ದಕ್ಷಿಣ ಕನ್ನಡ

ಮಂಗಳೂರು: ತಂಪೆರೆದ ಮಳೆ

Published On :

ಮಂಗಳೂರು: ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ಮಳೆ, ಶುಕ್ರವಾರ ಸಂಜೆ ನಗರದಲ್ಲಿ ಸುರಿದಿದೆ. ಸಂಜೆ ವೇಳೆ ಮೋಡ ಕವಿದ ವಾತಾವರಣವಿತ್ತು.
ಸುಡು ಬಿಸಿಲಿನಿಂದ ಕಂಗಾಲಾಗಿದ್ದ ಜನತೆ ಸಂಜೆ ಸುರಿದ ಮಳೆಯಿಂದ ಖುಷಿಗೊಂಡರು. ಛತ್ರಿ ಮರೆತು ಬಂದ ಜನ ಮರ ಮತ್ತು ಅಂಗಡಿಯ ಬದಿಯನ್ನು ಆಶ್ರಯಿಸಿದರೆ, ವಿದ್ಯಾರ್ಥಿಗಳು, ಯುವಕರು ತುಂತುರು ಮಳೆಗೆ ನೆನೆದು ಮೈ ತಂಪಾಗಿಸಿದರು.
ಅಪಘಾತ: ಕೆಎಸ್‌ರಾವ್ ರಸ್ತೆಯಲ್ಲಿ  ಎಸ್‌ಸಿಡಿಸಿಸಿ ಬ್ಯಾಂಕ್‌ನ ಮುಂಭಾಗದ ತಿರುವಿನಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸಹಸವಾರರಿಗೆ ಸಣ್ಣಪುಟ್ಟ ತರಚು ಗಾಯಗಳಾಗಿದೆ.
ಇಲ್ಲಿ ವಿದ್ಯುತ್ ಕಂಬವನ್ನು ಮಧ್ಯಭಾಗದಲ್ಲಿ ಹಾಗೆಯೇ ಬಿಟ್ಟು ರಸ್ತೆಬದಿಗೆ ಫುಟ್‌ಪಾತ್ ನಿರ್ಮಿಸಲಾಗಿದೆ.
ಇದರ ಪರಿಣಾಮ ಈ ಭಾಗದಲ್ಲಿ ರಸ್ತೆ ಇಕ್ಕಟ್ಟಾಗಿದ್ದು, ಸಂಚರಿಸುವ ವಾಹನಗಳು ಪರದಾಡುವಂತಾಗಿದೆ. ಕೋರ್ಟ್ ರಸ್ತೆಯಿಂದ, ಪಿವಿಎಸ್‌ನಿಂದ ಬರುವ ರಿಕ್ಷಾ, ದ್ವಿಚಕ್ರ ಈ ಭಾಗದಲ್ಲಿ ಸವಾರರು ತಬ್ಬಿಬ್ಬಾಗಿ ಅನೇಕ ಅಪಘಾತ ನಡೆದಿದೆ.
ಈ ಸ್ಥಳದಲ್ಲಿ ದ್ವಿಚಕ್ರ ವಾಹನ ಹೊರತು ಪಡಿಸಿದರೆ ಉಳಿದ ಕಾರು, ರಿಕ್ಷಾ, ಲಾರಿ ವಾಹನಗಳು ಒಂದೊಂದಾಗಿ ಸರತಿ ಸಾಲಿನಲ್ಲಿ ಸಾಗಬೇಕಾಗುತ್ತದೆ. ಅಲ್ಲದೆ ಇತ್ತೀಚೆಗಷ್ಟೆ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಫುಟ್‌ಪಾತ್ ನಿರ್ಮಿಸಲಾಗಿದೆ. ನಗರದ ಮಧ್ಯಭಾಗದಲ್ಲಿ ಆಗಿರುವ ಲೋಪವನ್ನು ನೋಡಿಯೂ ನೋಡದಂತೆ ಪಾಲಿಕೆ ಕಣ್ಣುಚ್ಚಿ ಕುಳಿತಿರುವುದು ವಿಪರ್ಯಾಸ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.