ಇಂದು ಶ್ರದ್ಧಾಂಜಲಿ
ಮಂಗಳೂರು: ಪೆರ್ಲ ಶ್ರೀಕೃಷ್ಣ ಭಟ್ಟರಿಗೆ ಕಲ್ಕೂರ ಪ್ರತಿಷ್ಠಾನ ಆಶ್ರಯದಲ್ಲಿ ಸೆ.3 ಮಂಗಳವಾರ ಸಂಜೆ 5 ಗಂಟೆಗೆ ಕದ್ರಿ ಮಲ್ಲಿಕಟ್ಟೆಯ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಪೆರ್ಲ ಪಂಡಿತರ ಅಭಿಮಾನಿಗಳೆಲ್ಲರೂ ಆಗಮಿಸುವಂತೆ ಪ್ರತಿಷ್ಠಾನ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ವಿನಂತಿಸಿದ್ದಾರೆ.
ಪ್ರಬುದ್ಧ ಲೇಖಕ
ಪೆರ್ಲ ಕೃಷ್ಣ ಭಟ್ಟರು ಪ್ರಬುದ್ಧ ಲೇಖಕರೂ ಹೌದು. ಕಿರಾತಾರ್ಜುನೀಯ (ಅನುವಾದ), ಪಾದುಕಾ ಪ್ರದಾನ (ನಾಟಕ), ತಾಳಮದ್ದಳೆ (ಪ್ರಹಸನ), ಭಗವಾನ್ ಪರಶುರಾಮ (ಅನುವಾದ), ಜಾತ್ರೆ ಮತ್ತು ಇತರ ಕಥೆಗಳು(ಅನುವಾದ), ಭಗವಾನ್ ಬುದ್ಧ(ಜೀವನ ಚರಿತ್ರೆ), ಮಹಾಭಾರತ ಉಪಖ್ಯಾನಗಳು (ಕಥಾ ಸಂಕಲನ), ಕಲಾ ತಪಸ್ವಿ (ಸಂಪಾದಿತ ಸಂಸ್ಕರಣಾ ಗ್ರಂಥ), ಮಧೂರು ಶ್ರೀ ಸಿದ್ಧಿವಿನಾಯಕ ಸುಪ್ರಭಾತಂ (ಸಂಸ್ಕೃತ), ಶರವು ಮಹಾಗಣಪತಿ ಸುಪ್ರಭಾತ(ಕನ್ನಡ), ಮಂಜುನಾಥೇಶ್ವರ ಸುಪ್ರಭಾತಂ (ಸಂಸ್ಕೃತ), ಋಗ್ವೇದೀಯ ನಿತ್ಯಕರ್ಮ ವಿಧಿ (ಮೂಲ ಸಂಸ್ಕೃತ-ಕನ್ನಡ ಅನುವಾದ ಸಹಿತ), ಸತ್ಯನಾರಾಯಣ ಪೂಜಾ ವಿಧಿ (ಸಂಪಾದಿತ ಕನ್ನಡ ಅರ್ಥವಿವರ ಸಹಿತ), ಸಾರ್ಥ ಶೋಡಷ ಸಂಸ್ಕಾರ ರತ್ನಮಾಲಾ (ಮೂಲ ಸಂಸ್ಕೃತ ಹಾಗೂ ಕನ್ನಡ ಅರ್ಥಸಹಿತ) ಇವರ ಕೃತಿಗಳು. ಕಿರಾತಾರ್ಜುನೀಯ ಕಥೆ, ಪಾದುಕಾ ಪ್ರದಾನ, ಭಗವಾನ್ ಬುದ್ಧ, ಮಹಾಭಾರತ ಉಪಖ್ಯಾನಗಳು, ಜಾತ್ರೆ ಮತ್ತು ಇತರ ಕಥೆಗಳು ಕೇರಳ ಸರ್ಕಾರದಿಂದ ಪಠ್ಯ ಪುಸ್ತಕಕ್ಕಾಗಿ ಆಯ್ಕೆಯಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

