ದಕ್ಷಿಣ ಕನ್ನಡ

ಇಂದು ರಾತ್ರಿ-ಹಗಲು ಧರಣಿ

Published On :

ಮಂಗಳೂರು: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್‌ಐ) ವತಿಯಿಂದ ಸೆ. 6 ರಂದು ಬೆಳಗ್ಗೆ 10 ರಿಂದ ಸೆ. 7ರ ಬೆಳಗ್ಗೆ 10ರವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪಂಜಿಮೊಗರು ಜೋಡಿಕೊಲೆ ಸಿಬಿಐ ತನಿಖೆಗೆ ಆಗ್ರಹಿಸಿ ಹಗಲು ರಾತ್ರಿ ಪ್ರತಿಭಟನೆ ಧರಣಿ ನಡೆಯಲಿದೆ. ಪಂಜಿಮೊಗರಿನ ನಿವಾಸಿ ರಝಿಯಾ ಮತ್ತು 8 ವರ್ಷದ ಮಗಳು ಫಾತಿಮಾ ಝುಹಾಳ ಹತ್ಯೆ ನಡೆದು 2 ವರ್ಷ ಕಳೆದಿದೆ. ಆರಂಭದಲ್ಲಿ ಪ್ರಕರಣವನ್ನು ಭೇದಿಸಲು ಸ್ಥಳೀಯ ಪೊಲೀಸರು ವಿಫಲರಾದಾಗ ಡಿವೈಎಫ್‌ಐ ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿತ್ತು. ಆದರೆ 2 ವರ್ಷದ ನಂತರ ಪ್ರಕರಣ ಭೇದಿಸಲು ಆರೋಪಿಯನ್ನು ಬಂಧಿಸಲು ಸಿಐಡಿಗೆ ಸಾಧ್ಯವಿಲ್ಲ ಎಂಬ ಸಾರ್ವತ್ರಿಕ ಭಾವನೆ ಉಂಟಾಗಿದ್ದು, ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಡಿವೈಎಫ್‌ಐ ಪಂಜಿಮೊಗರು ಘಟಕದ ಕಾರ್ಯದರ್ಶಿ ಇಬ್ರಾಹಿಂ ಕಲೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.