ಗೆದ್ದಾಕ್ಷಣ ಹೇಳಿದ್ದು...
ಗೆಲವು ಗ್ಯಾರಂಟಿ ಇತ್ತು...
ನಾನು ಹಿಂದೆ ಶಾಸಕನಾಗಿದ್ದ 5 ವರ್ಷಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಕಾಂಗ್ರೆಸ್ ಶಾಸಕರು 10 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತುಲನೆ ಮಾಡಿ, ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ. ಆದ್ದರಿಂದ ಮತದಾರರ ನಂಬಿಕೆ ವಿಶ್ವಾಸ ಹುಸಿಯಾಗದಂತೆ ಮುಂದಿನ ಐದು ವರ್ಷ ಪ್ರಾಮಾಣಿಕನಾಗಿ ಕೆಲಸ ಮಾಡುತ್ತೇನೆ. ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಸಕ್ರಿಯನಾಗಿದ್ದರಿಂದ ಗೆಲ್ಲುವುದು ಗ್ಯಾರಂಟಿ ಇತ್ತು.
ವಿ. ಸುನಿಲ್ಕುಮಾರ್, ಕಾರ್ಕಳ ಕ್ಷೇತ್ರ ವಿಜೇತ ಅಭ್ಯರ್ಥಿ.
ಟೈಮ್ ಇರ್ಲಿಲ್ಲಾ, ಆದ್ರೂ...
ಕೊನೆಯ ಕ್ಷಣದಲ್ಲಿ ಟಿಕೆಟ್ ಸಿಕ್ಕಿದ್ದರಿಂದ ಪ್ರಚಾರಕ್ಕೆ ಸಮಯಾವಕಾಶ ಕಡಿಮೆಯಿತ್ತು, ಮಾತ್ರವಲ್ಲ ನನ್ನನ್ನು ಸೋಲಿಸಲಿಕ್ಕಾಗಿಯೇ ಕೆಲವರು ಸ್ಪರ್ಧಿಸಿದ್ದರು. ಆದರೆ ಅಂತಹ ಯಾವುದೇ ತಂತ್ರಗಳು ಕೆಲಸ ಮಾಡಿಲ್ಲ. ಕಾರ್ಯಕರ್ತರ ಪಡೆ ಮಾಡಿದ ಕೆಲಸದಿಂದ ಗೆಲವು ಸಾಧ್ಯವಾಗಿದೆ. ನಾನು ಯಾವುದೇ ಉದ್ದಿಮೆಯ ಕೈಗೊಂಬೆಯಾಗಿ ಕೆಲಸ ಮಾಡುವುದಿಲ್ಲ, ಮತದಾರರಿಗೆ ನ್ಯಾಯ ಒದಗಿಸುತ್ತೇನೆ.
ವಿನಯಕುಮಾರ್ ಸೊರಕೆ,ಕಾಪು ಕ್ಷೇತ್ರ ವಿಜೇತ ಅಭ್ಯರ್ಥಿ.
ಮುಂದೆ ಜನರ ನಿರ್ಧಾರ...
ಹಿಂದಿನ 3 ಬಾರಿಗಿಂತಲೂ ಈ ಬಾರಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಮತದಾರರು ಗೆಲ್ಲಿಸಿದ್ದಾರೆ, ಇದರ ಜೊತೆಗೆ ಪಕ್ಷೇತರನಾದ್ದರಿಂದ ಜವಾಬ್ದಾರಿ ಕೂಡ ಹೆಚ್ಚಿದೆ, ಆದರೆ ಪಕ್ಷದ ಹಂಗಿಲ್ಲದೆ ಇರುವುದರಿಂದ ಹೆಚ್ಚು ಕೆಲಸಗಳನ್ನು ಮಾಡಲು ಅವಕಾಶಗಳಿರುತ್ತವೆ. ಮುಂದೇನೂ ಮಾಡಬೇಕು, ಬಿಜೆಪಿ ಸೇರಬೇಕೋ ಬೇಡವೋ ಎಂದು ಕ್ಷೇತ್ರದ ಜನರು ನಿರ್ಧರಿಸುತ್ತಾರೆ, ಹಾಗೆ ಮಾಡುತ್ತೇನೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಜೇತ ಪಕ್ಷೇತರ ಅಭ್ಯರ್ಥಿ, ಕುಂದಾಪುರ ಕ್ಷೇತ್ರ.
ಅಹಂಕಾರ ಬಾರದಿರಲಿ...
ಇಷ್ಟು ದೊಡ್ಡ ಅಂತರದಲ್ಲಿ ಗೆದ್ದಿದ್ದೇನೆ, ಆದ್ದರಿಂದ ನನಗೆ ಲವಲೇಶವೂ ಆಹಂಕಾರ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಉಡುಪಿಯಲ್ಲಿ ಇನ್ನೂ ಬೇಕಾದಷ್ಟು ಅಭಿವೃದ್ಧಿ ಕೆಲಸಗಳಾಗಬೇಕಾಗಿದೆ. ಮುಖ್ಯವಾಗಿ ಈಗಾಗಲೇ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.
ಪ್ರಮೋದ್ ಮಧ್ವರಾಜ್, ಉಡುಪಿ ಕ್ಷೇತ್ರ ಕಾಂಗ್ರೆಸ್ನಿಂದ ವಿಜೇತ ಅಭ್ಯರ್ಥಿ.
ಜನ ಆಶೀರ್ವದಿಸಿದ್ದಾರೆ...
ನನ್ನನ್ನು ಬೆಂಬಲಿಸಿ 31 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸಿ ಬೈಂದೂರು ಕ್ಷೇತ್ರದ ಜನರು ಆಶೀರ್ವದಿಸಿದ್ದಾರೆ, ಕರಾವಳಿಯಾದ್ಯಂತ ಕಾಂಗ್ರೆಸನ್ನು ಗೆಲ್ಲಿಸಿ ಸ್ವಚ್ಛ ಆಡಳಿತಕ್ಕೆ ಅವಕಾಶ ನೀಡಿದ್ದಾರೆ. ರಾಜ್ಯದಲ್ಲಿ ಇನ್ನು ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಇದರಿಂದ ಕರಾವಳಿ ಭಾಗದ ಅಭಿವೃದ್ಧಿಗೆ ಒತ್ತು ಸಿಗುತ್ತದೆ. ನನ್ನನ್ನು ಮಂತ್ರಿ ಮಾಡುವುದು ಹೈಕಮಾಂಡ್ಗೆ ಬಿಟ್ಟ ವಿಷಯ.
ಕೆ. ಗೋಪಾಲ ಪೂಜಾರಿ, ಕಾಂಗ್ರೆಸ್ನಿಂದ ಬೈಂದೂರು ಕ್ಷೇತ್ರ ವಿಜೇತ ಅಭ್ಯರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

