ದಕ್ಷಿಣ ಕನ್ನಡ

ಮೂಡುಬಿದಿರೆ: ಶೇ.73 ಮತದಾನ

Published On :

ಮೂಲ್ಕಿ: ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಶೇ. 73 ಮತದಾನವಾಗಿದೆ. ಕ್ಷೇತ್ರದಲ್ಲಿ 193 ಮತಗಟ್ಟೆಗಳಿದ್ದು, 83,075 ಗಂಡಸರು ಹಾಗೂ 90,391 ಮಹಿಳೆಯರು ಸೇರಿದಂತೆ ಒಟ್ಟು 1,73,466 ಮತದಾರರಿದ್ದಾರೆ.
ಕಣದಲ್ಲಿ ಕಾಂಗ್ರೆಸ್‌ನಿಂದ ಕೆ. ಅಭಯಚಂದ್ರ ಜೈನ್, ಜೆಡಿಎಸ್‌ನಿಂದ ಕೆ. ಅಮರನಾಥ ಶೆಟ್ಟಿ, ಬಿಜೆಪಿಯಿಂದ ಉಮಾನಾಥ ಕೋಟ್ಯಾನ್, ಕೆಜೆಪಿಯಿಂದ ಮೈಕಲ್ ಲೋಬೋ, ಎಸ್‌ಡಿಪಿಐನಿಂದ ಇಸ್ಮಾಯಿಲ್ ಎಂಜಿನಿಯರ್ ಹಾಗೂ ಪಕ್ಷೇತರರಾಗಿ ಅಭಯ ಕುಮಾರ್ ಜೈನ್ ಸೇರಿದಂತೆ ಒಟ್ಟು 6 ಮಂದಿ ಕಣದಲ್ಲಿದ್ದಾರೆ. 8ರಂದು ಫಲಿತಾಂಶ ಪ್ರಕಟವಾಗಲಿದೆ. 2008ರ ಚುನಾವಣೆಯಲ್ಲಿ 1,52,949 ಮತದಾರರಿದ್ದು ಶೇ. 72.27 ಮತದಾನವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಕೆ. ಅಭಯಚಂದ್ರ ಜೈನ್, ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ. ಅಮರನಾಥ ಶೆಟ್ಟಿಯವರು ಪ್ರತ್ಯೇಕವಾಗಿ ಭಾನುವಾರ ಬೆಳಗ್ಗೆ ಬಪ್ಪನಾಡು ದೇವಳಕ್ಕೆ ಬಂದು ಹೂವಿನ ಪೂಜೆಯ ಸೇವೆ ಸಲ್ಲಿಸಿದರು. ನಂತರ ತಮ್ಮತಮ್ಮ ಕ್ಷೇತ್ರದಲ್ಲಿ ಮತದಾನ ಮಾಡಿದರು. ಮೂಲ್ಕಿ ಹೋಬಳಿ ವ್ಯಾಪ್ತಿಯಲ್ಲಿ ಹಳೆಯಂಗಡಿ ಪೇಟೆಯಲ್ಲಿ ಶೇ. 81 ಅತ್ಯಧಿಕ ಮತದಾನವಾಗಿದ್ದು, ಪದ್ಮನೂರು ಮತ್ತು ಮೂಲ್ಕಿಯ ಕೊಳಚಿಕಂಬಳ ವಾರ್ಡ್‌ನಲ್ಲಿ ಶೇ. 64 ಅತೀ ಕಡಿಮೆ ಮತದಾನವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.