ರಸ್ತೆ ಅಪಘಾತ ಗಾಯಾಳು ಸಾವು
ವಿಟ್ಲ: ಇತ್ತೀಚೆಗೆ ನೇರಳಕಟ್ಟೆ ಎಂಬಲ್ಲಿ ಜೀಪು ಅಪಘಾತದಲ್ಲಿ ಗಾಯಗೊಂಡು ಗುಣಮುಖರಾಗಿದ್ದ ವ್ಯಕ್ತಿ ಏಕಾಏಕಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಕೊಡಿಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಕೊಡಿಪ್ಪಾಡಿ ಗ್ರಾಮದ ಬಟ್ರಪ್ಪಾಡಿ ದೇವಪ್ಪ ಗೌಡ(36) ಮೃತರು. ಅವರು ಕಳೆದ ಡಿ.19ರಂದು ನೇರಳಕಟ್ಟೆ ಎಂಬಲ್ಲಿ ನಡೆದಿದ್ದ ಜೀಪು ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಬುಧವಾರ ದಿಢೀರನೆ ಅಸ್ವಸ್ಥಗೊಂಡಿದ್ದು, ವಿಟ್ಲ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರೆಂದು ತಿಳಿದುಬಂದಿದೆ.
ನೇಣು ಬಿಗಿದು ಆತ್ಮಹತ್ಯೆ
ವಿಟ್ಲ: ಪುಣಚ ಗ್ರಾಮದ ಮೂಡಂಬೈಲು ಬಾಲಕೃಷ್ಣ ರೈ (55) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬುಧವಾರ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದು, ಸಮೀಪದ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಈ ಬಗ್ಗೆ ಅವರ ಭಾವ ಜಯರಾಮ ರೈ ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಮಾವೇಶ ವೇಳೆ ಕಲ್ಲು ತೂರಾಟ: ಉದ್ವಿಗ್ನ
ಉಪ್ಪಿನಂಗಡಿ: ಕರಾಯದಲ್ಲಿ ನಡೆದ ಎಸ್ಎಸ್ಎಫ್ ಸಂಘಟನೆಯ ಸಮಾವೇಶದ ಮುಕ್ತಾಯ ಹಂತದಲ್ಲಿ ಕಲ್ಲು ತೂರಾಟ ನಡೆದು ಉದ್ವಿಗ್ನ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ. ಸಮಾವೇಶವು ಮುಕ್ತಾಯ ಹಂತದಲ್ಲಿದ್ದಾಗ ಜಿಂದಾಬಾದ್ ಘೋಷಣೆಗಳ ನಡುವೆ ಕಲ್ಲೊಂದು ಗುಂಪಿನತ್ತ ತೂರಿ ಬಂದು ಉದ್ವಿಗ್ನತೆ ಮೂಡಿತು. ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ಮೀಸಲು ಪೊಲೀಸ್ ತುಕುಡಿ ಕಾರ್ಯಾಚರಣೆ ನಡೆಸಿ ಜನರನ್ನು ಚದುರಿಸುವಲ್ಲಿ ಯಶಸ್ವಿಯಾದರು.
ಇಂದಿನಿಂದ ನೇಮೋತ್ಸವ
ಮೂಲ್ಕಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರಿನ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಮಾ.8ರಿಂದ 11ರವರೆಗೆ ವರ್ಷಾವಧಿ ನೇಮೋತ್ಸವ ನಡೆಯಲಿದೆ. 8ರಂದು ಅರಸು ಕುಂಜಿರಾಯ ದೈವದ ನೇಮೋತ್ಸವ, 9ರಂದು ಉಳ್ಳಾಯ ಹಾಗೂ ಪರಿವಾರ ದೈವಗಳ, ಕೊಡಮಣಿತ್ತಾಯ, ಕಾಂತೇರಿ ಧೂಮಾವತಿ ದೈವಗಳ ನೇಮೋತ್ಸವ, 10ರಂದು ಜಾರಂದಾಯ ಬಂಟ ಮತ್ತು ಸರಳ ಧೂಮಾವತಿ ದೈವಗಳ ನೇಮೋತ್ಸವ ಜರುಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

