ಬಾಲಕಿ, ಯುವತಿ ನಾಪತ್ತೆ
ಮಂಗಳೂರು: ಕಾವೂರು ಪಂಜಿಮೊಗರು ನಿವಾಸಿ ಶೋಭಾ (14)ಮೇ 20ರಿಂದ ನಾಪತ್ತೆಯಾಗಿದ್ದಾಳೆ. 4.6 ಎತ್ತರ, ಬಿಳಿ ಮೈಬಣ್ಣ, ದೃಢಕಾಯ ಶರೀರ, ಚಿನ್ನದ ಓಲೆ ಧರಿಸಿದ್ದು, ನೀಲಿ ಲಂಗ, ಕಪ್ಪು ರವಿಕೆ ಧರಿಸಿದ್ದಾಳೆ.
ಯುವತಿ ನಾಪತ್ತೆ: ಕೊಟ್ಟಾರಚೌಕಿ ಜಲ್ಲಿಗುಡ್ಡೆ ನೀಲಮ್ಮ (22) ಕಾಲೇಜಿಗೆ ಹೋಗುತ್ತೇನೆ ಎಂದು ಮೇ 17ರಂದು ಮನೆ ಬಿಟ್ಟು ಹೋದವರು ವಾಪಸ್ ಬಂದಿಲ್ಲ. 4.6 ಎತ್ತರ, ಬಿಳಿ ಮೈಬಣ್ಣ, ಸಪೂರ ಶರೀರ, ಚಿನ್ನದ ಸರ, ಬೆಂಡೋಲೆ ಧರಿಸಿದ್ದು ಕನ್ನಡ, ತುಳು, ಇಂಗ್ಲಿಷ್, ಹಳೆಗನ್ನಡ ಮಾತನಾಡುತ್ತಾಳೆ. ಇವರನ್ನು ಕಂಡರೆ ಕಾವೂರು ಪೊಲೀಸ್ ಠಾಣೆ 2220533 ಸಂಪರ್ಕಿಸಬಹುದು.
ಕನ್ಯಾನ: ಎರಡು ಮನೆಗೆ ನುಗ್ಗಿದ ಕಳ್ಳರು
ವಿಟ್ಲ: ಕನ್ಯಾನ ಗ್ರಾಮದ ಪೊಯ್ಯಗದ್ದೆಯ ಎರಡು ಮನೆಗೆ ಬುಧವಾರ ರಾತ್ರಿ ಕಳ್ಳರು ನುಗ್ಗಿ ಮನೆಯೊಳಗೆ ಸಂಪೂರ್ಣ ತಡಕಾಡಿ ಕಪಾಟು ತೆರೆದು ಎರಡು ಉಂಗುರಗಳನ್ನು ಕಳವುಗೈದ ಘಟನೆ ನಡೆದಿದೆ.
ಪೊಯ್ಯಗದ್ದೆ ಕೆ.ಎಸ್. ಇಬ್ರಾಹಿಂ ಅವರ ಮನೆಯ ಹಿಂಬಾಗಿಲ ಚಿಲಕವನ್ನು ಮುರಿದು ಒಳಗೆ ಪ್ರವೇಶಿಸಿದ್ದು, ಕಪಾಟಿನ ಕೀಲಿಕೈ ಸಿಕ್ಕಿದ ಬಳಿಕ ಎಲ್ಲವನ್ನೂ ತೆರೆದ ಕಳ್ಳರಿಗೆ ದಕ್ಕಿದ್ದು ಎರಡು ಉಂಗುರಗಳು. 1 ಗ್ರಾಂ ಗೋಲ್ಡನ್ನು ಗುರುತಿಸಿ, ಅಲ್ಲೇ ಬಿಟ್ಟು ತೆರಳಿದ್ದಾರೆ. ಕೆಲ ದಾಖಲೆಗಳನ್ನು ಮನೆ ಪಕ್ಕದಲ್ಲೇ ಎಸೆದು ಓಡಿದ್ದಾರೆ. ನಿದ್ದೆಯಲ್ಲಿದ್ದ ಓರ್ವರ ಕಣ್ಣಿಗೆ ಬಿದ್ದ ಲೈಟಿನ ಬೆಳಕಿನಿಂದ ಎಚ್ಚರಗೊಂಡು ಕೂಗಾಡಿದಾಗ ಕಳ್ಳರು ಪರಾರಿಯಾಗಿದ್ದಾರೆ. ಪಕ್ಕದ ಮನೆಯ ಮೇಲಂತಸ್ತಿನ ಮೂಲಕ ಪ್ರವೇಶಿಸಲೆತ್ನಿಸಿದರೂ ಮನೆಯವರು ಎಚ್ಚರಗೊಂಡಿದ್ದರಿಂದ ಕಳ್ಳತನ ಯತ್ನ ವಿಫಲವಾಯಿತು ಎನ್ನಲಾಗಿದೆ. ವಿಟ್ಲ ಪೊಲೀಸರು ರಾತ್ರಿ 3 ಗಂಟೆಗೆ ತೆರಳಿ ಪರಿಶೀಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

