ದಕ್ಷಿಣ ಕನ್ನಡ

ಮತಗಟ್ಟೆಗೆ ಹೋಗಲು ವಾಹನ

Published On :

ಮಂಗಳೂರು: ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಏ. 17 ರಂದು ಗ್ರಾಮಾಂತರ ಪ್ರದೇಶದ 7 ವಿಧಾನಸಭೆ ಕ್ಷೇತ್ರಗಳ 203 ಗ್ರಾ.ಪಂ. ವ್ಯಾಪ್ತಿಯ ಮತಗಟ್ಟೆ ಪ್ರದೇಶಗಳಲ್ಲಿ ದೂರ ಇರುವ ಸ್ಥಳಗಳಿಗೆ ತೆರಳಲು ಮತದಾರರಿಗೆ ಸಾಮಾನ್ಯ ದರದಲ್ಲಿ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣಾಧಿಕಾರಿಗಳಿಗೆ ಒದಗಿಸಲಾದ ಬಸ್, ಮ್ಯಾಕ್ಸಿಕ್ಯಾಬ್, ಮೆಟಾಡೋರ್, ಮಿನಿಬಸ್, ಜೀಪ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಳಗ್ಗೆ 7 ಗಂಟೆಗೆಯಿಂದ ಸಂಜೆ 3 ಗಂಟೆಯವರೆಗೆ ಸದುಪಯೋಗಪಡಿಸಿಕೊಳ್ಳಬಹುದು. ಬೆಳ್ತಂಗಡಿಯ 43 ಗ್ರಾ.ಪಂ.ಗಳ 238 ಮತಗಟ್ಟೆಗೆ 20 ಬಸ್, 8 ಮ್ಯಾಕ್ಸಿಕ್ಯಾಬ್, 7 ಜೀಪ್ ವ್ಯವಸ್ಥೆ ಮಾಡಲಾಗಿದೆ. ಮೂಡುಬಿದಿರೆ ಕ್ಷೇತ್ರದ 27 ಗ್ರಾ.ಪಂ.ಗಳ 207 ಮತಗಟ್ಟೆಗಳಿಗೆ 31 ಬಸ್, 4 ಮ್ಯಾಕ್ಸಿಕ್ಯಾಬ್, 3 ಮೆಟಾಡೋರ್, 12 ಜೀಪ್, ಮಂಗಳೂರು ನಗರ ಉತ್ತರ ಕ್ಷೇತ್ರದ 10 ಗ್ರಾ.ಪಂ.ಗಳ 226 ಮತಗಟ್ಟೆಗಳಿಗೆ 34ಬಸ್, 15 ಮ್ಯಾಕ್ಸಿಕ್ಯಾಬ್, 6 ಮಿನಿಬಸ್, 2 ಜೀಪ್, ಮಂಗಳೂರು ಕ್ಷೇತ್ರದ 21 ಗ್ರಾ.ಪಂ.ಗಳ 197 ಮತಗಟ್ಟೆಗೆ 30 ಬಸ್, 16 ಮ್ಯಾಕ್ಸಿಕ್ಯಾಬ್, 1 ಮಿನಿಬಸ್, ಸುಳ್ಯ ಕ್ಷೇತ್ರದ 45 ಗ್ರಾ.ಪಂ.ಗಳ 225 ಮತಗಟ್ಟೆಗಳಿಗೆ 24 ಬಸ್, 20 ಮಿನಿಬಸ್, 32 ಜೀಪ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಒಟ್ಟು 203 ಗ್ರಾ.ಪಂ.ಗಳ 1547 ಮತಗಟ್ಟೆಗೆ 177 ಬಸ್, 64 ಮ್ಯಾಕ್ಸಿಕ್ಯಾಬ್, 30 ಮಿನಿಬಸ್, 72 ಜೀಪುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ತುಳಸಿ ಮದ್ದಿನೇನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.