ದಕ್ಷಿಣ ಕನ್ನಡ

ಕಳವಾದ ಲಾರಿ ಪತ್ತೆ

Published On :

ಮಂಗಳೂರು: ನಗರದ ನೀರುಮಾರ್ಗದಿಂದ ಕಳವಾದ ಲಾರಿ ಶಿರಾಡಿ ಘಾಟ್‌ನಲ್ಲಿ ಪತ್ತೆಯಾಗಿದೆ. ಪ್ರವೀಣ್ ಕುಮಾರ್ ಮಾಲಕತ್ವದ ಲಾರಿಯನ್ನು ಶುಕ್ರವಾರ ನೀರುಮಾರ್ಗದ ಮನೆ ಬಳಿಯ ಶೆಡ್‌ನಲ್ಲಿ ನಿಲ್ಲಿಸಿದ್ದರು. ಅಂದೇ ರಾತ್ರಿ ಲಾರಿ ಕಳವಾಗಿತ್ತು. ಈ ಬಗ್ಗೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಪತ್ತೆಯ ಜಾಡು ಹಿಡಿದ ಪೊಲೀಸರು ಭಾನುವಾರ ಶಿರಾಡಿ ಘಾಟ್‌ನಲ್ಲಿ ಲಾರಿ ಇರುವುದನ್ನು ಪತ್ತೆ ಮಾಡಿದರು. ಆದರೆ ಲಾರಿ ಕಳವು ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ. ಈಗ ಖಾಲಿ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು: ಅಸಹಜ ಸಾವು
ಮಂಗಳೂರು: ಕೊಡಿಯಾಲಬೈಲ್ ವಿವೇಕನಗರ ನಿವಾಸಿ ಸುಲೋಚನಾ(50)ಅಸೌಖ್ಯದಿಂದ ಸಾವಿಗೀಡಾದ ಘಟನೆ ಭಾನುವಾರ ನಡೆದಿದೆ. ಒಂದು ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಉಲ್ಬಣಗೊಂಡ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದರು ಎಂದು ಉರ್ವ ಪೊಲೀಸರಿಗೆ ದೂರಲಾಗಿದೆ.
ಕೂಳೂರು: ಮನೆಗೆ ಬೆಂಕಿ
ಮಂಗಳೂರು: ಕೂಳೂರು ಪಡುಕೋಡಿ ನಿವಾಸಿ ರುಕ್ಮಯ ಪೂಜಾರಿ ಎಂಬವರ ಮನೆ ಬೆಂಕಿ ಆಕಸ್ಮಿಕಕ್ಕೆ ಒಳಗಾಗಿ ಭಸ್ಮಗೊಂಡಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಬೆಂಕಿ ಕಂಡು ಮನೆಯವರು ಹೊರಗೋಡಿ ಬಚಾವ್ ಆಗಿದ್ದಾರೆ. ಬೆಂಕಿ ಯಿಂದ ಸುಮಾರು ರು. 1 ಲಕ್ಷ ನಷ್ಟ ಅಂದಾಜಿಸಲಾಗಿದೆ. ಕಾವೂರು ಪೊಲೀಸರಿಗೆ ದೂರು ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.