ಆಸ್ಪತ್ರೆಗಳಿಗೆ ದಂಡ
ಮಂಗಳೂರು: ಕರ್ನಾಟಕ ಪೌರನಿಗಮಗಳ ಕಾಯ್ದೆಯಡಿ ಪಾಲಿಕೆಯು ನಗರದ ಆಸ್ಪತ್ರೆ ಮತ್ತು ಮೋಟಾರ್ಸ್ ಸಂಸ್ಥೆಗಳಿಗೆ ತಲಾ ರು. 500 ದಂಡ ವಿಧಿಸಿದೆ.ಪಚ್ಚನಾಡಿ ಕಸ ಸಂಸ್ಕರಣಾ ಹಾಗೂ ವಿಲೇವಾರಿ ಘಟಕಕ್ಕೆ ಕೆಲ ಸಂಸ್ಥೆಗಳು ಪುರಸಭೆ ತ್ಯಾಜ್ಯದೊಂದಿಗೆ ಆಸ್ಪತ್ರೆ ಹಾಗೂ ವಾಹನ ಶೋ ರೂಂಗಳ ವಿಷಕಾರಿ ಕಸವನ್ನು ಹಾಕಿ ಸಾಗಾಣೆ ಮಾಡುತ್ತಿರುವುದು ಪಾಲಿಕೆ ಗಮನಕ್ಕೆ ಬಂದಿದ್ದು, ಸ್ಥಳ ಪರಿಶೀಲಿಸಿ ಸಾಕ್ಷಿ ಕಲೆ ಹಾಕಿದೆ. ಆದ್ದರಿಂದ ತಮ್ಮ ಸಂಸ್ಥೆಯಲ್ಲಿ ಉತ್ಪತ್ತಿಯಾಗುವ ವಿಷಕಾರಿ ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ, ಅಧಿಕೃತ ಸಂಸ್ಥೆಗೆ ವೈಜ್ಞಾನಿಕ ವಿಲೇವಾರಿಗೆ ಹಸ್ತಾಂತರಿಸುವಂತೆ ಪಾಲಿಕೆ ಪ್ರಕಟಣೆಯಲ್ಲಿ ಆದೇಶಿಸಿದೆ.
ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ
ಸುಳ್ಯ: ನಗರದಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹಳೆಗೇಟು ಗುಂಡ್ಯಡ್ಕ ನಿವಾಸಿ ಆನಂದ ಯಾನೆ ರುತಾನಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲ ಚಿಲಕ ಹಾಕಿ ನೇಣು ಬಿಗಿದುಕೊಂಡಿದ್ದರು. ಕೆಲಸಕ್ಕೆ ಹೋಗಿದ್ದ ಪತ್ನಿ ಸಂಜೆ ಮನೆಗೆ ಬಂದು ಬಾಗಿಲು ಬಡಿದು, ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದಿರುವುದು ಕಂಡುಬಂದಿದೆ. ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಟುಡಿಯೋದಲ್ಲಿ ಆತ್ಮಹತ್ಯೆ: ಇಲ್ಲಿನ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಸ್ಟುಡಿಯೋ ಮಾಲೀಕ ಚಂದ್ರಾ ರಾವ್ (50) ಎಂಬವರು ಸೋಮವಾರ ಮುಂಜಾನೆ ತನ್ನ ಸ್ಟುಡಿಯೋದಲ್ಲೇ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದಿಂದ ಬೇಸೆತ್ತು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

