ಅಪಘಾತ: ಬೈಕ್ ಸವಾರರಿಗೆ ಗಾಯ
ಬೆಳ್ತಂಗಡಿ: ಸನಿಹದ ಲಾಯಿಲ ಜಂಕ್ಷನ್ನಲ್ಲಿ ಸೋಮವಾರ ಟೆಂಪೋ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸಹಸವಾರ ಮಿತ್ತಬಾಗಿಲು ನಿವಾಸಿ ಬಾಬು ಗೌಡ (55) ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿತ್ತಬಾಗಿಲಿನ ಚಂದ್ರಶೇಖರ ಎಂಬವರು ತನ್ನ ಬೈಕ್ನಲ್ಲಿ ಬಾಬು ಗೌಡರನ್ನು ಕುಳ್ಳಿರಿಸಿಕೊಂಡು ಬೆಳ್ತಂಗಡಿ ಕಡೆಯಿಂದ ಉಜಿರೆಯತ್ತ ಹೋಗುತ್ತಿದ್ದಾಗ ಕಿಲ್ಲೂರುನಿಂದ ಬೆಳ್ತಂಗಡಿಗೆ ಬರುತ್ತಿದ್ದ ಟೆಂಪೊ ಬೈಕಿಗೆ ಡಿಕ್ಕಿ ಹೊಡೆದಿದೆ. ಸಹಸವಾರ ಬಾಬು ಗೌಡ ಕಾಲಿಗೆ ಗಂಭೀರ ಗಾಯವಾಗಿದ್ದು, ಸವಾರ ಚಂದ್ರಶೇಖರ ಅವರಿಗೆ ಚಿಕ್ಕಪುಟ್ಟ ಗಾಯವಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಮಾಂಸ ಮಾರಾಟ: ಮೂವರ ಬಂಧನ
ಬೆಳ್ತಂಗಡಿ: ತಾಲೂಕಿನ ಪುತ್ತಿದಲ್ಲಿ ಗೋಮಾಂಸ ಅಕ್ರಮ ಮಾರಾಟ ಮಾಡಲಾಗುತ್ತಿದ್ದು,ಸೋಮವಾರ ಮಂಗಳೂರು ಜಿಲ್ಲಾ ಅಪರಾಧಿದಳ ದಾಳಿ ನಡೆಸಿ ಮೂವರನ್ನು ಬಂಧಿಸಿದೆ. ಪುತ್ತಿಲ ಗ್ರಾಮದ ಕಳೆಂಜ ಬೈಲು ಪಳಿಕೆ ಎಂಬಲ್ಲಿ ತೋಟದಲ್ಲಿ ಈ ಕೃತ್ಯ ನಡೆಸಲಾಗುತ್ತಿತ್ತು. ಸೂಕ್ತ ಮಾಹಿತಿ ತಿಳಿದುಕೊಂಡ ಮಂಗಳೂರು ಜಿಲ್ಲಾ ಅಪರಾಧಿದಳದ ಬಸೀರ್ ಅಹಮ್ಮದ್ ಮತ್ತು ಸಿಬ್ಬಂದಿ ಸೋಮವಾರ ದಾಳಿ ನಡೆಸಿ, 80 ಕೆ.ಜಿ. ಮಾಂಸ ವಶಪಡಿಸಿಕೊಂಡಿದ್ದಾರೆ. ಮಸೀದಿಯಲ್ಲಿ ಹಬ್ಬ ಇರುವುದರಿಂದ ಹಬ್ಬದ ನಿಯಮದ ಪ್ರಕಾರ ಇಡೀ ಊರಿಗೆ ಗೋ ಮಾಂಸ ಹಂಚುವುದು ರೂಢಿ. ಈ ಹಿನ್ನೆಲೆಯಲ್ಲಿ ಗೋ ಸಂಹಾರ ನಡೆಯುತ್ತಿತ್ತು. ಪುಂಜಾಲಕಟ್ಟೆ ಠಾಣೆಯಲ್ಲಿ ಕೇಸು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

