ದಕ್ಷಿಣ ಕನ್ನಡ

ಮಲ್ಲೂರು ಘರ್ಷಣೆ: 50 ಮಂದಿ

Published On :

ಮಂಗಳೂರು: ಸೋಮವಾರ ರಾತ್ರಿ ಮಲ್ಲೂರಿನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
50ಕ್ಕೂ ಹೆಚ್ಚು ಮಂದಿ ದುಷ್ಕರ್ಮಿಗಳು ತಮ್ಮ ಮನೆಗೆ ನುಗ್ಗಿ  ಕುಂಞಪ್ಪ ಪೂಜಾರಿ ಮತ್ತು ಉಮಾವತಿಗೆ ಹಲ್ಲೆ ನಡೆಸಿದ್ದಾರೆ ಎಂದು ಮಲ್ಲೂರು ನಿವಾಸಿ ಲತಾ ದೂರು ನೀಡಿದ್ದಾರೆ. ದುಷ್ಕರ್ಮಿಗಳು ಮೈಮೇಲೆ ಕೈಹಾಕಿ ಮಾನಭಂಗಕ್ಕೂ ಯತ್ನಿಸಿದ್ದಾರೆ. 60 ಸಾವಿರ ಮೌಲ್ಯ ಚಿನ್ನದ ಸರವನ್ನು ಲೂಟಿ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಮೇರಮಜಲು ಸಂಕೇತ್ ಶೆಟ್ಟಿ ನೀಡಿದ ದೂರಿನಲ್ಲಿ 50 ಮಂದಿ ದುಷ್ಕರ್ಮಿಗಳ ಗುಂಪು ತನ್ನ ಮೇಲೆಮತ್ತು ಚರಣ್ ಮೇಲೆ ಹಲ್ಲೆ ನಡೆಸಿದೆ. ರಿಕ್ಷಾವನ್ನು ಗುದ್ದಿ ಹಾಳು ಮಾಡಿದ್ದಾರೆ. ತನ್ನ ಬಳಿ ಇದ್ದ 2 ಸಾವಿರ ವನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರೂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲ್ಲೂರು ಬಳಿ ಸೋಮವಾರ ರಾತ್ರಿ ಅಂತಿಮ ಸಂಸ್ಕಾರಕ್ಕೆಂದು ಬಂದವರು ಬೈಕ್ ಪಾರ್ಕ್ ಮಾಡಿದ್ದರು. ಈ ಬೈಕ್ ಚಕ್ರದ ಗಾಳಿ ತೆಗೆದು, ಬೈಕ್ ತುಂಬಾ ಗೀರಿ ಹಾನಿ ಮಾಡಿದ್ದರು. ಇದನ್ನು ಪ್ರಶ್ನಿಸಿದ ವೇಳೆ ಒಂದೇ ಸಮುದಾಯಕ್ಕೆ ಸೇರಿದ 50ಕ್ಕೂ ಹೆಚ್ಚು ಮಂದಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಕುಂಞಪ್ಪ ಎಂಬವರ ಮನೆಗೆ ನುಗ್ಗಿ ವೃದ್ಧರ ಮೇಲೆ, ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದಾರೆ. ಆದರೆ ಪೊಲೀಸರು ಇದುವರೆಗೆ ಯಾರನ್ನು ಬಂಧಿಸಿಲ್ಲ. ಮಲ್ಲೂರು ಬಳಿ ಇತರ ರಿಕ್ಷಾಗಳಿಗೂ ಹಾನಿ ಮಾಡಲಾಗಿದೆ.
ರಿಕ್ಷಾ ಮುಷ್ಕರ: ಮಲ್ಲೂರು ರಿಕ್ಷಾ ತಂಗುದಾಣದಲ್ಲಿ ಮಂಗಳವಾರ ಬೆಳಗ್ಗೆ ರಿಕ್ಷಾ ಚಾಲಕರು ಘಟನೆ ಖಂಡಿಸಿ ಮುಷ್ಕರ ಮಾಡಿದ್ದಾರೆ. ವಿನಾ ಕಾರಣ ಹಲ್ಲೆ ನಡೆಸಿದ ದುಷ್ಕರ್ಮಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.