'ಭಗವಂತನ ಸಂಬಂಧದ ಬಂಧನವಿರಲಿ'
ಕಾಸರಗೋಡು: ನಮ್ಮ ಬದುಕಿನ ಸಾರ್ಥಕತೆಗೆ ಭಗವಂತನ ಸಂಬಂಧವಿರಬೇಕು. ಬೇರೆ ಎಲ್ಲ ಬಂಧಗಳನ್ನು ಕಳೆದುಕೊಂಡರೂ ದೇವರ ಸಂಬಂಧದ ಬಂಧನ ಸದಾ ಸಿಗಬೇಕು. ತಿರುಮಲ ತಿರುಪತಿ ದೇವರ ಸನ್ನಿಧಾನದಲ್ಲಿ ನೋಂದಣಿಗೊಳ್ಳುವ ದೊಡ್ಡ ಭಾಗ್ಯವನ್ನು ಭಗವಂತನು ಅನುಗ್ರಹಿಸಿದ್ದಾನೆ. ಭಜನೆಯೊಂದಿಗೆ ದೇವರ ಸಂಬಂಧವನ್ನು ನಿರಂತರವಾಗಿ ಬೆಳೆಸಿಕೊಳ್ಳಬೇಕು. ಇದೇ ಬದುಕಿನ ಸಾರ್ಥಕತೆಗೆ ಸಾಧನ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕರೆ ನೀಡಿದರು.
ಹನುಮ ಜಯಂತಿಯ ಪ್ರಯುಕ್ತ ಪೇಜಾವರ ಗ್ರಾಮದ ಮೂಲ ಮಠದಲ್ಲಿ ಆಯೋಜಿಸಿದ್ದ ತಿರುಮಲ ತಿರುಪತಿ ದೇವಸ್ಥಾನಗಳ ದಾಸ ಸಾಹಿತ್ಯ ಪ್ರಾಜೆಕ್ಟ್ ನೇತೃತ್ವದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಿರುವ ಭಜನಾ ಮಂಡಳಿ ನೋಂದಣಿ ಅಭಿಯಾನವನ್ನು ಉದ್ಘಾಟಿಸಿ ಅನುಗ್ರಹ ಸಂದೇಶವನ್ನು ನೀಡಿದರು.
ತಿರುಮಲ ತಿರುಪತಿ ದೇವಸ್ಥಾನಗಳ ದಾಸ ಸಾಹಿತ್ಯ ಪ್ರಾಜೆಕ್ಟ್ನಿಂದ ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿವಿಧ ಭಜನಾ ಮಂಡಳಿಯಿಂದ ಸಮೂಹ ಭಜನಾ ಗಾಯನ, ಶ್ರೀಮತಿ ಚೇತನಾ ಆಚಾರ್ಯ ಇವರಿಂದ ಭಕ್ತಿ ಸಂಗೀತ, ವಿದ್ವಾನ್ ಬಿ. ಗೋಪಾಲಾಚಾರ್ ಹಾಗೂ ವಿದ್ವಾನ್ ಬಿ.ಎನ್. ವಿಜಯೀಂದ್ರಾಚಾರ್ ಇವರಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಕೇರಳ ಪ್ರಾಂತ್ಯದ ಕಾಸರಗೋಡು ಜಿಲ್ಲೆಯಲ್ಲಿ ಸುಮಾರು 125ಕ್ಕೂ ಅಧಿಕ ಭಜನಾ ಮಂಡಳಿಗಳು ಟಿ.ಟಿ.ಡಿ. ದಾಸ ಸಾಹಿತ್ಯ ಪ್ರಾಜೆಕ್ಟ್ನಲ್ಲಿ ನೋಂದಣಿಗೊಂಡಿದ್ದು ಇದರಲ್ಲಿ 25ಕ್ಕೂ ಅಧಿಕ ಭಜನಾ ಮಂಡಳಿಗಳು ಸಕ್ರಿಯವಾಗಿದ್ದು, ಸುಮಾರು 200ರಷ್ಟು ಮಹಿಳೆಯರು ನಿರಂತರವಾಗಿ ಸಮೂಹ ದಾಸ ಸಂಕೀರ್ತನ ಗಾಯನವನ್ನು ಹಾಡಿ ಗೌರವಿಸಲ್ಪಡುತ್ತಿದ್ದಾರೆಂದು ಬಿ. ಗೋಪಾಲಾಚಾರ್ಯ ತಿಳಿಸಿದರು.
ಟಿ.ಟಿ.ಡಿ. ದಾಸ ಸಾಹಿತ್ಯ ಪ್ರಾಜೆಕ್ಟ್ ಕರಾವಳಿಯ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನೋಂದಣಿ ಅಭಿಯಾನವನ್ನು ಹಮ್ಮಿಕೊಂಡಿದೆ. 2013 ಮೇ ತಿಂಗಳ 19, 20, 21ರಂದು ಈ ಕಾರ್ಯಕ್ರಮವು ದಾಸ ಸಾಹಿತ್ಯ ವಿಶೇಷ ಪ್ರಾಜೆಕ್ಟ್ ವಿಶೇಷಾಧಿಕಾರಿಗಳಾದ ವಿದ್ವಾನ್ ಪಿ.ಆರ್. ಆನಂದತೀರ್ಥಾಚಾರ್ ಪಗಡಾಲ್ ನೇತೃತ್ವದಲ್ಲಿ ನಡೆಯಲಿದೆ. ಶ್ರೀ ಕೃಷ್ಣಮಠದ ಗೀತಾಮಂದಿರದ ತಿರುಮಲ ತಿರುಪತಿ ದೇವಸ್ಧಾನಂ ಮಾಹಿತಿ ಕೇಂದ್ರದಲ್ಲಿ ಇದರ ಅರ್ಜಿಯನ್ನು ನೀಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

