ದಕ್ಷಿಣ ಕನ್ನಡ

ತರಕಾರಿ ಬೀಜ, ಗಿಡಗಳ ಮಾರಾಟ

Published On :

ಮಂಗಳೂರು: ತೋಟಗಾರಿಕೆ ಇಲಾಖೆ ಅಧೀನದಲ್ಲಿರುವ ಸಿರಿ ತೋಟಗಾರಿಕೆ ಸಂಘ ಕಚೇರಿಯಲ್ಲಿ ತರಕಾರಿ, ಹಣ್ಣಿನ ಬೀಜ, ಸಸ್ಯಗಳು ಮಾರಾಟಕ್ಕಿದೆ. ವಿವಿಧ ತರಕಾರಿ ಬೀಜಗಳು, ಟೆರೇಸ್ ಗಾರ್ಡನಿಂಗ್ ಬ್ಯಾಗ್, ಸಾವಯವ ಗೊಬ್ಬರ, ತೋಟಗಾರಿಕೆ ಬೆಳೆಗಳ ಕಸಿ ಹಾಗೂ ಸಸಿ ಗಿಡಗಳು ಲಭ್ಯವಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಬೆಂದೂರ್‌ವೆಲ್‌ನ ಸಿರಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಸಂಘದ ಪದನಿಮಿತ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸದರ ನಿಧಿ ಬಿಡುಗಡೆ
ಮಂಗಳೂರು: ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರ 2012-13ನೇ ಸಾಲಿನ ಅನುದಾನ ಬಿಡುಗಡೆಗೊಂಡಿದೆ. ಅಡ್ಯಾರ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರ್ಕುಳ ಗ್ರಾಮದ ವಳಚ್ಚಿಲ್ ಅಮರನಾಥ ಎಂಬವರ ಮನೆ ಬಳಿಯಿಂದ ರಸ್ತೆಯವರಗೆ ಚರಂಡಿ ರಚನೆ ಕಾಮಗಾರಿಗೆ ಮಂಜೂರಾಗಿದ್ದ ರು. 2.50 ಲಕ್ಷ ಮೊತ್ತದಲ್ಲಿ, ರು. 1.87 ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದ್ದಾರೆ.
ಅವಧಿ ವಿಸ್ತರಣೆ
ಮಂಗಳೂರು: ಕದ್ರಿ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಬೊಂದೆಲ್‌ನ ಮಹಿಳಾ ಪಾಲಿಟೆಕ್ನಿಕ್ ಇಲ್ಲಿನ ಪ್ರವೇಶ ಶುಲ್ಕವನ್ನು ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನಲ್ಲಿ ಪಾವತಿಸಿದ ಚಲನ್ ಪ್ರತಿ ತೋರಿಸಿ ಅರ್ಜಿಯನ್ನು ಪಡೆಯಬಹುದು. ಅರ್ಜಿಯನ್ನು ಜೂ. 1ರೊಳಗೆ ಸಂಜೆ 5ರೊಳಗೆ ಸಂಸ್ಥೆಗೆ ಸಲ್ಲಿಸಬಹುದು. 2013-14ನೇ ಸಾಲಿನ ಪ್ರಥಮ ಡಿಪ್ಲೋಮ ಪವೇಶ ಪ್ರಕ್ರಿಯೆಗೆ ಸಂಬಂಧಿಸಿದ ಮೆರಿಟ್ ಪಟ್ಟಿ ಪ್ರಕಟಣೆ ಹಾಗೂ ವಿವಿಧ ಹಂತಗಳ ಸೀಟು ಹಂಚಿಕೆ ಕುರಿತು ಪರಿಷ್ಕೃತ ವೇಳಾ ಪಟ್ಟಿಯನ್ನು ನಿರ್ದೇಶನಾಲಯ ವೆಬ್‌ಸೈಟ್ ಢಿಢಿಢಿ.ಜಡಿಜ.್ಞಛ್ಠ.ಟ್ಝ್ಛಿ.್ಝಟಿ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.