ಸಿಪಿಐ ದೇಶವ್ಯಾಪಿ ಹೋರಾಟ
ಮಂಗಳೂರು: ಬೆಲೆ ಏರಿಕೆ, ಕೃಷಿ ವಿನಾಶ, ನಿರುದ್ಯೋಗ ಸಮಸ್ಯೆಗಳಿಂದ ದೇಶದ ಆರ್ಥಿಕ ಬಿಕ್ಕಟ್ಟು ವಿಷಮಿಸಿದೆ. ಇದರ ವಿರುದ್ಧ ಸಿಪಿಐ ಪಕ್ಷ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದು ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಅಮರಜಿತ್ ಕೌರ್ ಹೇಳಿದರು.
ಕಮ್ಯೂನಿಷ್ಟ್ ಪಕ್ಷ ವತಿಯಿಂದ ದೇಶವ್ಯಾಪಿ ಪ್ರಚಾರ ಆಂದೋಲನ ಸೆಪ್ಟಂಬರ್ ತಿಂಗಳಲ್ಲಿ ಆರಂಭವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೇಶದಲ್ಲಿ ದುಡಿಯುವ ವರ್ಗ ಮತ್ತು ಆಡಳಿತ ನಡೆಸುವ ವರ್ಗದ ನಡುವಿನ ಆದಾಯದ ಅಂತರ ಬಹಳ ಹೆಚ್ಚಾಗುತ್ತಿದೆ. ಹಗರಣಗಳ ಸರಮಾಲೆಯಿಂದ ಜನರಲ್ಲಿ ಹೋರಾಟದ ಮನೋಭಾವ ಕಾಣುತ್ತಿದೆ. ಸರ್ಕಾರ ಶಿಕ್ಷಣ, ಆರೋಗ್ಯ ಮೊದಲಾದ ಮೂಲಭೂತ ಸೌಕರ್ಯ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿದ್ದು, ಜನರ ಹಿತವನ್ನು ಬಲಿ ಕೊಡುತ್ತಿದೆ. ಅಧಿಕಾರ ಶಾಹಿಗಳನ್ನು ರಕ್ಷಿಸುತ್ತಿದೆ. ವಿದೇಶಿ ಹಣಕ್ಕೆ ಕೈ ಒಡ್ಡುವ ಬದಲು ಶ್ರೀಮಂತ ಮತ್ತು ಕಾರ್ಪೊರೇಟ್ ಕ್ಷೇತ್ರದ ತೆರಿಗೆ ವಸೂಲಿಯನ್ನು ಬಲಗೊಳಿಸಬೇಕು. ಕಪ್ಪು ಹಣ ಚಲಾವಣೆ ಹತ್ತಿಕ್ಕಬೇಕು ಎಂದರು. ಬಿ.ವಿ.ಲೋಕೇಶ್, ಸಂಜೀವ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

