ದಕ್ಷಿಣ ಕನ್ನಡ

ಛಾವಣಿಯ ಶೀಟ್ ಕಳವು!

Published On :

ವಿಟ್ಲ: ಶೆಡ್‌ನ ಮೇಲ್ಛಾವಣಿಗೆ ಹಾಕಿದ್ದ ಸಿಮೆಂಟ್ ಶೀಟುಗಳನ್ನೇ ಕದ್ದ ಆಶ್ಚರ್ಯಕಾರಿ ಘಟನೆ ಮಾಣಿಲ ಸಮೀಪದ ನಡೆದಿದೆ. ಮಾಣಿಲ ಸಮೀಪದ ನಾಯರ್‌ಮೂಲೆ ಎಂಬಲ್ಲಿನ ಗೋಪಾಲಕೃಷ್ಣ ಭಟ್ ತಮ್ಮ ಮನೆ ಶೆಡ್‌ಗೆ ಸಿಮೆಂಟ್ ಶೀಟ್‌ಗಳನ್ನು ಹಾಕಿದ್ದು ಮರುದಿನ ನೋಡಿದಾಗ ಶೀಟುಗಳೇ ಕಳವಾಗಿರುವುದು ಕಂಡುಬಂದಿದೆ.  ಕಳವಾಗಿರುವ ಸೊತ್ತುಗಳ ಮೌಲ್ಯ ಸುಮಾರು ರು. 4 ಸಾವಿರ ಎಂದು ಅಂದಾಜಿಸಲಾಗಿದ್ದು ಪೊಲಿಸರಿಗೆ ದೂರು ನೀಡಿದ್ದಾರೆ.

ರಸ್ತೆ ವಿವಾದ: ತಂಡ ಹಲ್ಲೆ
ವಿಟ್ಲ: ಕರೋಪಾಡಿ ಗ್ರಾಮದ  ಪಡ್ಪು ಸುಬ್ರಹ್ಮಣ್ಯ(46) ಮತ್ತು ರಾಧಾಕೃಷ್ಣ (32) ಎಂಬವರು ಏಳೆಂಟು ಮಂದಿಯ ತಂಡದೊಂದಿಗೆ ಸಮೀಪದ ಶಾರದಮ್ಮ (66) ಮತ್ತು ಈಶ್ವರಚಂದ್ರ (28) ಅವರಿಗೆ ಸೋಂಟೆಯಿಂದ ಹಲ್ಲೆ ನಡೆಸಿದ್ದಾರೆ. ರಸ್ತೆ ವಿವಾದವೇ ಇದಕ್ಕೆ ಕಾರಣವೆಂದು ತಿಳಿದುಬಂದಿದೆ. ಗಾಯಾಳುಗಳು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದೇ ಸಂದರ್ಭ ಈಶ್ವರಚಂದ್ರ ಮರದ ಸೋಂಟೆಯಿಂದ ಉಷಾಗೆ ಮರದ ಸೋಂಟೆಯಲ್ಲಿ ಹಲ್ಲೆ ನಡೆಸಿದ್ದಾರೆ. ಉಷಾ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಿಟ್ಲ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಅಂಗಳದಿಂದ ಕಾರು ನಾಪತ್ತೆ!
ವಿಟ್ಲ: ಪುಣಚದ ಶಿಕ್ಷಕರೊಬ್ಬರು ಮನೆ ಅಂಗಳದಲ್ಲಿ ರಾತ್ರಿ ನಿಲ್ಲಿಸಿದ್ದ ಮಾರುತಿ ಕಾರು ಮರುದಿನ ಬೆಳಗ್ಗೆ ನಾಪತ್ತೆಯಾಗಿದೆ. ಪುಣಚದ ದೇವಿನಗರ ಫ್ರೌಢಶಾಲೆಯ ಶಿಕ್ಷಕ ಉದಯ ಕುಮಾರ್  ರಾತ್ರಿ  ತನ್ನ ಮನೆಯಂಗಳದಲ್ಲಿ 'ಮಾರುತಿ 800' ಕಾರು ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ಕಾರು ನಾಪತ್ತೆಯಾಗಿದ್ದು ತಡರಾತ್ರಿಯಲ್ಲಿ ಕಳವಾಗಿರಬಹುದೆಂದು ಶಂಕಿಸಲಾಗಿದೆ. ವಿಟ್ಲ ಪೊಲೀಸರಿಗೆ ದೂರು ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.