ಸುದ್ದಿ ಸಂಕ್ಷೇಪ
ಕಿನ್ನಿಗೋಳಿ ಸ್ಮಶಾನ ಬಳಿ ಚಿರತೆ ಪತ್ತೆ
ಮೂಲ್ಕಿ: ಕಿನ್ನಿಗೋಳಿಯ ಸ್ಮಶಾನದ ಬಳಿ ಬುಧವಾರ ರಾತ್ರಿ ಯಶೋಧರ ಶೆಟ್ಟಿ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಚಿರತೆಯೊಂದು ಕಾಣಿಸಿದ್ದು, ಇವರನ್ನು ನೋಡಿ ಅಲ್ಲಿಂದ ಓಡಿ ಹೋಗಿದೆ. ಕಳೆದ ಅಕ್ಟೋಬರ್‌ನಿಂದ ಕಿನ್ನಿಗೋಳಿ ಸುತ್ತಮುತ್ತಲಿನ ಪರಿಸರದಲ್ಲಿ ಈ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿದೆ. ಆದರೆ ಅರಣ್ಯ ಇಲಾಖೆ ಈವರೆಗೂ ಇದನ್ನು ಹಿಡಿಯುವ ಪ್ರಯತ್ನ ಮಾಡಿಲ.್ಲ
ಇಂದು ಸಭಾಭವನ ಉದ್ಘಾಟನೆ
ಮಂಗಳೂರು: ಕಿನ್ಯ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಯುವಕ ಮಂಡಲ ವತಿಯಿಂದ ಏ. 3 ಮತ್ತು 4 ರಂದು ನೂತನ ಸಭಾಭವನ ಉದ್ಘಾಟನೆಗೊಳ್ಳಲಿದೆ. ಕಿನ್ಯ ದುರ್ಗಾಪುರದಲ್ಲಿ ಕಳೆದ ವರ್ಷ ಸಾರ್ವಜನಿ ಶ್ರೀ ಶ್ರೀನಿವಾಸ ಕಲ್ಯಾನೋತ್ಸವ ನಡೆಸಿದ ಜಾಗದಲ್ಲಿ ಸಭಾಭವನ ನಿರ್ಮಿಸಿದ್ದು, ಮೊದಲ ಹಂತದ ಕಟ್ಟಡವನ್ನು ಏ. 4 ರಂದು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಮಾಲಾಡಿ ಉದ್ಘಾಟಿಸುವರು ಎಂದು ಕಟ್ಟಡ ನಿರ್ಮಾಣ ಸಮಿತಿ ಗೌರವ ಸಲಹೆಗಾರ ಕೃಷ್ಣ ಶಿವಕೃಪಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರ್ಯಾಲಿಗೆ ಜನ ಬರಲು
ನಿರುತ್ಸಾಹ: ಬಿಜೆಪಿ
ಮಂಗಳೂರು: ರಾಹುಲ್ ಗಾಂಧಿ ರ್ಯಾಲಿಗೆ ಪ್ರತಿ ಚರ್ಚ್‌ಗೆ 4 ವಾಹನ ಗೊತ್ತುಪಡಿಸಿದ್ದ ಕಾಂಗ್ರೆಸ್ ಜನರ ನಿರುತ್ಸಾಹ ಕಂಡು ಒಂದು ವಾಹನ ನಿಗದಿ ಮಾಡಿದೆ ಎಂದು ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಜೋಯಲ್ ಮೆಂಡೋನ್ಸ ಆರೋಪಿಸಿದ್ದಾರೆ. ಬಿಷಪರ ಹೆಸರು ದುರ್ಬಳಕೆ ಮಾಡಿ, ಚರ್ಚ್ ಪಾಲನೆ ಸಮಿತಿ ಮತ್ತು ಗುರುಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲ ಕಾಂಗ್ರೆಸ್ ನಾಯಕರು ಧಾರ್ಮಿಕ ಸ್ಥಳಗಳನ್ನು ವೈಯಕ್ತಿಕ ಸ್ವಾರ್ಥಕ್ಕೆ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಸೋಹನ್ ಸಾವು: ನ್ಯಾಯಾಂಗ ತನಿಖೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ 2013 ಅ. 25 ರಂದು ಮೃತಪಟ್ಟ ಎಚ್.ಎಸ್. ಸೋಹನ್ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಲು ಉಪವಿಭಾಗ ದಂಡಾಧಿಕಾರಿ ತನಿಖಾಧಿಕಾರಿಯನ್ನು ನೇಮಿಸಿದ್ದಾರೆ. ತನಿಖಾಧಿಕಾರಿಯವರು ಸಿಆರ್‌ಪಿಸಿ ಕಲಂ 176 ರನ್ವಯ ವಿಚಾರಣೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ನ್ಯಾಯಾಂಗ ತನಿಖೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿಯವರ ಸಹಕಾರ ಪಡೆಯಬಹುದೆಂದು ದಂಡಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಪಾದಿತರಿಂದ ಮುಚ್ಚಳಿಕೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸಿಆರ್‌ಪಿಸಿ ಕಲಂ 107 ರಂತೆ ಒಟ್ಟು 432 ಪ್ರಕರಣ ದಾಖಲಿಸ್ಪಟ್ಟಿದ್ದು, ಎಲ್ಲ ಪ್ರಕರಣಗಳು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ತನಿಖೆ ಪ್ರಗತಿಯಲ್ಲಿದೆ. ಈ ಪೈಕಿ 355 ಪ್ರಕರಣಗಳಲ್ಲಿ ಆಪಾದಿತರಿಂದ ಮಧ್ಯಂತರ ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ. ಸಿಆರ್‌ಪಿಸಿ ಕಲಂ 109ರಂತೆ ಒಟ್ಟು 12 ಪ್ರಕರಣಗಳು ದಾಖಲಿಸ್ಪಟ್ಟಿದ್ದು, ಎಲ್ಲ ಪ್ರಕರಣ ತನಿಖೆ ಹಂತದಲ್ಲಿದೆ. ಈ ಪೈಕಿ 16 ಆಪಾದಿತರಿಂದ ಮಧ್ಯಂತರ ಮುಚ್ಚಳಿಕೆ ಪಡೆಯಲಾಗಿದೆ. ಸಿಆರ್‌ಪಿಸಿ ಕಲಂ 110 ರಂತೆ ಒಟ್ಟು 408 ಪ್ರಕರಣಗಳು ದಾಖಲಿಸಿದ್ದು, ಎಲ್ಲ ಪ್ರಕರಣ ದಂಡಾಧಿಕಾರಿಯವರ ಬಳಿ ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

