ಬಾಲಕಿಗೆ ಸಮಿತಿ ನೆರವು
ಮಂಗಳೂರು: ಬೆಳ್ತಂಗಡಿಯಲ್ಲಿ ಮಲತಂದೆ ಹಾಗೂ ಹೆತ್ತಾಕೆಯಿಂದನೇ ಚಿತ್ರಹಿಂಸೆಗೆ ಗುರಿಯಾದ ಬಾಲಕಿಯನ್ನು ಪೋಷಿಸಲು ಮಂಗಳೂರಿನ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಂದಿದೆ.
ಬಾಲಕಿಯ ಅಂಗಾಂಗಕ್ಕೆ ಮಲತಂದೆ ಶಾಫಿ ಸಿಗರೇಟಿನಿಂದ ಚುಚ್ಚಿ, ಆಯುಧದಿಂದ ಇರಿದಿದ್ದನು. ಇದಕ್ಕೆ ಬಾಲಕಿ ತಾಯಿಯೂ ಸಹಕರಿಸಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತಾಯಿ ಫೌಜಿಯಾಳನ್ನು ಪೊಲೀಸರು ಬಂಧಿಸಿದ್ದರು. ಆಕೆ ಈಗ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಈಗ ಆ ಬಾಲಕಿಯನ್ನು ಪೋಷಿಸಲು ಮಕ್ಕಳ ಕಲ್ಯಾಣ ಸಮಿತಿ ಮಂದೆ ಬಂದಿದೆ ಎಂದು ಸಮಿತಿ ಅಧ್ಯಕ್ಷೆ ಆಶಾ ನಾಯಕ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಸಿಲಿಂಡರ್ ಸ್ಫೋಟ: 2 ಸಾವು
ಬಿಜಾಪುರ: ಇಲ್ಲಿಗೆ ಸಮೀಪದ ರಂಭಾಪುರ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬಾಲಕಿ ಸೇರಿದಂತೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರನ್ನು ಸುರೇಶ ಸಿದ್ದಪ್ಪ ಗಂಗಶೆಟ್ಟಿ(55) ಹಾಗೂ ಅನಿತಾ ಹಿರೇಮಠ(10) ಎಂದು ಗುರುತಿಸಲಾಗಿದೆ. ಸುರೇಶ ಕುಟುಂಬದವರು ರಾತ್ರಿ ಮಾಳಿಗೆ ಮೇಲೆ ಮಲಗಿದ್ದರು. ಗ್ಯಾಸ್ ವಾಸನೆ ಬರುತ್ತಿರುವುದನ್ನು ತಿಳಿದ ಸುರೇಶ, ಕೆಳಗೆ ಇಳಿದು ಮನೆಯೊಳಗೊಗಿ ಲೈಟ್ ಆನ್ ಮಾಡಿ ನೋಡಲು ಹೋಗುತ್ತಿದ್ದಂತೆಯೇ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆ ಕುಸಿದು ಬಿತ್ತು. ಸುರೇಶ ಅಲ್ಲಿಯೇ ಮೃತಪಟ್ಟನು. ಸ್ಪೋಟದ ರಭಸಕ್ಕೆ ಎರಡು ಮನೆಗಳು ಜಖಂ ಆಗಿವೆ. ಪಕ್ಕದ ಮನೆಯ ಮಾಳಿಗೆ ಮೇಲೆ ಮಲಗಿದ್ದ ಬಾಲಕಿ ಅನಿತಾ ಎಂಬುವಳಿಗೆ ಕಲ್ಲು ಬಡಿದು ಸಾವನಪ್ಪಿದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

