ದಕ್ಷಿಣ ಕನ್ನಡ

ಅಣ್ಣನಿಂದಲೇ ತಮ್ಮನ ಕೊಲೆ

Published On :

ಕಾಪು: ತನ್ನ ತಾಯಿಗೆ ಕೀಟಲೆ ನೀಡುತ್ತಿದ್ದ ಎಂದು ಆರೋಪಿಸಿ ಅಣ್ಣನೇ ತಮ್ಮನನ್ನು ದೊಣ್ಣೆಯಿಂದ ಬಡಿದು ಕೊಲೆ ಮಾಡಿದ ಸಾಯಿಸಿದ ಘಟನೆ ಇಲ್ಲಿಯ ಇನ್ನಂಜೆ ಗ್ರಾಮದ ಮಡುಂಬು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಶಂಕರ ಪೂಜಾರಿ (45) ಮೃತರು. ಮಡುಂಬು ಗ್ರಾಮದ ಶಿವ ಪೂಜಾರಿ ಎಂಬವರ ಮಗ ಶಂಕರ (45) ಎಂಬಾತ ನಿತ್ಯ ಮದ್ಯಪಾನ ಮಾಡಿ ಬಂದು ತನ್ನ ತಾಯಿ ಪದ್ದು ಪೂಜಾರಿ ಅವರಿಗೆ ಹೊಡೆದು ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ. ಇದನ್ನು ಬುಧವಾರ ಸಂಜೆ ಪ್ರಶ್ನಿಸಿದ ಸಹೋದರ ಶ್ರೀನಿವಾಸ (55) ಅವರೊಂದಿಗೂ ಜಗಳ ಆರಂಭಿಸಿದ್ದಾನೆ.
 ಈ ಸಂದರ್ಭದಲ್ಲಿ ತಾಳ್ಮೆ ತಪ್ಪಿದ ಶ್ರೀನಿವಾಸ ಅವರು ಶಂಕರನ ತಲೆಗೆ ದೊಣ್ಣೆಯಿಂದ ಹೊಡೆದಿದ್ದು, ಪರಿಣಾಮ ಶಂಕರ ತೀವ್ರವಾಗಿ ಗಾಯಗೊಂಡು ಕೆಳಕ್ಕೆ ಉರುಳಿದ.
 ತಕ್ಷಣ ಶ್ರೀನಿವಾಸ ಆ್ಯಂಬುಲೆನ್ಸ್ ತರಿಸಿ ಶಂಕರನನ್ನು ಉಡುಪಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದ. ಆದರೆ, ಅದಾಗಲೇ ಶಂಕರನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆದರೆ, ಹೆದರಿ ಆಸ್ಪತ್ರೆಗೆ ದಾಖಲಿಸುವಾಗ ಶಂಕರನು ಮರದಿಂದ ಬಿದ್ದು ಮೃತಪಟ್ಟಿದ್ದ ಎಂದು ಶ್ರೀನಿವಾಸ ದೂರು ದಾಖಲಿಸಿದ್ದ.
 ಬೆಳಗಾಗುತ್ತಲೇ ಆಸ್ಪತ್ರೆಯಿಂದ ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಪು ಪೊಲೀಸರು ಆರೋಪಿ ಶ್ರೀನಿವಾಸನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆಯ ಸಂದರ್ಭ ತಾನೇ ಕೊಲೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.
 ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ಜಯಂತ್ ಶೆಟ್ಟಿ, ಕಾಪು ವೃತ್ತ ನಿರೀಕ್ಷಕ ಶಿವಾನಂದ್ ವಾಲೀಕರ್, ಠಾಣಾಧಿಕಾರಿ ಅರ್ಚನಾ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.