ನ. 1, 2ರಂದು ಕಾಂತಾವರ ಉತ್ಸವ
ಕಾಂತಾವರ: ಕಾಂತಾವರ ಕನ್ನಡ ಸಂಘ, ಮೊಗಸಾಲೆ ಪ್ರತಿಷ್ಠಾನ, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್ ಲಿಮಿಟೆಡ್ ವತಿಯಿಂದ ಕಾಂತಾವರ ಉತ್ಸವ- 2013 ನ. 1 ಮತ್ತು 2ರಂದು ಇಲ್ಲಿನ ರಥಬೀದಿಯಲ್ಲಿರುವ ಪಂಪ ಮಹಾಕವಿ ಸಭಾಭವನ, ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ನ. 1ರಂದು ಮಧ್ಯಾಹ್ನ 1.30ಕ್ಕೆ ಹಿರಿಯ ಸಾಹಿತಿ ಡಾ.ಡಿ.ಕೆ. ಚೌಟ ಉದ್ಘಾಟಿಸಿ, ಬೆಳಗೋಡು ರಮೇಶ್ ಭಟ್ ರಚಿಸಿದ 'ಮೊಗಸಾಲೆಯ ಮುಖಾಂತರ' ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು, ಸಿ.ಕೆ. ಪಡಿವಾಳ್ ಉಪಸ್ಥಿತರಿರುವರು.
ನಂತರ ಸಿ.ಎನ್. ಮಾಧವ ಭಟ್ರಿಂದ ವೇಣುವಾದನ ಕಛೇರಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಅಪರಾಹ್ನ 3.30ರಿಂದ ಮೊಗಸಾಲೆ ಪ್ರತಿಷ್ಠಾನದ 70ರ ನೆನಪಿಗೆ 7 ಮಂದಿಗೆ ಕಾಂತಾವರ ಪುರಸ್ಕಾರವನ್ನು ನೀಡಿ, ಗೌರವಿಸಲಾಗುತ್ತದೆ. ಕೆ.ವಿ. ಅಕ್ಷರ (ರಂಗಭೂಮಿ), ಲಕ್ಷ್ಮೀಶ ತೋಳ್ಪಾಡಿ (ಚಿಂತನೆ ಸಾಹಿತ್ಯ), ಡಾ. ಪಾದೇಕಲ್ಲು ವಿಷ್ಣುಭಟ್ (ಗ್ರಂಥ ಸಂಪಾದನೆ), ಡಾ.ಎಸ್.ಪಿ. ಪದ್ಮಪ್ರಸಾದ್ (ಜಾನಪದ), ಸಿ.ಎನ್. ಮಾಧವ ಭಟ್ಟ (ಸಂಗೀತ), ಉಮಾಕುಲಕರ್ಣಿ (ಅನುವಾದ ಸಾಹಿತ್ಯ), ರಾಜೀವಲೋಚನ (ಪುಸ್ತಕ ಪರಿಚಾರಿಕೆ) ಅವರಿಗೆ ಕಾಂತಾವರ ಪುರಸ್ಕಾರವನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ನೀಡಲಿದ್ದು, ಬೆಳಗೋಡು ರಮೇಶ್ ಭಟ್ ಅಭಿನಂದಿಸಲಿದ್ದಾರೆ.
ನ. 2ರಂದು ಮಧ್ಯಾಹ್ನ 2ರಿಂದ ಪ್ರಮೋದ್ ವಾಣಿಶ್ರೀ ಸಪ್ರೆ ದಂಪತಿಯಿಂದ ಸುಗಮ ಸಂಗೀತ, ಅಪರಾಹ್ನ 3.30ರಿಂದ ಸಂಘದ 'ನಾಡಿಗೆ ನಮಸ್ಕಾರ' ಗ್ರಂಥಮಾಲೆಯ 12 ಸಾಧಕರ ಕುರಿತಾದ ಪುಸ್ತಕಗಳನ್ನು ಮಾಣಿಪಾಲ ಭಾರತೀಯ ವಿಕಾಸ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ. ಉಡುಪ ಲೋಕಾರ್ಪಣೆಗೊಳಿಸಲಿದ್ದಾರೆ. ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರದ ಅತಿಥಿ ಪ್ರಾಧ್ಯಾಪಕ ಡಾ.ಎಚ್.ಎಸ್. ಮಾಧವ ರಾವ್ ಅಧ್ಯಕ್ಷತೆ ವಹಿಸಿ, ಕೃತಿಕಾರರನ್ನು ಗೌರವಿಸುವರು.
ಕಾಂತಾವರ ಬಾರಾಡಿಯ ಪ್ರಗತಿಪರ ಕೃಷಿಕ, ಉದ್ಯಮಿ ವೆಂಕಟೇಶ ಮಯ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕಾಂತಾವರ ಸರೋಜಿನಿ ವಿ. ನಾಗಪ್ಪಯ್ಯ, ಸುಗಮ ಸಂಗೀತ ನಿರ್ದೇಶಕ, ಗಾಯಕ ಕಾಂತಾವರ ಪ್ರಮೋದ ಸಪ್ರೆ ಅವರನ್ನು ಪಣಂಬೂರು ಎಂ.ಸಿ.ಎಫ್. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಾಂತಾವರ ಪ್ರಭಾಕರ ರಾವ್ ಸನ್ಮಾನಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

