ಹಲೋ ಬಾಂಬ್ಹೆ? ರಾಂಗ್ ನಂಬರ್!
ಮಂಗಳೂರು: ಹಲೋ ಬಾಂಬ್ಹೇ? ಇನ್ನೊಂದು ಕಡೆಯಿಂದ ನೊ, ಇನ್ಫೋಸಿಸ್. ಅತ್ತ ಕಡೆಯಿಂದ ಫೋನ್ ಕಟ್!
ಕೆಲವೇ ಕ್ಷಣಗಳಲ್ಲಿ ಕೋಟ್ಟಾರ ಇನ್ಫೋಸಿಸ್ ಎಂಜಿನಿಯರ್, ಉದ್ಯೋಗಿಗಳು ಎದ್ದೆನೋ, ಬಿದ್ದೆನೋ ಎಂದು ಕಚೇರಿಯಿಂದ ಹೊರಗೆ ಓಡಿ ಬಂದಿದ್ದಾರೆ. ಇನ್ಫೋಸಿಸ್ನಲ್ಲಿ ಬಾಂಬ್ ಇಡಲಾಗಿದೆ ಎಂಬ ಕರೆ ಬಂದ ವಿಚಾರ ಪೊಲೀಸರಿಗೂ ಮುಟ್ಟಿತ್ತು, ಅವರೂ ನಾಗಾಲೋಟದಲ್ಲಿ ಓಡಿ ಬಂದರು. ಎಲ್ಲೆಡೆಯಿಂದ ಪತ್ರಕರ್ತರೂ ಓಡೋಡಿ ಬಂದರು. ಸುದ್ದಿ ವಾಹಿನಿಗಳಲ್ಲೂ ಇದೇ ಸತತ ಬ್ರೇಕಿಂಗ್ ಸುದ್ದಿ.
ಅಸಲಿಗೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ಕೇರಳ ಭಾಷೆ ಉಚ್ಛಾರ ಶೈಲಿ! ಕೇರಳ ಮಹಿಳೆಯೊಬ್ಬರು ಮಾಡಿದ ರಾಂಗ್ ನಂಬರ್ ಕರೆ ಇನ್ಫೋಸಿಸ್ ಸಂಸ್ಥೆಗೆ ಹೋಗಿದ್ದು, ಅಲ್ಲಿ ಸಿಬ್ಬಂದಿ ಉಚ್ಛಾರ ತಪ್ಪಾಗಿ ಅರ್ಥ ಮಾಡಿಕೊಂಡಿದ್ದು ಇದಕ್ಕೆ ಕಾರಣ!
ಜೈಲ್ ರಸ್ತೆಯ ಕೋಟಿ ಪ್ರಸಾದ್ ಆಳ್ವ ಎಂಬವರ ಮನೆಯ ಕೆಲಸದ ಮಹಿಳೆ (ಕೇರಳ ಮೂಲದವರು) ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಮುಂಬಯಿಯ ಸಂಬಂಧಿಕರಿಗೆ ಕರೆ ಮಾಡಲು ಡಯಲ್ ಮಾಡಿದ್ದು ತಪ್ಪಾಗಿ ಇನ್ಫೋಸಿಸ್ ಕಚೇರಿಗೆ ಹೋಗಿತ್ತು. ಮಹಿಳೆ ಬಾಂಬೇ (ಬಾಂಬೆಯಾ?) ಎಂದು ಕೇಳಿದ್ದರು. ಆದರೆ ಹಿಂದಿಯಲ್ಲಿ ಬಾಂಬ್ ಹೈ (ಬಾಂಬ್ ಇದೆ) ಎಂದು ಅರ್ಥ ಮಾಡಿಕೊಂಡ ಕಾಲ್ಡೆಸ್ಕ್ ಸಿಬ್ಬಂದಿ ಹೈ ಅಲರ್ಟ್ ಘೋಷಿಸಿದರು.
ಬಾಂಬ್ ಇದೆ ಎಂಬ ಕರೆ ಬಂದ ಬಗ್ಗೆ ಪೊಲೀಸ್ ಕಮಿಷನರ್ ಮನೀಷ್ ಕರ್ಬೀಕರ್ ಕೂಡಾ ಮಾಧ್ಯಗಳಿಗೆ ದೃಢೀಕರಿಸಿದರು. ಉರ್ವ ಪೊಲೀಸ್ ತಂಡ, ಎಸಿಪಿ ಕವಿತಾ ನೇತೃತ್ವದ ತಂಡ, ಪೊಲೀಸ್ ಶ್ವಾನದಳ ಎಲ್ಲವೂ ಇನ್ಫೋಸಿಸ್ ಸುತ್ತುವರಿದರು. ಅಂತರ್ಜಾಲಗಳಲ್ಲಿ ಇನ್ಫೋಸಿಸ್ಗೆ ದಾಳಿ ಎಂಬರ್ಥದ ಸಂದೇಶಗಳೂ ರವಾನೆಯಾದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

