಾರರಲ್ಲಿ 21504 ಮಚ ಚಲಾವಣೆಯಾಗಿದ್ದು, 10505 ಪುರುಷ ಮತ್ತು 10999 ಮಹಿಳಾ ಮತದಾರರು, ಚಲಾಯಿಸಿದ ಮತ ಶೇ.76.09.
-ಪುತ್ತೂರು ಪುರಸಭೆಯ 34482 ಮತದಾರರಲ್ಲಿ 24489 ಮಂದಿ ಮತ ಚಲಾಯಿಸಿದ್ದು, 12056 ಪುರುಷ ಹಾಗೂ 12433 ಮಹಿಳಾ ಮತದಾರರು. ಶೇ.71.02 ಮತದಾನ ದಾಖಲಾಗಿದೆ.
-ಬೆಳ್ತಂಗಡಿ ಪಟ್ಟಣ ಪಂಚಾಯ್ತಿಯ 5390 ಮತದಾರರಲ್ಲಿ 4069 ಮಂದಿ ಮತ ಚಲಾಯಿಸಿದ್ದಾರೆ. 1943 ಪುರುಷ ಹಾಗೂ 2126 ಮಹಿಳಾ ಮತದಾರರು, ಚಲಾವಣೆಯಾದ ಮತ ಶೇ.75.49.
ಸುಳ್ಯ ಪಟ್ಟಣ ಪಂಚಾಯ್ತಿಯ 12133 ಮತದಾರರಲ್ಲಿ 9718 ಮತ ಚಲಾವಣೆಯಾಗಿದ್ದು, 4912 ಪುರುಷ ಹಾಗೂ 4806 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಚಲಾಯಿಸಿದ ಮತ ಶೇ.80.10.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.